ಮಹಿಳೆಯರ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಮಾನ್ವಿ ಕುಟುಂಬದಿಂದ ದಾನವಾಗಿ ಪಡೆದ ಜಮೀನಿನಲ್ಲಿ ಸರ್ಕಾರಿ ಈ ಆಸ್ಪತ್ರೆ ನಿಮಿರ್ಸಿದೆ. ಮಕ್ಕಳ ಆರೋಗ್ಯ ಹಾಗೂ ಮಹಿಳೆಯರ ಹೆರಿಗೆ ಸೇರಿದಂತೆ ಇನ್ನೀತರೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಯಾವ ಇಲಾಖೆಯಿಂದ ವೇತನ ಬಿಡುಗಡೆ ಮಾಡಬೇಕೆಂಬ ಗೊಂದಲ ಏರ್ಪಟ್ಟಿತ್ತು. ಎರಡೂ ಮೂರು ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸದ ನಂತರವೂ ವೇತನ ಬಾರದ ಹಿನ್ನೆಲೆ ವೈದ್ಯರು ಕೆಲಸ ತೊರೆದಿದ್ದಾರೆ. ಪ್ರಸ್ತುತ ಈ ಆಸ್ಪತ್ರೆಯಲ್ಲಿ ಕೇವಲ 3 ವೈದ್ಯರಿದ್ದಾರೆ. ಈ ಮೂವರು ವೈದ್ಯರ ನಂಬಿಕೊಂಡು ದಿನ 24 ಗಂಟೆ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಇನ್ನೂ ಇತರೆ ಸಿಬ್ಬಂದಿಗಳ ಕೊರತೆಯೂ ಇದ್ದು, ದಿನಿತ್ಯದ ಚಿಕಿತ್ಸಾ ಪ್ರಕ್ರಿಯೆ ನಡೆಸುವುದು ಕಷ್ಟವಾಗುತ್ತು. ಪ್ರತಿನಿತ್ಯ ಸರಾಸರಿ 120 ಜನರು ಆರೋಗ್ಯ ತಪಾಸಣೆ, ಇತರೆ ಚಿಕಿತ್ಸೆ, ಓಪಿಡಿಗಳಲ್ಲಿ ಚಿಕಿತ್ಸೆ, ಔಷಧಿಗೆಂದು ಆಸ್ಪತ್ರೆಗೆ ಆಗಮಿಸುತ್ತಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕಡಿಮೆ ಸಿಬ್ಬಂದಿಯಿಂದ ಸೇವೆ ನೀಡುತ್ತಿರುವುದು ಕಷ್ಟವಾಗಿದೆ ಎಂದು ಇಲ್ಲಿನ ಸಿಬ್ಬಂದಿಗಳು ಹೇಳುತ್ತಾರೆ.