ಎಡಗೈ ಸಮುದಾಯಕ್ಕೆ ಉನ್ನತ ಸ್ಥಾನ ನೀಡಲಿ / DEVANAHALLI

ಎಡಗೈ ಸಮಾಜಕ್ಕೆ ಪ್ರಬಲ ಸಚಿವ ಸ್ಥಾನ ನೀಡಬೇಕೆಂದು ಮಾದಿಗ ಸಮುದಾಯದ ಒಕ್ಕೂಟ ಆಗ್ರಹಿಸಿತು. ಮಾದಿಗ ಸಮುದಾಯದ ಜಿಲ್ಲಾಧ್ಯಕ್ಷ ಹೊಸ್ಕೋಟೆ ಸುಬ್ಬಣ್ಣ, ಬುಳ್ಳಹಳ್ಳಿ ಎಂ. ರಾಜಪ್ಪ, ಬಿಕೆ ಶಿವಪ್ಪ, ವಿಜಯಪುರ ವೇಣುಗೋಪಾಲ್​ ಇತರರು ಇದ್ದರು.
ಎಡಗೈ ಸಮಾಜಕ್ಕೆ ಪ್ರಬಲ ಸಚಿವ ಸ್ಥಾನ ನೀಡಬೇಕೆಂದು ಮಾದಿಗ ಸಮುದಾಯದ ಒಕ್ಕೂಟ ಆಗ್ರಹಿಸಿತು. ಮಾದಿಗ ಸಮುದಾಯದ ಜಿಲ್ಲಾಧ್ಯಕ್ಷ ಹೊಸ್ಕೋಟೆ ಸುಬ್ಬಣ್ಣ, ಬುಳ್ಳಹಳ್ಳಿ ಎಂ. ರಾಜಪ್ಪ, ಬಿಕೆ ಶಿವಪ್ಪ, ವಿಜಯಪುರ ವೇಣುಗೋಪಾಲ್​ ಇತರರು ಇದ್ದರು.
Published on
ದೇವನಹಳ್ಳಿ : ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮಂತ್ರಿಸ್ಥಾನ ನೀಡಬೇಕೆಂದು ಮಾದಿಗ ಸಮುದಾಯದ ಒಕ್ಕೂಟ ಕಾಂಗ್ರೆಸ್​ ಸರ್ಕಾರವನ್ನು ಒತ್ತಾಯಿಸಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮುದಾಯದ ಸಭೆಯಲ್ಲಿ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಕೆ.ಎಚ್​.ಮುನಿಯಪ್ಪ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ಅಪಾರ ಅನುಭವ ಹೊಂದಿದ್ದಾರೆ. ಅವರ ಹಿರಿತನಕ್ಕೆ ಉನ್ನತ ಹುದ್ದೆ ನೀಡಬೇಕು, ಇಲ್ಲವಾದಲ್ಲಿ ಸಮುದಾಯದ ಕಾಂಗ್ರೆಸ್​ ಜನಪ್ರತಿನಿಧಿಗಳು ಬಿಜೆಪಿಗೆ ಸೇರ್ಪಡೆಯಾಗುತ್ತೇವೆ, ಬಲಗೈ ಸಮುದಾಯದವರನ್ನೇ ಮುನ್ನೆಲೆಗೆ ತರುತ್ತಿದ್ದು, ಎಡಗೈ ಸಮುದಾಯವನ್ನು ಕಾಂಗ್ರೆಸ್​ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮುದಾಯದ ಜನರಿದ್ದು, ಪ್ರಬಲ ಸಚಿವ ಸ್ಥಾನ ನೀಡದಿದ್ದಲ್ಲಿ ರಾಜ್ಯಾದ್ಯಂತ ಮಾದಿಗ ಸಮುದಾಯದಿಂದ ಕಾಂಗ್ರೆಸ್​ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಮಾದರ ಮಹಾಸಭಾ ಜಿಲ್ಲಾಧ್ಯಕ್ಷ ಹೊಸಕೋಟೆ ಸುಬ್ಬರಾಜು ಮಾತನಾಡಿ, ಮುಖ್ಯಮಂತ್ರಿಯಾಗುವ ಅರ್ಹತೆ ಹೊಂದಿರುವ ಕೆ.ಎಚ್​.ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
ಮಾದರ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಮುದುಗುರ್ಕಿ ನಾರಾಯಣಸ್ವಾಮಿ, ಮಾದರ ಮಹಾಸಭಾ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿದರು. ರಾಜ್ಯ ಸಂಟನಾ ಕಾರ್ಯದರ್ಶಿ ಬಿ.ಕೆ.ಶಿವಪ್ಪ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ವಿಜಯಪುರ ವೇಣುಗೋಪಾಲ್​, ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಎ.ಎಂ.ವೆಂಕಟೇಶ್​, ಮುನಿರಾಜು, ಜಾಲಿಗೆ ಮುನಿರಾಜು, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಯಡಾಳ ದೇವರಾಜು, ಚಂದೇನಹಳ್ಳಿ ಮುನಿಯಪ್ಪ, ಬಚ್ಚಳ್ಳಿ ನಾಗರಾಜ, ಮುನಿಯಪ್ಪ, ಚನ್ನಹಳ್ಳಿ ನಾರಾಯಣಸ್ವಾಮಿ, ಬುಳ್ಳಹಳ್ಳಿ ಮುನಿರಾಜು, ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net