ಭಾರತೀಯ ಸ್ಥಳಿಯ ಗೋ ತಳಿಗಳಿಗೆ ರಾಷ್ಟ್ರೀಯ ಗೌರವ ಒದಗಿಸಬೇಕೆಂದು ಆಗ್ರಹಿಸಿ ಆನೇಕಲ್ ಪಟ್ಟಣದಲ್ಲಿ ತಹಸೀಲ್ದಾರ್ ಶಶಿಧರ್ ಅವರಿಗೆ ಮನವಿ ಸಲ್ಲಿಸಲಾಯಿತು. ನಂದಿ ಬಾಬಾ, ಹರಿಸಿಂಗ್, ಜ್ಞಾನಮೂರ್ತಿ, ಸಂಜಯ್ ಜಿ, ಬಜರಂಗದಳ ಮೋಹನ್ ಇತರರು ಇದ್ದರು.
Published on:
Copied
Follow Us
ಆನೇಕಲ್ : ಭಾರತೀಯ ಸ್ಥಳಿಯ ಗೋ ತಳಿಗಳಿಗೆ ರಾಷ್ಟ್ರೀಯ ಗೌರವ ಕಲ್ಪಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಇತ್ತೀಚೆಗೆ ವೇದ ಲಕ್ಷಣ ಗೋ ಮಾತಾ ಸಂಸ್ಥೆ ವತಿಯಿಂದ ನಂದಿ ಬಾಬಾ ವೃಷಭದೇವ ಅವರ ಮಾರ್ಗದರ್ಶನದ ಮೇರೆಗೆ ಗೋಮಾತೆಯ ಗೌರವದ ಅಭಿಯಾನ ಕಾರ್ಯಕ್ರಮದಡಿ ಗೋಮಾತಾ ಗೌರವ ದಿನ ಆಚರಿಸಲಾಯಿತು.
ಪಟ್ಟಣದ ದೇವರಕೊಂಡ ವೃತ್ತದಿಂದ ಹಸುವಿನ ಕರುವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿತಾಲೂಕು ಕಚೇರಿವರೆಗೆ ವಾದ್ಯವೃಂದದೊಂದಿಗೆ ಆಗಮಿಸಿ ಗೋವಿಗೆ ರಾಷ್ಟ್ರೀಯ ಗೌರವ ಕಲ್ಪಿಸಬೇಕು ಹಾಗೂ ರಕ್ಷಣೆ ಒದಗಿಸಬೇಕು ಆಗ್ರಹಿಸಿ ತಹಸೀಲ್ದಾರ್ ಶಶಿಧರ್ ಅವರಿಗೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ಬ್ರಹ್ಮಚಾರಿ ಓಂ ಪ್ರಕಾಶ್ ಮಾತನಾಡಿ, ಭಾರತೀಯ ಸ್ಥಳಿಯ ಗೋ ತಳಿಗಳಿಗೆ ರಾಷ್ಟ್ರೀಯ ಗೌರವ ಒದಗಿಸಬೇಕೆನ್ನುವ ನಿಟ್ಟಿನಲ್ಲಿ ಮಹಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ದೇಶದಲ್ಲಿ ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ತಾಲೂಕು ಕಚೇರಿಗೆ ತೆರಳಿ ಗೋವಿನ ರಕ್ಷಣೆಗಾಗಿ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಲಾಗುತ್ತಿದೆ ಎಂದರು.
ಗ್ವಾಲ ಆನಂದ್ ಸರಸ್ವತಿ ಮಾತನಾಡಿ, ಭಾರತದಲ್ಲಿ ಗೋ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇದರಿಂದ ಸ್ಥಳಿಯ ಜಾನುವಾರುಗಳ ಸಂಖ್ಯೆ ಸಂಪೂರ್ಣವಾಗಿ ರಕ್ಷಣೆಯಾಗಲಿದೆ. ಹಸುವಿಗೆ ರಾಷ್ಟ್ರೀಯ ದೇವತೆ ಎಂದು ಪೂಜೆ ಮಾಡುತ್ತೇವೆ. ರಾಷ್ಟ್ರೀಯ ಪರಂಪರೆ ಅಥವಾ ರಾಷ್ಟ್ರೀಯ ಪ್ರತಿಷ್ಠಾನದ ಸ್ಥಾನಮಾನವನ್ನು ಗೌರವಿಸಿ ನಂದಿಯನ್ನು ಗೌರವಿಸಿದಷ್ಟೇ ಪವಿತ್ರವಾಗಬೇಕು ಎನ್ನುವುದು ಈ ಹೋರಾಟದ ನಿರ್ಧಾರವಾಗಿದೆ. ಗೋ ಸೇವೆಗಾಗಿ ಕೇಂದ್ರೀಯ ಕಾನೂನನ್ನು ಜಾರಿಗೆ ತರಬೇಕು, ಕೇಂದ್ರೀಯ ಸಚಿವಾಲಯವನ್ನು ಸ್ಥಾಪನೆ ಮಾಡಿ ಇಡೀ ದೇಶದಲ್ಲಿ ಇದು ಕಾರ್ಯನಿರ್ವಹಿಸುವಂತಾಗಬೇಕು ಎಂದು ಒತ್ತಾಯಿಸಿದರು.