ಅರ್ಹತೆಗಾಗಿ ಶಿಕ್ಷಣ ಪಡೆಯಿರಿ

Get educated for merit
Get educated for merit
Published on
ಬರಗೂರು: ಉದ್ಯೋಗಕ್ಕಾಗಿ ಶಿಕ್ಷಣ ಹೊಂದದೆ ವಿದ್ಯಾರ್ಹತೆಗೆ ಶಿಕ್ಷಣ ಪಡೆಯಿರಿ. ವಿದ್ಯಾರ್ಹತೆಯಿಂದ ಸಾಕಷ್ಟು ಅನುಕೂಲತೆಗಳು ಲಭಿಸಲಿವೆ ಎಂದು ಜ್ಞಾನಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲ ಡಿ.ಎನ್​.ಪರಮೇಶ್​ ಗೌಡ ಹೇಳಿದರು.
ಶಿರಾ ತಾಲೂಕಿನ ಬರಗೂರಿನ ಜ್ಞಾನ ಜ್ಯೋತಿ ಪಿಯು ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ದ್ವೀತಿಯ ಪಿಯು ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುಣಮಟ್ಟದ ಶಿಕ್ಷಣ ಹೊಂದುವ ಮೂಲಕ ಸರ್ಕಾರಿ ಉದ್ಯೋಗ, ಸ್ವಂತ ವ್ಯವಹಾರ, ರಾಜಕೀಯ, ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶಗಳನ್ನು ಪಡೆಯಬಹುದು. ಶಿಕ್ಷಣ ಇಂದಿನ ದಿನಕ್ಕೆ ಒಂದು ಅಸ್ತ್ರವಾಗಿದೆ. ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿ ಉತ್ತಮ ಪ್ರಜೆಯಾಗಿ ಎಂದರು.
ಉಪನ್ಯಾಸಕ ಜಿ.ಎನ್​.ಮೂರ್ತಿ ಮಾತನಾಡಿ, ಶಿಕ್ಷಣ ಹೊಂದುವುದರಿಂದ ಹಲವಾರು ದುಡಿಮೆ ಮಾರ್ಗಗಳು ಲಭ್ಯವಿದ್ದು, ಜೀವನದಲ್ಲಿ ಎಸ್ಟೊಂದು ಕಷ್ಟಗಳು ಬಂದರೂ ದುಡಿಮೆಯ ಮೂಲಕ ಪರಿಹರಿಸಿಕೊಳ್ಳಬಹುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net