ವಿಬಿ-ಜಿ ರಾಮ್​ಜಿ ಯೋಜನೆ ಆರಂಭದ ಅಂಗವಾಗಿ ವನಮಹೋತ್ಸವ

ವಿಬಿಜಿರಾಮ್​ಜಿ ಆರಂಭ ಹಿನ್ನೆಲೆ ಆರ್​ಡಿಪಿಆರ್​ ವಿವಿಯಲ್ಲಿ ಸಸಿ ನಡೆಯುವ ಕಾರ್ಯಕ್ರಮ ಜರುಗಿತು. ಸಿದ್ಧಲೆಂಗೇಶ್ವರ ಪಾಟೀಲ, ಸುರೇಶ ಬಾಳಿಕಾಯಿ, ನಮಮ್​ ನಾಯ್ಕ ಇತರರು ಇದ್ದರು.
ವಿಬಿಜಿರಾಮ್​ಜಿ ಆರಂಭ ಹಿನ್ನೆಲೆ ಆರ್​ಡಿಪಿಆರ್​ ವಿವಿಯಲ್ಲಿ ಸಸಿ ನಡೆಯುವ ಕಾರ್ಯಕ್ರಮ ಜರುಗಿತು. ಸಿದ್ಧಲೆಂಗೇಶ್ವರ ಪಾಟೀಲ, ಸುರೇಶ ಬಾಳಿಕಾಯಿ, ನಮಮ್​ ನಾಯ್ಕ ಇತರರು ಇದ್ದರು.
Published on
ಆರ್​ಡಿಪಿಆರ್​ ವಿವಿ 100ಕ್ಕೂ ಹೆಚ್ಚು ಸಸಿಗಳ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ
ವಿಜಯವಾಣಿ ಸುದ್ದಿಜಾಲ ಗದಗ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಸವಿ ನೆನಪನ್ನು ಸ್ಮರಿಸುವ ಹಾಗೂ ವಿಬಿ-ಜಿ ರಾಮ್​ಜಿ ಯೋಜನೆಯ ಆರಂಭವನ್ನು ಅರ್ಥ ರ್ಪೂಣವಾಗಿ ಗುರುತಿಸುವ ಹಿನ್ನೆಲೆ ನರೇಗಾ ನೌಕರರ ಾಮಾಭಿವೃದ್ಧಿ ಸಂದ ವತಿಯಿಂದ ನಗರದ ಆರ್​ಡಿಪಿಆರ್​ ವಿವಿಯಲ್ಲಿ ಗುರುವಾರ ವನಮಹೋತ್ಸವ ಕಾರ್ಯಕ್ರಮ ಜರುಗಿತು.
ಸಂದ ಗೌರವಾಧ್ಯಕ್ಷ ಸಿದ್ದಲಿಂಗೇಶ ಪಾಟೀಲ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿ ಮತ್ತು ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಆಗಿದೆ. ಒಂದು ಮರ ನೂರು ಜನರಿಗೆ ನೆರಳನ್ನು ನೀಡುವುದಲ್ಲದೆ, ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ನಿಮಿರ್ಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕನಿಷ್ಠ ಒಂದು ಸಸಿಯಾದರೂ ನೆಟ್ಟು ಅದನ್ನು ಮರವಾಗಿ ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಅವರು ಹೇಳಿದರು.
ಸಂದ ಜಿಲ್ಲಾ ಅಧ್ಯಕ್ಷ ಸುರೇಶ ಬಾಳಿಕಾಯಿ ಮಾತನಾಡಿ ನರೇಗಾ ಯೋಜನೆಯು ಗ್ರಾಮೀಣಾಭಿವೃದ್ಧಿ, ಜಲಸಂರಕ್ಷಣೆ, ಹಸಿರು ಪರಿಸರ ನಿರ್ಮಾಣ ಹಾಗೂ ಗ್ರಾಮೀಣ ಜನರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲು ಪ್ರಮುಖ ಪಾತ್ರ ವಹಿಸಿದೆ. ಹೊಸ ರೂಪದಲ್ಲಿ ಆರಂಭವಾಗುತ್ತಿರುವ ವಿಬಿ-ಜಿ ರಾಮ್​ಜಿ ಯೋಜನೆಯೂ ಗ್ರಾಮೀಣ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ನೆಡಲಾಯಿತು. ಸಾಮಾಜಿಕ ವಲಯ ಅರಣ್ಯ ಅಧಿಕಾರಿ ನಮನ್​ ನಾಯ್ಕ, ಅರಣ್ಯ ಸಿಬ್ಬಂದಿಗಳು, ಸಂದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ವಿವಿಧ ತಾಲೂಕಿನ ನರೇಗಾ ನೌಕರರು ಮತ್ತು ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net