

ಚಿಂಚೋಳಿ: ಕೋಲಿ ಸಮಾಜದ ತಾಲೂಕು ಟಕದ ಪದಾಧಿಕಾರಿಗಳ ಅವಧಿ ಮುಗಿದಿದ್ದು, ಕಡ್ಡಾಯವಾಗಿ ಸದಸ್ಯತ್ವ ಅಭಿಯಾನ ನಡೆಸಿ ಚುನಾವಣೆ ಮೂಲಕ ಪದಾಧಿಕಾರಿಗಳ ಆಯ್ಕೆ ಆಗಬೇಕು ಎಂದು ಕೋಲಿ ಸಮಾಜದ ರಾಜ್ಯ ಸಂಟನಾ ಕಾರ್ಯದರ್ಶಿ ಲ್ಮಣ ಅವಂಟಿ ಹೇಳಿದರು. ಚಂದಾಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೋಲಿ ಸಮಾಜದ ಸಭೆಯಲ್ಲಿ ಮಾತನಾಡಿ, ಚುನಾವಣೆ ಅಧಿಕಾರಿಗಳ ನೇಮಕ, ಸದಸ್ಯತ್ವ ಅಭಿಯಾನ ಸೇರಿ ಎಲ್ಲ ಕೆಲಸಗಳು ಅಚ್ಚುಕಟ್ಟಾಗಿ ನಡೆಯಬೇಕು. ಸದಸ್ಯತ್ವ ಶುಲ್ಕ 500 ರೂ. ನಿಗದಿ ಮಾಡಲಾಗಿದ್ದು, ಸದಸ್ಯತ್ವ ಪಡೆದರೆ ಮಾತ್ರ ಮತದಾನದ ಹಕ್ಕು ಲಭಿಸಲಿದೆ. ಸದಸ್ಯತ್ವ ಪಡೆಯಲು ಮೇ 31 ಕೊನೆಯ ದಿನವಾಗಿದೆ ಎಂದರು. ಪ್ರಮುಖರಾದ ಅನೀಲಕುಮಾರ ಜಮಾದಾರ, ಸುರೇಶ ಭಂಟಾ, ಗುಂಡಪ್ಪ ಔರಾದಿ, ಶಿವಕುಮಾರ ತಳವಾರ, ನೀಲಕಂಠ ಹುಡಗಿ, ದೌವಲಪ್ಪ ಚಿಮ್ಮಇದಲಾಯಿ, ಬಸವರಾಜ ಸೈದಾಪುರ, ನಾಮದೇವ ಪೊಲೀಸ್ ಪಾಟೀಲ್, ಮಲ್ಲಪ್ಪ ಕೋಟಪಲ್ಲಿ, ವೈಜನಾಥ ದಾದಿ, ಮೋಗಲಪ್ಪ ದಾಸ್, ಹಣಮಂತ ಗೌರಿ, ವೀರಪ್ಪ ನಾಟಿಕಾರ, ಮಲ್ಲಿಕಾರ್ಜುನ ನೆಲ್ಲಿ, ಕೃಷ್ಣ ದಯಾಳ, ಕುಪೇಂದ್ರ ಐನೋಳ್ಳಿ, ಲಿಂಗಾನಂದ ಯಲ್ಮಡಗಿ ಇತರರಿದ್ದರು.