ಶಾಲಾ ಬ್ಯಾಗ್, ನೋಟ್‌ಬುಕ್, ಪೆನ್, ಪೆನ್ಸಿಲ್, ರಬ್ಬರ್, ಶಾರ್ಪನರ್, ಸ್ಕೇಲ್, ಜ್ಯಾಮಿಟ್ರಿ ಬಾಕ್ಸ್, ಕ್ರಯಾನ್ಸ್, ಮಾರ್ಕರ್, ಹೈಲೈಟರ್, ಕ್ಯಾಲ್ಕುಲೇಟರ್ ಮತ್ತು ಲಂಚ್‌ಬಾಕ್ಸ್ ಸೇರಿ ಸಾವಿರಾರು ಶೈಕ್ಷಣಿಕ ಪರಿಕರಗಳನ್ನು ಬಳಸಿ ಗಣಪತಿಗೆ ಭವ್ಯ ಅಲಂಕಾರ ಮಾಡಲಾಗಿದೆ. ಅಂದಾಜು 50 ಮಂದಿ ಕಲಾವಿದರು ಮತ್ತು ಕಾರ್ಯಕರ್ತರು 15 ದಿನಗಳ ಕಾಲ ನಿರಂತರವಾಗಿ ಶ್ರಮಿಸಿ ಈ ವಿಶೇಷ ಕಲಾಕೃತಿ ಸಿದ್ಧಪಡಿಸಿದ್ದಾರೆ.