ಉತ್ತಮ ವ್ಯಕ್ತಿತ್ವಕ್ಕೆ ಒಳ್ಳೆಯ ಆಲೋಚನೆ ಅಗತ್ಯ

ಸಕಲೇಶಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿಲ್‌ಕುಮಾರ್ ಮಾತನಾಡಿದರು. ಡಾ.ನವೀನ್ ಚಂದ್ರಶೆಟ್ಟಿ,  ರೇಖಾ ಸುರೇಶ್, ವಿಜಯಕುಮಾರ್, ಯೋಗೇಶ್ ಇತರರಿದ್ದರು.
ಸಕಲೇಶಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅನಿಲ್‌ಕುಮಾರ್ ಮಾತನಾಡಿದರು. ಡಾ.ನವೀನ್ ಚಂದ್ರಶೆಟ್ಟಿ, ರೇಖಾ ಸುರೇಶ್, ವಿಜಯಕುಮಾರ್, ಯೋಗೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್‌ಕುಮಾರ್
  • ತೇರಪಂಥ ಭವನ
ಸಕಲೇಶಪುರ: ಒಳ್ಳೆಯ ಆಲೋಚನೆ ಹಾಗೂ ಮನಸ್ಸಿನ ನಿಯಂತ್ರಣದಿಂದ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್‌ಕುಮಾರ್ ಹೇಳಿದರು.
ಪಟ್ಟಣದ ತೇರಪಂಥ ಭವನದಲ್ಲಿ ಆಯೋಜಿಸಿದ್ದ 1054 ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು, ಪ್ರಕೃತಿಯಲ್ಲಿ ಪ್ರಾಣಿಗಳು ಸಹಜ ನಿಯಮದಂತೆ ಬದುಕು ನಡೆಸುತ್ತವೆ. ಆದರೆ ಮನುಷ್ಯನಿಗೆ ವಿಶೇಷ ವಿವೇಚನಾ ಶಕ್ತಿ ಇದೆ. ವಿವೇಚನಾ ಶಕ್ತಿ ಪ್ರಾಣಿ ಹಾಗೂ ಮಾನವರನ್ನು ವಿಂಗಡಿಸಲಿದೆ. ತಪ್ಪು-ಸರಿ ಆಲೋಚಿಸುವ ಶಕ್ತಿ ಇರುವ ಮಾನವರೆ ತಪ್ಪುದಾರಿಯಲ್ಲಿ ನಡೆಯುವುದು ಅವರ ವಿವೇಚನಾ ಶಕ್ತಿ ಕುಸಿದಿರುವ ಲಕ್ಷಣವನ್ನು ತೋರುತ್ತದೆ. ಸಜ್ಜನರ ಸಂಘದಿಂದ ಮಾತ್ರ ತಪ್ಪು ದಾರಿಯಿಂದ ಸರಿದಾರಿಗೆ ಮರಳಬಹುದಾಗಿದೆ ಎಂದರು.
ತಪ್ಪು ಮಾಡುತ್ತಿರುವುದು ಅರಿವಾದ ತಕ್ಷಣ ತಮ್ಮ ಆಪ್ತವಲಯವನ್ನು ಬದಲಿಸಿಕೊಳ್ಳುವವರೇ ಜಾಣರು. ದೇವರು ನೀಡಿರುವ ಅತ್ಯಮೂಲ್ಯ ಮಾನವ ಜೀವನವನ್ನು ದುಶ್ಚಟಗಳಿಗೆ ಬಲಿಯಾಗಿ ಹಾಳು ಮಾಡಿಕೊಂಡರೆ ತಮ್ಮ ಬದುಕು ಮಾತ್ರವಲ್ಲದೆ ತಮ್ಮ ಕುಟುಂಬ ಹಾಗೂ ತಮ್ಮ ಭವಿಷ್ಯದ ಕುಡಿಗಳೂ ಸಹ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಡಾ.ನವೀನ್ ಚಂದ್ರಶೆಟ್ಟಿ, ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿ ಅಧಕ್ಷೆ ರೇಖಾ ಸುರೇಶ್, ಉಪಾಧ್ಯಕ್ಷ ವಿಜಯಕುಮಾರ್, ಕೋಶಾಧಿಕಾರಿ ಯೋಗೇಶ್ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net