ದನಗಳ ಜಾತ್ರೆಯಲ್ಲಿ ಸುಂಕ ವಿನಾಯಿತಿ ನೀಡಿ / TUBAGERE

ದೊಡ್ಡಬಳ್ಳಾಪುರ ತಾಲೂಕು ಘಾಟಿ ಸುಬ್ರಹ್ಮಣ್ಯ ಬ್ರಹ್ಮ ರಥೋತ್ಸವದ ದನಗಳ ಜಾತ್ರೆ ಹಿನ್ನೆಲೆಯಲ್ಲಿ ರೈತರಿಗೆ ಸುಂಕ ವಿನಾಯಿತಿ ಮೂಲ ಸೌಕರ್ಯ ಒದಗಿಸುವಂತೆ ರೈತ ಸಂಘ ಘಾಟಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್​ ಅವರಿಗೆ ಮನವಿ ಸಲ್ಲಿಸಲಾಯಿತು.  ರೈತ ಸಂಘದ ಕಾರ್ಯದರ್ಶಿ ಸತೀಶ್​, ಹೋಬಳಿ ಅಧ್ಯಕ್ಷ ಮುನಿ ರಾಮೇಗೌಡ, ಮುಖಂಡರಾದ   ವಾಸುದೇವ್​, ಮೂರ್ತಿ, ಮುರಳಿ ಹನುಮಂತರಾಯಪ್ಪ, ತಿಪ್ಪೂರು ತಿಮ್ಮಣ್ಣ ಇತರರು ಇದ್ದರು.
ದೊಡ್ಡಬಳ್ಳಾಪುರ ತಾಲೂಕು ಘಾಟಿ ಸುಬ್ರಹ್ಮಣ್ಯ ಬ್ರಹ್ಮ ರಥೋತ್ಸವದ ದನಗಳ ಜಾತ್ರೆ ಹಿನ್ನೆಲೆಯಲ್ಲಿ ರೈತರಿಗೆ ಸುಂಕ ವಿನಾಯಿತಿ ಮೂಲ ಸೌಕರ್ಯ ಒದಗಿಸುವಂತೆ ರೈತ ಸಂಘ ಘಾಟಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್​ ಅವರಿಗೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ಕಾರ್ಯದರ್ಶಿ ಸತೀಶ್​, ಹೋಬಳಿ ಅಧ್ಯಕ್ಷ ಮುನಿ ರಾಮೇಗೌಡ, ಮುಖಂಡರಾದ ವಾಸುದೇವ್​, ಮೂರ್ತಿ, ಮುರಳಿ ಹನುಮಂತರಾಯಪ್ಪ, ತಿಪ್ಪೂರು ತಿಮ್ಮಣ್ಣ ಇತರರು ಇದ್ದರು.
Published on
ತೂಬಗೆರೆ : ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್​ನಲ್ಲಿ ದನಗಳ ಜಾತ್ರೆ ನಡೆಯಲಿದ್ದು, ಜಾತ್ರೆಗೆ ಆಗಮಿಸುವ ರಾಸುಗಳಿಗೆ ಸುಂಕ ವಿನಾಯಿತಿ ಸೇರಿ ರೈತರ ವ್ಯಾಪಾರಕ್ಕೆ ಸೂಕ್ತ ಅನುಕೂಲ ಕಲ್ಪಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ, ನವ ಕರ್ನಾಟಕ ಯುವಶಕ್ತಿ ವೇದಿಕೆ ನೇತೃತ್ವದಲ್ಲಿ ರೈತರು ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್​ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ ಮಾತನಾಡಿ, ಘಾಟಿಯಲ್ಲಿ ನಡೆಯುವ ಅಂತಾರಾಜ್ಯ ದನಗಳ ಜಾತ್ರೆ ರಾಜದಯದ ಪ್ರಮುಖ ದನಗಳ ಜಾತ್ರೆಗಳಲ್ಲಿ ಒಂದಾಗಿದೆ. ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಸಾಕಾಣಿಕೆದಾರರು ದನಗಳನ್ನು ವಾಹನಗಳಲ್ಲಿ ಸಾಗಿಸಿ ಭಾಗವಹಿಸುತ್ತಾರೆ. ರೈತರಿಗೆ ಸುಂಕ ವಿನಾಯಿತಿ ನೀಡುವಂತೆ ಈ ಹಿಂದೆಯೂ ಮನವಿ ಸಲ್ಲಿಸಲಾಗಿತ್ತು. ಪ್ರಾಧಿಕಾರ ಅದನ್ನು ಪರಿಗಣಿಸಿ ವಾಹನ ಸುಂಕ ವಿನಾಯಿತಿ ನೀಡಿತ್ತು. ಈ ಕ್ರಮದಿಂದ ಸಾಕಾಣಿಕಾರರು ಹಾಗೂ ವ್ಯಾಪಾರಿಗಳಿಗೆ ಅನೂಕುಲವಾಗಿತ್ತು. ಈ ವರ್ಷವೂ ರಾಸುಗಳನ್ನು ಸಾಗಿಸುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಬೇಕಿದೆ. ಇದು ಸಾಕಾಣಿಕೆದಾರರ ಹಿತಾಸಕ್ತಿಗೆ ಪೂರಕವಾಗಿದ್ದು, ಘಾಟಿ ಸುಬ್ರಹ್ಮಣ್ಯ ಅಂತಾರಾಜ್ಯ ದನಗಳ ಜಾತ್ರೆ ಯಶಸ್ವಿ ಆಯೋಜನೆಗೆ ಸಹಕಾರಿಯಾಗಲಿದೆ ಎಂಧರು.
ಇದಕ್ಕೆ ಪ್ರತಿಕ್ರಿಯಿಸಿದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್​, ಜಾತ್ರೆಯಲ್ಲಿ ರಾಸುಗಳಿಗೆ ಹಿಂದೆ ಸುಂಕ ವಿನಾಯಿತಿ ನೀಡಲಾಗಿದ್ದು, ಈ ಬಾರಿಯೂ ಪರಿಶೀಲಿಸಲಾಗುವುದು. ರೈತರಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ವಿಶ್ರಾಂತಿಗೆ ಜಾಗ, ಊಟಕ್ಕೆ ವ್ಯವಸ್ಥೆ ಮಾಡಿ : ಪ್ರಾಧಿಕಾರದಿಂದ ರೈತರಿಗೆ ಮೂಲ ಸೌಕರ್ಯ ನೀಡುತ್ತಿರುವುದು ಸ್ವಾಗತಾರ್ಹ. ಅಂತೆಯೇ ರಾಸುಗಳ ಸೇರುವ ಜಾಗದಲ್ಲಿ ತೋಟಗಳ ಮಾಲೀಕರು ಕಾಂಪೌಂಡ್​ಗಳನ್ನು ಹಾಕಿಕೊಂಡಿದ್ದು, ಅವರಿಗೆ ಮನವಿ ಮಾಡಿ ತೆರವು ಮಾಡಿಕೊಟ್ಟು, ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ರಾತ್ರಿ ತಂಗುವ ರೈತರಿಗೆ ಊಟದ ವ್ಯವಸ್ಥೆ, ವಿಶ್ರಾಂತಿ ಕೊಠಡಿ ನೀಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net