

ಬಿಡುಗಡೆಗೊಂಡ ಕೃತಿಗಳು
ಸಮಾರಂಭದಲ್ಲಿ ಸು. ರುದ್ರಮೂರ್ತಿ ಶಾಸ್ತ್ರಿ (ಜನ ಭಾರತ), ಉಷಾ ನರಸಿಂಹನ್ (ಆರ್ಯಾವರ್ತ), ಎನ್. ಸಂಧ್ಯಾರಾಣಿ (ಕದಡಿದ ಕೊಳವು ತಿಳಿಯಾಗಿರಲು), ಹಳೆಮನೆ ರಾಜಶೇಖರ (ಮಾಯೆಯೆಂಬುದು ಮಾಯೆಯಲ್ಲ) ವಿಕ್ರಮ ಹತ್ವಾರ (ಓದಿದ್ದು, ನೋಡಿದ್ದು) ಮತ್ತು ಗುರುರಾಜ ಕೊಡ್ಕಣಿ (ಹೆಕ್ಕಿ ತಂದ ನೆನಪುಗಳು) ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಕಾವ್ಯವನ್ನು ಮಾತನಾಡಿಸುವ ಯತ್ನ
ಗುರುರಾಜ ಕೊಡ್ಕಣಿ ಅವರು ತಮ್ಮ ಬಾಲ್ಯ, ಯೌವನದ ಸ್ಮೃತಿ ಚಿತ್ರಗಳನ್ನು ವಿನೋದಮಯವಾಗಿ ಹೆಕ್ಕಿ ತಂದ ನೆನಪುಗಳು ಪುಸ್ತಕದಲ್ಲಿ ಚಿತ್ರಿಸಿದ್ದಾರೆ. ವಿಕ್ರಮ ಹತ್ವಾರ ರಚನೆಯ ಓದಿದ್ದು, ನೋಡಿದ್ದು ಕೃತಿಯು ಸಾಹಿತ್ಯ ಮತ್ತು ಸಿನೆಮಾಗಳನ್ನು ಅವಲೋಕಿಸಿದ್ದು, ನಮ್ಮನ್ನು ಚಿಂತನೆಗೆ ದೂಡುತ್ತದೆ. ಕಾವ್ಯವನ್ನು ಸಾವಧಾನದಿಂದ ಮಾತನಾಡಿಸುವ ಪ್ರಯತ್ನ ಕೃತಿಯಲ್ಲಾಗಿದೆ.