ಹೈನುಗಾರಿಕೆ ಹೆಚ್ಚು ಪ್ರೋತ್ಸಾಹ ನೀಡಿ inaugurate

ಗುಬ್ಬಿ ತಾಲೂಕಿನ  inaugurate ಚಿಕ್ಕಹೇಡಿಗೆಹಳ್ಳಿಯಲ್ಲಿ ನಂದಿನಿ ಹಾಲಿನ ಉಪಕೇಂದ್ರವನ್ನು ತುಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಯೋಗೀಶ್​, ಸದಸ್ಯರಾದ ಗುರುರಾಜು, ಕಾಂತರಾಜು ಇದ್ದರು.
ಗುಬ್ಬಿ ತಾಲೂಕಿನ inaugurate ಚಿಕ್ಕಹೇಡಿಗೆಹಳ್ಳಿಯಲ್ಲಿ ನಂದಿನಿ ಹಾಲಿನ ಉಪಕೇಂದ್ರವನ್ನು ತುಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಯೋಗೀಶ್​, ಸದಸ್ಯರಾದ ಗುರುರಾಜು, ಕಾಂತರಾಜು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತುಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ಹೇಳಿಕೆ
ಎಂಎನ್​ ಕೋಟೆ: ಚಿಕ್ಕಹೇಡಿಗೆಹಳ್ಳಿಗೆ ರೈತರು ದೂರದ ಊರುಗಳಿಗೆ ಹೋಗಿ ಹಾಲನ್ನು inaugurate ಹಾಕುತ್ತಿದ್ದರು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಮ್ಮ ಊರಿನಲ್ಲಿ ನಂದಿನಿ ಉಪಕೇಂದ್ರ ತೆರೆಯಲಾಗಿದೆ. ರೈತರು ಹೆಚ್ಚು ಹಾಲನ್ನು ಹಾಕಿ ಜತೆಗೆ ಗುಣಮಟ್ಟದ ಹಾಲನ್ನು ಹಾಕಿ ಹೆಚ್ಚು ಪ್ರೋತ್ಸಾಹಧನ ಪಡೆಯಬೇಕು ಎಂದು ತುಮುಲ್​ ನಿರ್ದೇಶಕಿ ಭಾರತಿ ಶ್ರೀನಿವಾಸ್​ ತಿಳಿಸಿದರು.
ಗುಬ್ಬಿ ತಾಲೂಕಿನ ಚಿಕ್ಕಹೇಡಿಗೆಹಳ್ಳಿಯಲ್ಲಿ ನಂದಿನಿ ಹಾಲಿನ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ನಾನು ಚುನಾವಣೆಯಲ್ಲಿ ಗೆದ್ದ ಮೇಲೆ ಸುಮಾರು 30 ಡೇರಿಗಳನ್ನು ಗ್ರಾಮೀಣ ಭಾಗದಲ್ಲಿ ತೆರೆಯಲಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ದೂರದ ಊರುಗಳಿಗೆ ಹೋಗಿ ಹಾಲನ್ನು ಹಾಕುತ್ತಿದ್ದರು. ಇದನ್ನ ಮನಗಂಡು ಉಪಕೇಂದ್ರಗಳನ್ನು ತೆರೆಯುವ ಮೂಲಕ ರೈತರು ತಮ್ಮ ಊರುಗಳಲ್ಲಿ ಹಾಲನ್ನು ಡೇರಿಗಳಿಗೆ ಹಾಕುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.
ರೈತರು ಹೈನುಗಾರಿಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪ್ರತಿ ಮನೆಗೊಂದು ಹಸುವನ್ನು ಸಾಕುವುದರ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಹಾಲು ಹಾಕುವ ರೈತರು ಮರಣ ಹೊಂದಿದಾರೆ 50 ಸಾವಿರ ರೂ. ಹಣ ನೀಡುತ್ತೇವೆ. ಹಸು ಮೃತಪಟ್ಟರೆ 70 ಸಾವಿರ ರೂ. ಹಣ ನೀಡುತ್ತೇವೆ. ಜತೆಗೆ ರೈತರ ಬಣಿವೆ ಸುಟ್ಟು ಹೋದರೆ ಹತ್ತು ಸಾವಿರ ಹಣ ನೀಡುತ್ತೇವೆ ಎಂದು ತಿಳಿಸಿದರು.
ಮೇಲ್ವಿಚಾರಕರಾದ ರಾಜು, ಶಂಕರನಾಗು, ಮಹೇಶ್​, ಕಾರ್ಯದರ್ಶಿ ಮಮತಾ, ಮುಖಂಡರಾದ ರಮೇಶ್​, ಶ್ರೀನಿವಾಸ್​ ಡೊಡ್ಡೀರಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net