ನಾಡಗೌಡರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡಿ

ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮುದ್ದೇಬಿಹಾಳ-ತಾಳಿಕೋಟೆ ನಿಯೋಗದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ಸಲ್ಲಿಸಲಾಯಿತು.
ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮುದ್ದೇಬಿಹಾಳ-ತಾಳಿಕೋಟೆ ನಿಯೋಗದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಮನವಿ
  • ಬೆಂಗಳೂರಿನಲ್ಲಿ ಮುದ್ದೇಬಿಹಾಳ-ತಾಳಿಕೋಟೆ ನಿಯೋಗ ಭೇಟಿ
ಮುದ್ದೇಬಿಹಾಳ: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುದ್ದೇಬಿಹಾಳ ಮತ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನಿಂದ ಬೆಂಗಳೂರಿಗೆ ತೆರಳಿದ್ದ ನಿಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಶನಿವಾರ ಮನವಿ ಸಲ್ಲಿಸಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ನಿವಾಸಕ್ಕೆ ತೆರಳಿದ ನಿಯೋಗ ಖರ್ಗೆ ಅವರನ್ನು ಭೇಟಿಯಾಗಿ, ನಾಡಗೌಡರು ಕಳೆದ 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಆರು ಬಾರಿ ಶಾಸಕರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಹಿರಿಯ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಡಲೇಬೇಕೆಂದು ಆಯೋಗದ ಪರವಾಗಿ ವೈ.ಎಚ್. ವಿಜಯಕರ ಮನವಿ ಮಾಡಿದರು.
ನಿಯೋಗದಿಂದ ಮನವಿ ಸ್ವೀಕರಿಸಿದ ಖರ್ಗೆಯವರು, ಕೇಂದ್ರ ನಾಯಕರ ಸಭೆಯಲ್ಲಿ ಚರ್ಚಿಸಿ ನಿಮ್ಮೆಲ್ಲರ ಆಸೆ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿ, ಸಕಾರಾತ್ಮಕವಾಗಿ ಸ್ಪಂದಿಸಿದರು.
ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಗುರು ತಾರನಾಳ, ಬಿ.ಕೆ. ಬಿರಾದಾರ, ಪ್ರಭುರಾಜ ಕಲ್ಬುರ್ಗಿ, ಪ್ರಭುಗೌಡ ಮದರಕಲ್ಲ, ಶರಣುಧನಿ ದೇಶಮುಖ, ಮುತ್ತುಕಡಿ, ಸಿದ್ದನಗೌಡ ನಾವದಗಿ, ಕಾಶಿಮಪಟೇಲ ಮೂಕೀಹಾಳ, ರಾಜುಗೌಡ ಗೌಡರ, ಸಂಗನಗೌಡ ಬಿರಾದಾರ, ಜಿಟಿಸಿ ಸಂಗನಗೌಡ, ಶರಣು ಸಜ್ಜನ, ಸಂಗಮೇಶ ದೇಸಾಯಿ, ಶಿವಾನಂದ ಹೂಗಾರ, ಡಾ. ನಜೀರ ಕೋಳ್ಯಾಳ, ಬಾಪುರಾಯದೇಸಾಯಿ, ರವಿ ಪಾಟೀಲ, ಸಂಗನಗೌಡ ಅಸ್ಕಿ, ರಾಯನಗೌಡ ತಾತರೆಡ್ಡಿ, ಚಾಂದಸಾಬ ಲಾಹೋರಿ, ಸಿದ್ದನಗೌಡ ಪಾಟೀಲ, ಮಲ್ಲನಗೌಡಯಾತಗಿರಿ, ವಿರೇಶ ಹಡಲಗೇರಿ ಸೇರಿ ನೂರಾರು ಜನರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net