ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್ ಮುಖಂಡರಾದ ಅ.ದೇವೇಗೌಡ, ಪಟಾಪಟ್ ರವಿ, ಹಿರಿಯ ಮುಖಂಡರಾದ ರಾಜಣ್ಣ, ನಂಜಾರೆಡ್ಡಿ, ವಿನಯ್ ರೆಡ್ಡಿ ಇತರರು ಇದ್ದರು.
ಆನೇಕಲ್ : ಸುಪ್ರೀಂಕೋರ್ಟ್ಆದೇಶವಾದರೂ ಜಿಬಿಎ ಚುನಾವಣೆಯನ್ನು ಈ ಸರ್ಕಾರ ಮಾಡುತ್ತದೆ ಅಥವಾ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಚುನಾವಣೆ ಮುಂದೂಡಲು ಇನ್ಯಾವ ತಂತ್ರ ರೂಪಿಸುತ್ತಾರೋ ಕಾದು ನೋಡೋಣ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಹೇಳಿದರು.
ತಾಲೂಕಿನ ಬೊಮ್ಮಸಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಬಣದ ನಡುವೆ ತಿಕ್ಕಾಟ ನಡೆಯುತ್ತಿದೆ. ಅವರಿಗೆ ಜಿಬಿಎ ಚುನಾವಣೆ ಬಗ್ಗೆ ಯಾವುದೇ ಚಿಂತೆ ಇಲ್ಲ. ಕಾಂಗ್ರೆಸ್ನವರ ಮುಂದೆ ಯಾವ ಹೋರಾಟ ಮಾಡಿದರೂ ಎಮ್ಮೆ ಮುಂದೆ ಪುಂಗಿ ಊದಿದಂತಾಗುತ್ತದೆ ಎಂಬ ಕಾರಣಕ್ಕೆ ಸುಮ್ಮನಿದ್ದೇವೆ ಎಂದರು.
ನಿಖಿಲ್ ಕುಮಾರಸ್ವಾಮಿಯವರ ಹುಟ್ಟುಹಬ್ಬದ ಅಂಗವಾಗಿ ಜ.22ರಂದು ಆನೇಕಲ್ ತಾಲೂಕಿನ ಸೂರ್ಯ ನಗರದ ಮೈದಾನದಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ತಾಲೂಕಿನ ಯುವಕರಲ್ಲಿ ಹುಮ್ಮಸ್ಸು ಮೂಡಿಸುವುದು, ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಪಿ ರಾಜು ಅವರು ಸ್ಪರ್ಧೆ ಮಾಡಲಿದ್ದಾರೆ. ಹಾಗಾಗಿನಿಖಿಲ್ ಕುಮಾರಸ್ವಾಮಿ ಅವರನ್ನು ತಾಲೂಕಿಗೆ ಕರೆಸುವ ಮೂಲಕ ಪ ಸಂಟನೆಗೆ ಮತ್ತಷ್ಟು ಒತ್ತು ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ನಿಖಿಲ್ ಕುಮಾರಸ್ವಾಮಿಯವರ ಹುಟ್ಟುಹಬ್ಬದ ಬಳಿಕ ತಾಲೂಕಿನಲ್ಲಿ ಜೆಡಿಎಸ್ ಸಮಾವೇಶ ಆಯೋಜನೆ ಮಾಡಲಿದ್ದೇವೆ. ಕಾಂಗ್ರೆಸ್ ಸರ್ಕಾರ ಜಿಬಿಎ ಚುನಾವಣೆಗಾಗಿ ಬೆಂಗಳೂರು ದಣ ವಿಧಾನಸಭಾ ೇತ್ರದಲ್ಲಿ ಹಲವು ಗೊಂದಲ ಸೃಷ್ಟಿ ಮಾಡಿದೆ. ನನ್ನೊಂದಿಗೆ ಬೆಳೆದ ಯುವಕರು ನಮಗೆ ದ್ರೋಹ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಕಾಂಪೌಂಡ್ ಹಾಕಿ ಜೀವನ ಮಾಡಿಲ್ಲ. ಸಾವಿರಾರು ಜನ ಬಡವರ ಪರವಾಗಿ ಕಾರ್ಯಕ್ರಮ ರೂಪಿಸಿದ್ದೇನೆ. ಮುಂದಿನ ದಿನಗಳಲ್ಲಿ ದುರ್ಬಿನ್ ಹಾಕಿದರೂ ಕಾಂಗ್ರೆಸ್ ಎಲ್ಲಿದೆ ಎನ್ನುವ ದಿನಗಳು ದೂರ ಇಲ್ಲ ಎಂಬುದನ್ನು ನನ್ನ ವಿರೋಧಿಗಳಂತೆ ವರ್ತಿಸುವವರು ತಿಳಿದುಕೊಳ್ಳಬೇಕಿದೆ ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡ ಕೆ.ಪಿ.ರಾಜು ಮಾತನಾಡಿ, ತಾಲೂಕಿನಲ್ಲಿನ ಜಲ್ವಂತ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು ಎಂಬ ಉದ್ದೇಶದಿಂದ ಯುವಕರನ್ನು ಒಗ್ಗೂಡಿಸಿ ನಿಖಿಲ್ ಕುಮಾರಸ್ವಾಮಿಯವರ ಹುಟ್ಟು ಹಬ್ಬದ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸ್ಥಳಿಯ ಚುನಾವಣೆಗಳಲ್ಲಿ ನಮ್ಮ ಕಾರ್ಯಕರ್ತರು, ಮುಖಂಡರು ಹಾಗೂ ಯುವಕರಿಗೆ ಆದ್ಯತೆ ನೀಡಬೇಕು, ಪಂಚಾಯಿತಿ ಮೇಲ್ದರ್ಜೆಗೆ ಏರಿಸುವುದರಿಂದ ಸ್ಥಳಿಯವಾಗಿ ಆಗುವ ಸಮಸ್ಯೆಗಳು ಹಾಗೂ ಕಳೆದ 100 ದಿನಗಳಿಂದ ತಮ್ಮ ಭೂಮಿ ಉಳಿವಿಗಾಗಿ ತಾಲೂಕಿನಲ್ಲಿ ರೈತರು ಹೋರಾಟ ಮಾಡುತ್ತಿದ್ದರೂ ಸರ್ಕಾರ ಕಡೆಗಣಿಸುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲು ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಈಗಾಗಲೇ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಈ ಹೋರಾಟಕ್ಕೆ ಹೊಸ ರೂಪ ಸಿಗಲಿದೆ. ಇದಕ್ಕೆ ಯುವಕರ ಸೆಳೆತ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.
ಜೆಡಿಎಸ್ ಸೇರ್ಪಡೆ : ಇದೇ ವೇಳೆ ಹಿರಿಯರಾದ ರಾಜಣ್ಣ ಹಾಗೂ ಎಚ್.ಎಸ್ ಸಾದಿಕ್ ಪಾಷ ಕಾಂಗ್ರೆಸ್ ತೊರೆದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೊಟ್ಟಿಗೆರೆ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.