ಗುರು ಸಾನ್ನಿಧ್ಯದಿಂದ ಸದ್ಭಾವ

ಬಸವಕಲ್ಯಾಣ ತಾಲೂಕಿನ ಹಾರಕೂಡ ಮಠದಲ್ಲಿ ಗುರುವಂದನೆ ನಿಮಿತ್ತ ಆಯೋಜಿಸಿದ್ದ  ಧರ್ಮಸಭೆಯನ್ನು ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಉದ್ಘಾಟಿಸಿದರು. ವೀರಶಟ್ಟಿ ಇಮಡಾಪುರ, ಶಂಕರ ಪೂಜಾರಿ, ಶಶಿಧರ ತಡಕಲ್​, ಪಾಂಡುರಂಗ ಪೂಜಾರಿ, ವಿಠಲ್​ ಹೂಗಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ಚನ್ನವಿರ ಶಿವಾಚಾರ್ಯ ನುಡಿ

ಬಸವಕಲ್ಯಾಣ: ಪರಿಶುದ್ಧ ಪ್ರಯತ್ನ ಹಾಗೂ ಗುರುವಿನ ಅಂತ-ಕರಣದ ಆಶೀರ್ವಾದದಿಂದ ಮನುಷ್ಯ ಆದರ್ಶ ಗ್ರಹಸ್ಥನಾಗಿ ದೇವರು ಮೆಚ್ಚುವ ರೀತಿಯಲ್ಲಿ ಬಾಳಿ ಬದುಕಲು ಸಾಧ್ಯವಾಗುತ್ತದೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ನುಡಿದರು. ಹಾರಕೂಡ ಶ್ರೀಮಠದಲ್ಲಿ ಗುರುವಂದನೆ ನಿಮಿತ್ತ ಸೋಮವಾರ ಆಯೋಜಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯ ದೇಹವೆಂಬ ಚಕ್ಕಡಿ ಧರ್ಮ ಮಾರ್ಗದಲ್ಲಿ ಸಾಗಬೇಕಾದರೆ ಸದ್ಭಾವದ ಕಡಾಣಿ ಅಗತ್ಯವಾಗಿದೆ. ಗುರು ಸಾನಿಧ್ಯದಿಂದ ದೊರೆತ ಸದ್ಭಾವ ಮನುಷ್ಯನನ್ನು ಅರ್ಥಹೀನ ಬದುಕಿನಿಂದ ಪಾರು ಮಾಡುತ್ತದೆ. ಐಹಿಕ ವಿಷಯ ವಾಸನೆಯಿಂದಾಗಿ ಮಾನವ ದುರಾಲೋಚನೆಯ ಮಾಯೆಯಲ್ಲಿ ಸಿಲುಕದಂತೆ ಗುರು ಬೋಧಯ ಸಾರಾಮೃತ ಅವನನ್ನು ರಕ್ಷಿಸುತ್ತದೆ ಎಂದು ಹೇಳಿದರು. ವೀರಶಟ್ಟಿ ಇಮಡಾಪುರ, ಡಾ.ರಾಜಶೇಖರ ಮದರಿ, ಶಂಕರ ಪೂಜಾರಿ, ಶಶಿಧರ ತಡಕಲ್​ ಇದ್ದರು. ಪಾಂಡುರಂಗ ಪೂಜಾರಿ ಸ್ವಾಗತಿಸಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಹಾಗೂ ಶರಣಪ್ಪ ಜಮಾದಾರ ಸಂಗೀತ ಸೇವೆ ಸಲ್ಲಿಸಿದರು. ಪಾಂಡುರಂಗ ಪೂಜಾರಿ ಪರಿವಾರದಿಂದ ಹಾರಕೂಡ ಶ್ರೀಗಳ 1022ನೇ ತುಲಾಭಾರ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net