ಒಂದು ದಿನ ಬಿಡುವು ಮಾಡಿಕೊಂಡು ನೀವು ಓದಿದ್ದು ಸೇರಿದಂತೆ ಮೂರು ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಮಕ್ಕಳೊಂದಿಗೆ ಮಾತನಾಡಿ, ಅವರು ನಿಮಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ನೀವು ದಯವಿಟ್ಟು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ. ಇದು ಅವರನ್ನು ಪ್ರೇರೇಪಿಸುವುದಲ್ಲದೆ, ಅವರ ಶಕ್ತಿ ಮತ್ತು ಉತ್ಸಾಹದಿಂದ ನೀವು ಪ್ರೇರಿತರಾಗುತ್ತೀರಿ, ಆ ವಿದ್ಯಾರ್ಥಿಗಳು ನಿಮ್ಮನ್ನು ಜೀವನಪರ್ಯಂತ ನೆನಪಿಸಿಕೊಳ್ಳುತ್ತಾರೆ ಎಂದರು.