4 ಕಿಲೋಮೀಟರ್ ತಲುಪಲು 45 ನಿಮಿಷ ಬೇಕು!...ಸಿಲಿಕಾನ್ ಸಿಟಿ ಟ್ರಾಫಿಕ್ ಕಷ್ಟ ಬಿಚ್ಚಿಟ್ಟ ಗೂಗಲ್ ಟೆಕ್ಕಿ! Bengaluru Traffic

 Bengaluru Traffic (ಚಿತ್ರ X)
Bengaluru Traffic (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್​ ಸಮಸ್ಯೆ ದಿನದಿಂದ ದಿನಕ್ಕೆ ಹತೋಟಿ ಮೀರುತ್ತಿದೆ
  • ಇಲ್ಲಿನ ಐಟಿ ಕಾರಿಡಾರ್‌ಗಳಲ್ಲಿ ಪ್ರತಿದಿನ ಪ್ರಯಾಣಿಸುವುದು ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ
  • ಬೆಂಗಳೂರಿನ ರಸ್ತೆಗಳಲ್ಲಿ ತಮಗಾಗುತ್ತಿರುವ ಕಠಿಣ ಪ್ರಯಾಣದ ಅನುಭವವನ್ನು ಹಂಚಿಕೊಂಡ ಟೆಕ್ಕಿ
  • ದ್ವಿಚಕ್ರ ವಾಹನದಲ್ಲಿ 4 ಕಿಲೋಮೀಟರ್​ ದೂರವಿರುವ ಪ್ರಯಾಣಕ್ಕೆ 45 ನಿಮಿಷ ಬೇಕಾಗಿದೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್​ (Bengaluru Traffic) ಸಮಸ್ಯೆ ದಿನದಿಂದ ದಿನಕ್ಕೆ ಹತೋಟಿ ಮೀರುತ್ತಿದೆ. ಇಲ್ಲಿನ ಐಟಿ ಕಾರಿಡಾರ್‌ಗಳಲ್ಲಿ ಪ್ರತಿದಿನ ಪ್ರಯಾಣಿಸುವುದು ಸವಾಲಿನ ಕೆಲಸವಾಗಿ ಮಾರ್ಪಟ್ಟಿದೆ. ಇದೀಗ ಜಾಗತಿಕ ತಂತ್ರಜ್ಞಾನ ಸಂಸ್ಥೆ 'ಗೂಗಲ್' ಕಂಪನಿಯ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಬೆಂಗಳೂರಿನ ರಸ್ತೆಗಳಲ್ಲಿ ತಮಗಾಗುತ್ತಿರುವ ಕಠಿಣ ಪ್ರಯಾಣದ ಅನುಭವವನ್ನು ಇನ್‌ಸ್ಟಾಗ್ರಾಮ್ ವೀಡಿಯೊ ಮೂಲಕ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋದಲ್ಲೇನಿದೆ?

ವೈರಲ್​ ಆದ ಕ್ಲಿಪ್​ನಲ್ಲಿ, ವೆಂಕಟೇಶ್ ಡಿ ಎಂಬ ಬಳಕೆದಾರರು ತಮ್ಮ ದ್ವಿಚಕ್ರ ವಾಹನದಲ್ಲಿ 4 ಕಿಲೋಮೀಟರ್​ ದೂರವಿರುವ ಪ್ರಯಾಣಕ್ಕೆ 45 ನಿಮಿಷ ಬೇಕಾಗಿದೆ ಎಂದು ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಸಾಮಾನ್ಯವಾಗಿ ಕೇವಲ 10 ನಿಮಿಷಗಳನ್ನು ತೆಗೆದುಕೊಳ್ಳುವ ಪ್ರಯಾಣ ಇದು. ಆದರೆ, ನಗರೀಕರಣ ಮತ್ತು ಅಭಿವೃದ್ಧಿ ಹೊಂದುತ್ತಿರುವ ಐಟಿ ಉದ್ಯಮದಿಂದಾಗಿ ನಗರದ ಜನಸಂಖ್ಯೆ ಹೆಚ್ಚಾಗಿದ್ದರಿಂದ ಮೂಲಸೌಕರ್ಯ ಯೋಜನೆಗಳಲ್ಲಿ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಎಂದು ಹೇಳಿದ್ದಾರೆ.
ನಾನು ನನ್ನ ಕಚೇರಿಯಿಂದ ಸುಮಾರು ನಾಲ್ಕು ಕಿಲೋಮೀಟರ್​ ದೂರದಲ್ಲಿ ವಾಸಿಸುತ್ತಿದ್ದೇನೆ. ಅಲ್ಲಿಗೆ ಹೋಗಲು ಸುಮಾರು 10 ನಿಮಿಷ ಸಾಕು. ಆದರೆ, ಇಂದು ಕಚೇರಿಯನ್ನು ತಲುಪಲು 45 ನಿಮಿಷಗಳು ಬೇಕಾಯಿತು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಆದಾಗ್ಯೂ, ನಗರದ ಕಳಪೆ ಮೂಲಸೌಕರ್ಯ ಮತ್ತು ಹೆಚ್ಚಿನ ತೆರಿಗೆ ಹೊರೆಯ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ ಅವರು, ನಮ್ಮ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ? ನಾನು ನನ್ನ ಸಂಬಳಕ್ಕಿಂತ ಹೆಚ್ಚಿನ ತೆರಿಗೆಗಳನ್ನು ಪಾವತಿಸಿದ ತಿಂಗಳುಗಳಿವೆ. ಇದನ್ನು ನಾನು ಮಾತ್ರ ಅಲ್ಲ ನನ್ನಂತಹ ಲಕ್ಷಾಂತರ ಜನರು ಕೂಡಾ ಅನುಭವಿಸುತ್ತಿದ್ದಾರೆ ಎಂದು ನನಗೆ ಅರಿವಾಗಿದೆ. ಇಂತಹ ಘಟನೆಗಳು ನೆನಪಿಸಿಕೊಂಡರೆ ಕೋಪ ಬರುತ್ತವೆ ಎಂದು ಅವರು ಹೇಳಿದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತದ ಅತಿದೊಡ್ಡ ನಗರಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ದಿನನಿತ್ಯ ಸಂಚಾರ ದಟ್ಟಣೆ ಮತ್ತು ದೀರ್ಘ ಪ್ರಯಾಣದ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಒಬ್ಬ ಬಳಕೆದಾರರು ಜನರು ತುಂಬಾ ತೆರಿಗೆ ಪಾವತಿಸುತ್ತಿದ್ದರೂ ಕಳಪೆ ಮೂಲಸೌಕರ್ಯವನ್ನು ಪಡೆಯುವುದರಿಂದ ನಿರಾಶೆಯಾಗುವುದು ಸಹಜ ಎಂದು ಪ್ರತಿಕ್ರಿಯಿಸಿದ್ದರೆ, ಮತ್ತೊಂದು ಬಳಕೆದಾರ ನಾವು ಪ್ರತಿದಿನ ಪ್ರಯಾಣ ಬೆಳೆಸಲು ಹೆಚ್ಚುವರಿ ಸಮಯವನ್ನು ಪಡೆದುಕೊಳ್ಳುತ್ತಿದ್ದೇವೆ ಎಂದು ಕಾಮೆಂಟ್​ ಮಾಡಿದ್ದಾರೆ.
ಪೀಕ್-ಅವರ್ ಪ್ರಯಾಣಗಳು ಗಂಟೆಗಳನ್ನು ವಿಸ್ತರಿಸಬಹುದು ಜೊತೆಗೆ ಉತ್ಪಾದಕತೆ ಮತ್ತು ಜನಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಮೆಟ್ರೋ ಬಂದರೂ ಕೂಡಾ ನಗರದಲ್ಲಿ ಟ್ರಾಫಿಕ್ ಜಾಮ್​ ಉಂಟಾಗುವುದರಿಂದ ಇದು ಪ್ರತಿನಿತ್ಯ ಓಡಾಡುವ ಜನರು ಸವಾಲುಗಳನ್ನು ಎದುರಿಸಬೇಕಾಗುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net