ಗದಗ ವೀರಸೈವ ಮಹಾಸಭಾ ಟಕದಿಂದ ಗೋಶಾಲೆಯಲ್ಲಿ ಗೋವುಗಳ ಆರೋಗ್ಯ ತಪಾಸಣೆ ಮಾಡುವ ಮೂಲಕ ಬಸವಜಯಂತಿ ಆಚರಿಸಲಾಯಿತು. ಶರಣು ಗುಡಿಮನಿ, ಪ್ರಕಾಶ ಬಂದಾ, ಮುರು ರಾಜೇಂದ್ರ ಬಡ್ನಿ, ಶೈಲೇಶ್ ಬಾಗಮಾರ, ಮಹೇಶ ಕೋಟಿ, ಎಸ್.ಜಿ.ಹಿರೇಮಠ, ಶೇಡುಸಿಂಗ್ ಜಮಾದಾರ, ವೀರಣ್ಣ ಮಾನೇದ, ಶಿವಕುಮಾರ ಬೇವಿನಮರದ, ಪ್ರಭು ಕಾಬಳ್ಳಿ, ಮೋಹನ ದೊಡ್ಡಕುಂಡಿ, ಶೋಭಾ ಗುಗ್ಗರಿ, ಸಾವಿತ್ರಿ ಹೂಗಾರ, ಸುರೇಶ ಚಿತ್ತರಗಿ, ವಿಜಯಕುಮಾರ ಹಿರೇಮಠ, ರಮೇಶ ಪಿಳ್ಳೆ ಸೇರಿದಂತೆ ಇತರರು ಇದ್ದರು.
Published on:
Copied
Follow Us
ಗೋಶಾಲೆಯ ಸಂರತ ದನಕರುಗಳ ಆರೋಗ್ಯ ತಪಾಸಣೆ
ವಿಜಯವಾಣಿ ಸುದ್ದಿಜಾಲ ಗದಗ
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಟಕದಿಂದ ನಗರದ ಗೊಶಾಲೆಯಲ್ಲಿ ಗೋವುಗಳ ಆರೋಗ್ಯ ರಕ್ಷಣೆ ಕಾರ್ಯಕ್ರಮ ನಡೆಸುವ ಮೂಲಕ ಬಸವ ಜಯಂತಿ ಹಾಗೂ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು. ಹಿರಿಯ ಪಶು ವೈದ್ಯರಿಂದ ಗೋವುಗಳ ಆರೋಗ್ಯ ತಪಾಸಣೆ, ಗೋಶಾಲಾದಲ್ಲಿ ಪೋಷಣೆ ಗೊಳ್ಳುತ್ತಿರುವ ಸಂರತ ದನಕರುಗಳನ್ನು ನಿರ್ವಹಿಸುವ, ಕಾಳಜಿ ವಹಿಸುವ ಬಗೆ, ಗೋವುಗಳ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
ಮಹಾಸಭಾ ಜಿಲ್ಲಾಧ್ಯಕ್ಷ ಗದಗ ಜಿಲ್ಲಾ ಟಕದ ಅಧ್ಯ ಶರಬಸಪ್ಪ ಗುಡಿಮನಿ ಮಾತನಾಡಿ ಇದು ಮಾನವೀಯತೆ ಮತ್ತು ಮನ ಮಿಡಿಸುವ ಕಾರ್ಯಕ್ರಮವಾದೆ. ನಾವಿಂದು ದನಕರುಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಮಾನವ ಮತ್ತು ಕೃಷಿ ಮಿತ್ರ ಆಗಿರುವ ದನಕರುಗಳು ಕಾಮಧೇನು ಎಂದೆ ಬಣ್ಣಿಸಲಾಗಿದೆ. ಗೋಮಾತೆಯನ್ನು ಭಾರತೀಯ ಸಂಸತಿಯಲ್ಲಿ ದೇವರೆಂದು ಪೂಜಿಸಲಾಗುತ್ತಿದೆ. ಪಶು ಸಂತತಿ ಉಳಿದು ಬೆಳೆದು ಬರಲು, ಹೈನೋದ್ಯಮ, ಸಾವಯವ ಕೃಷಿ ಪದ್ಧತಿಯಲ್ಲಿ ಪಶುಗಳ ಪಾತ್ರ ಗಣನೀಯವಾಗಿದೆ ಎಂದರು.
ಪತ್ರಕರ್ತ ಬಸವರಾಜ ದಂಡಿನ ಮಾತನಾಡಿ ಯಾವುದೇ ಡಂಬಾಚಾರ, ಪ್ರತಿಷ್ಠೆ, ವೇದಿಕೆ, ಹಾರ ತುರಾಯಿ ಇಲ್ಲದೆ ಗೋಮಾತೆಯ ಸಂರಣೆಗೆ ಸಂಕಲ್ಪಬದ್ಧರಾಗಿ ಶ್ರದ್ಧಾಭಕ್ತಿಯಿಂದ ಕೈಗೊಂಡಿರುವ ಈ ಕಾರ್ಯ ನೈಜತೆ ಮತ್ತು ವಾಸ್ತವಿಕತೆಗೆ ಹೆಚ್ಚು ಒತ್ತು ನೀಡಲಾಗಿದೆ. ಇಂತಹ ಕಾರ್ಯಗಳು ಇನ್ನೂ ಹೆಚ್ಚಾಗಿ ನಡೆಯಬೇಕು ಎಂದರು.
ವೀರಶೈವ ಮಹಾಸಭಾ ತಾಲೂಕ ಟಕದ ಅಧ್ಯೆ ಲತಾ ಮುತ್ತಿನಪೆಂಡಿಮಠ ಮಾತನಾಡಿ ಮದುವೆ ವಾಷಿರ್ಕೋತ್ಸವ, ಜನ್ಮದಿನಾಚರಣೆಗೆ ಖರ್ಚು ಮಾಡುವ ಹಣವನ್ನು ಇಲ್ಲಿ ಪಶು ಆಹಾರ ನೀಡುವ ಮೂಲಕ ಆಚರಿಸುವಂತಾಗಬೇಕು ಎಂದರು.