ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಿ Education

ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ವಿದ್ಯಾರ್ಥಿಗಳಿಗೆ ನೋಟ್​ ಪುಸ್ತಕ ಹಾಗೂ ಲೇಖನಿ Education ಸಾಮಗ್ರಿಗಳನ್ನು ವಿತರಿಸಲಾಯಿತು.
ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ ವಿದ್ಯಾರ್ಥಿಗಳಿಗೆ ನೋಟ್​ ಪುಸ್ತಕ ಹಾಗೂ ಲೇಖನಿ Education ಸಾಮಗ್ರಿಗಳನ್ನು ವಿತರಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಲೋಕಾಯುಕ್ತ ಎನ್​.ಎಸ್​.ಸಂತೋಷ ಹೆಗ್ಗಡೆ ಸಲಹೆ
ಶ್ರೀನಿವಾಸಪುರ: ಉತ್ತಮ ಶಿಕ್ಷಣ ಪಡೆದು, ಉನ್ನತ ಹುದ್ದೆ ಅಲಂಕರಿಸಿ ಆದರೆ ಬೇರೆಯವರ ಜೇಬಿಗೆ ಕೈ ಹಾಕಬೇಡಿ. ಅಕ್ರಮವಾಗಿ ಸಂಪಾದನೆ ಮಾಡಿದರೆ ಎಂದೂ ನಿಮಗೆ ನಿದ್ದೆ ಬರಲ್ಲ. ವಿದ್ಯೆ ಯಾರು ಕದಿಯಲು ಸಾಧ್ಯವಿಲ್ಲ ಎಂದು ನಿವೃತ್ತ ಲೋಕಾಯುಕ್ತ ಎನ್​.ಎಸ್​.ಸಂತೋಷ ಹೆಗ್ಗಡೆ ತಿಳಿಸಿದರು.
ತಾಲೂಕಿನ ಚಲ್ದಿಗಾನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾವರಣದಲ್ಲಿ Education ಶುಕ್ರವಾರ ದಾನಿ, ವಕೀಲ ಎಂ.ಶಿವಪ್ರಕಾಶ್​ ಹಾಗೂ ಎಸ್​.ಶಿವಸ್ವರೂಪ ಅವರು ಹಮ್ಮಿಕೊಂಡಿದ್ದ ಉಚಿತ ನೋಟ್​ ಪುಸ್ತಕ ಹಾಗೂ ಲೇಖನಿ ಸಾಮಗ್ರಿ ವಿತರಣೆ ಮತ್ತು ರೋಜರಹಳ್ಳಿ ಕ್ರಾಸ್​ನಲ್ಲಿ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ವಿದ್ಯೆ ಧಾರೆ ಎರೆದರೆ ಅದನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಆಸ್ತಿ, ಅಂತಸ್ತು ಮಾಡಿದರೆ ಅವುಗಳನ್ನು ಕಾಪಾಡಲು ನಾವು ಕಾವಲು ಇರಬೇಕು. ಮುಂದಿನ ದಿನಗಳಲ್ಲಿ ಅದನ್ನ ಲೋಕಾಯುಕ್ತ ಅಥವಾ ಬೇರೆ ತೆರಿಗೆ ಅಧಿಕಾರಿಗಳು ಬಂದು ನೀವು ಯಾವ ರೀತಿಯಲ್ಲಿ ಸಂಪಾದನೆ ಮಾಡಿದ್ದೀರಿ ಎಂದು ನಿಮ್ಮ ಪ್ರಶ್ನೆ ಕೇಳಬಹುದು. ಆದರೆ ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಯುಕ್ತವಾದ ಶಿಕ್ಷಣ ಕೊಡಿಸಿದರೆ ಸಮಾಜವು ನಮ್ಮನ್ನು ಗೌರವದಿಂದ ನೋಡಿಕೊಳ್ಳುತ್ತದೆ ಎಂದರು.
ಸರ್ವೊಚ್ಛ ನ್ಯಾಯಾಧೀಶ ಆರ್​.ನಟರಾಜ್​ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆಯಬೇಕೆಂಬ ಆಸಕ್ತಿಯಿಂದ ತಮ್ಮ ಎಲ್ಲ ಸಮಯವನ್ನು ತಮ್ಮಲ್ಲಿರುವ ವಿದ್ಯೆಯನ್ನು ಧಾರೆ ಎಳೆಯುತ್ತಾರೆ. ಶಿಕ್ಷಕ ಎಂಬ ವಿದ್ಯೆ ಹೇಳಿಕೊಟ್ಟ ಶಿಷ್ಯ ಒಳ್ಳೆಯ ಜವಾಬ್ದಾರಿ ಸ್ಥಾನದಲ್ಲಿ ಇದ್ದರೆ ತುಂಬಾ ಖುಷಿಪಡುತ್ತಾನೆ ಎಂದರು.
ಕಾರ್ಯದರ್ಶಿ ಕೆ.ವಿ.ಆದರ್ಶ, ಜಿಲ್ಲಾ ಸರ್ಕಾರಿ ಅಭಿಯೋಜಕ ಫಯಾಜ್​ಅಹ್ಮದ್​, ವಕೀಲ ಅರ್ಜುನ್​, ಗ್ರಾಪಂ ಅಧ್ಯಕ್ಷ ಶ್ರೀನಿವಾಸ್​, ಪಿಡಿಒ ಗೋಪಾಲರೆಡ್ಡಿ, ನಿವೃತ್ತ ಶಿಕ್ಷಕ ಗಾಂಡ್ಲಹಳ್ಳಿ ಸಂಪತ್​ಕುಮಾರ್​, ತಾಪಂ ಮಾಜಿ ಅಧ್ಯಕ್ಷ ಶ್ಯಾಗತ್ತಾರು ಸುಧಕಾರ್​, ಶಿಕ್ಷಕರಾದ ಕಲಾಶಂಕರ್​, ಶಿವಮೂರ್ತಿ, ಶಾರದಾ, ಅನುರಾಧಾ ಇದ್ದರು.
ನಿವೃತ್ತ ತೋಟಗಾರಿಕೆ ನಿರ್ದೇಶಕ ಡಾ.ಹಿತ್ತಲಮನೆ, ರೈತ ಹೋರಾಟಗಾರ್ತಿ ಸುನಂದಜಯರಾಮ್​, ಎಂ.ಶಿವಪ್ರಕಾಶ್​, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್​.ಶ್ರೀನಿವಾಸ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net