ಬೆಳಗಾವಿ: ಉದ್ಯಮಬಾಗದ ಅರುಣ ಇಂಜಿನಿಯರಿಂಗ್ ಫ್ಯಾಕ್ಟರಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಗೋವಾ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿರುವ ಉದ್ಯಮಬಾಗ ಪೊಲೀಸರು, ಮಜಗಾವಿ ಬ್ರಹ್ಮನಗರದ ಪರಮೇಶ್ವರ ದೇವಪ್ಪ ನಾಯಿಕ (50)ನನ್ನು ಬಂಧಿಸಿ ಗೋವಾ ರಾಜ್ಯದ 4,760 ರೂ. ಮೌಲ್ಯದ 12 ಲೀಟರ್ ಮದ್ಯ ಹಾಗೂ 3,550 ರೂ. ವಶಪಡಿಸಿಕೊಂಡಿದ್ದಾರೆ.