

ಬೆಂಗಳೂರು :ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಠೇವಣಿದಾರರು, ಸಂತ್ರಸ್ತರು ಹಾಗೂ ಏಜೆಂಟರಿಗೆ ಪರಿಹಾರ ಮತ್ತು ನ್ಯಾಯ ಒದಗಿಸುವ ಉದ್ದೇಶದಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶ ಸರ್ಕಾರ ಮಹತ್ವದ ಕ್ರಮ ಕೈಗೊಂಡಿವೆ.
ಠೇವಣಿದಾರರ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಐವರು ಸದಸ್ಯರ ಸಚಿವರ ಸಮಿತಿ ರಚಿಸಲಾಗಿದ್ದು, ಕರ್ನಾಟಕದಲ್ಲಿರುವ ಅಗ್ರಿಗೋಲ್ಡ್ ಠೇವಣಿದಾರರ ಮೂಲ ಬಾಂಡ್‌ಗಳು ಹಾಗೂ ರಸೀದಿಗಳ ಪರಿಶೀಲನೆ ಮತ್ತು ನೋಂದಣಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ ಸಿಐಡಿ ಡಿಜಿಪಿ ಡಾ.ಪ್ರಣವ್ ಮೊಹಾಂತಿ ಮತ್ತು ಆಂಧ್ರಪ್ರದೇಶದ ಸಿಐಡಿ ವಿಭಾಗದ ಮುಖ್ಯಸ್ಥರು ಒಳಗೊಂಡ ಅಧಿಕಾರಿಗಳ ಸಭೆ ನಡೆಸಿ, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿರುವ ಅಗ್ರಿಗೋಲ್ಡ್ ಸಂತ್ರಸ್ತರು ಹಾಗೂ ಏಜೆಂಟರಿಂದ ದಾಖಲೆಗಳನ್ನು ಸಂಗ್ರಹಿಸುವ ಕುರಿತು ಕಾರ್ಯಯೋಜನೆ ರೂಪಿಸಿದ್ದಾರೆ. ಅದರಂತೆ ರಾಜ್ಯದ ಒಂಬತ್ತು ಸ್ಥಳಗಳಲ್ಲಿ ವಿಶೇಷ ಪರಿಶೀಲನಾ ಕೇಂದ್ರ ಸ್ಥಾಪಿಸಲಾಗಿದ್ದು, ಎರಡು ರಾಜ್ಯದ ಸಿಐಡಿ ಸಹಕಾರದೊಂದಿಗೆ ದಾಖಲೆಗಳ ಪರಿಶೀಲನೆ ಮತ್ತು ನೋಂದಣಿ ಪ್ರಕ್ರಿಯೆ ನಡೆಸಲಿವೆ.
ಠೇವಣಿದಾರರು, ಮೃತ ಠೇವಣಿದಾರರ ನಾಮಿನಿಗಳು, ಕಾನೂನುಬದ್ಧ ವಾರಸುದಾರರು ಹಾಗೂ ಏಜೆಂಟರ್‌ಗಳು ನಿಗದಿಪಡಿಸಿರುವ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಪರಿಶೀಲನೆ ವೇಳೆ ಮೂಲ ಬಾಂಡ್ ಅಥವಾ ನಗದು ರಸೀದಿ ಹಾಜರುಪಡಿಸುವುದು ಕಡ್ಡಾಯ. ಆದರೆ, ಮೂಲ ದಾಖಲೆಯನ್ನು ಅಧಿಕಾರಿಗಳಿಗೆ ಒಪ್ಪಿಸುವ ಅಗತ್ಯವಿಲ್ಲ. ಮೂಲ ಬಾಂಡ್‌ನ ಕಲರ್ ಝರಾಕ್ಸ್ ಪ್ರತಿಯನ್ನು ಸ್ವಯಂ ದೃಢೀಕರಿಸಿ, ಅದಕ್ಕೆ ಸಹಿ ಮಾಡಿ ಸಲ್ಲಿಸಬೇಕು. ಬಾಂಡ್ ಸಂಖ್ಯೆ, ಬ್ಯಾಂಕ್ ಪಾಸ್‌ಬುಕ್‌ನ ಮೊದಲ ಪುಟದಲ್ಲಿ ಖಾತೆದಾರರ ಹೆಸರು, ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಸ್ಪಷ್ಟವಾಗಿರಬೇಕು. ಒಂಬತ್ತು ಕೇಂದ್ರಗಳಲ್ಲಿ ಪರಿಶೀಲನೆ ಪ್ರಕ್ರಿಯೆಯು ಅ.27ರಿಂದ ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1. ಬೆಂಗಳೂರು ನಗರ ಕೇಂದ್ರ, ವಿಳಾಸ: ಡಿಜಿಪಿ, ಸಿಐಡಿ ಕಚೇರಿ, ಕಾರ್ಲ್ಟನ್ ಹೌಸ್, ಪ್ಯಾಲೇಸ್ ರಸ್ತೆ, ಬೆಂಗಳೂರು.
ವ್ಯಾಪ್ತಿ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ದಕ್ಷಿಣ.
ಅ. 27ರಿಂದ ನವೆಂಬರ್ 6 ರವರೆಗೆ, ಭಾನುವಾರ ಹೊರತುಪಡಿಸಿ. ಮೊಬೈಲ್- 9491780834.
2. ತುಮಕೂರು ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ತುಮಕೂರು.
ವ್ಯಾಪ್ತಿ: ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ. ಮೊಬೈಲ್- 9063153056.
3. ಮಂಡ್ಯ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ,
ವ್ಯಾಪ್ತಿ: ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ. ಅಧಿಕಾರಿ ಮೊಬೈಲ್- 9491667878
4. ಬಾಗಲಕೋಟೆ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ
ವ್ಯಾಪ್ತಿ: ಬಾಗಲಕೋಟೆ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ ಹಾಗೂ ಹಾವೇರಿ. ಮೊಬೈಲ್- 9440504172
5. ಉಡುಪಿ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ,
ವ್ಯಾಪ್ತಿ: ಉಡುಪಿ ಹಾಗೂ ಉತ್ತರ ಕನ್ನಡ.ಮೊಬೈಲ್- 9494647517.
6. ರಾಯಚೂರು ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ.
ವ್ಯಾಪ್ತಿ: ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರಗಿ, ವಿಜಯನಗರ, ಬೀದರ್ ಹಾಗೂ ಯಾದಗಿರಿ.
7. ದಕ್ಷಿಣ ಕನ್ನಡ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ವ್ಯಾಪ್ತಿ: ದಕ್ಷಿಣ ಕನ್ನಡ ಜಿಲ್ಲೆ.
8. ಚಿಕ್ಕಬಳ್ಳಾಪುರ ಕೇಂದ್ರ, ವಿಳಾಸ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ವ್ಯಾಪ್ತಿ: ಚಿಕ್ಕಬಳ್ಳಾಪುರ ಹಾಗೂ ಕೋಲಾರ.
9. ಹಾಸನ ಕೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ
ವ್ಯಾಪ್ತಿ: ಹಾಸನ, ಕೊಡಗು, ಶಿವಮೊಗ್ಗ ಹಾಗೂ ಚಿಕ್ಕಮಗಳೂರು.