ಮುಖಂಡ ಬೂದಿಕೋಟೆ ಎ.ಬಾಬು ಮಾತನಾಡಿ, ಪಕ್ಷದ ಕಷ್ಟಕಾಲದಲ್ಲೂ ಸಂಘಟನೆ ಬಲಪಡಿಸಿ, ಕಾರ್ಯಕರ್ತರನ್ನು ಒಗ್ಗೂಡಿಸುವ ಮೂಲಕ ಕ್ಷೇತ್ರವನ್ನು ಪಕ್ಷದ ಭದ್ರಕೋಟೆಯನ್ನಾಗಿ ರೂಪಿಸುವಲ್ಲಿ ನಾರಾಯಣಸ್ವಾಮಿ ಅವರ ಪಾತ್ರ ಮಹತ್ತರವಾದುದ್ದು. ಜನಪರ ಹಾಗೂ ಅಭಿವೃದ್ಧಿ ಪರ ಚಿಂತನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅವರು ಪಕ್ಷದ ನಿಷ್ಠಾವಂತ ಕಟ್ಟಾಳಾಗಿದ್ದು, ಸಚಿವ ಸ್ಥಾನ ದೊರೆತರೆ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.