ಅಭಿವೃದ್ಧಿ ಶೂನ್ಯ, ಸಾಲ ಗ್ಯಾರಂಟಿ, ಕಳಪೆ ಬಜೆಟ್ : ವಸಂತ ಪಡಗದ

Vasant Padaga
Vasant Padaga
Published on
ಗದಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 17ನೇ ಬಜೆಟ್ ತಿರಾ ಸಂಪೂರ್ಣ ಕಳಪೆ ಬಜೆಟ್ ಇದಾಗಿದ್ದು ಅಹಿಂದ ಅಹಿಂದ ಎನ್ನುವ ಸಿದ್ದರಾಮಯ್ಯ ರಾಜ್ಯದ ಆರ್ಥಿಕತೆಯನ್ನು ಹೆಚ್ಚುವರಿ ಸಾಲ ಮಾಡುವ ಮೂಲಕ ಜನ ವಿರೋಧಿ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಹೇಳಿದ್ದಾರೆ.
ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು  "ಅಭಿವೃದ್ಧಿ" ಎಂಬ ಪದದ ಅರ್ಥವನ್ನೇ ಕಾಂಗ್ರೆಸ್ ಸರ್ಕಾರ ಮರೆತಿದೆ  2026-27ರ ಬಜೆಟ್ ಕನ್ನಡಿಗರಿಗೆ ಬರಿ ಸಾಲದ ಸುಳಿ ಮತ್ತು ತೆರಿಗೆಯ ಹೊರೆಯನ್ನಷ್ಟೇ ನೀಡಿದೆ. 
ರಾಜ್ಯದ ಒಟ್ಟು ರಾಜಸ್ವ ಆದಾಯದ  88-90% ರಷ್ಟು ಹಣ ಕೇವಲ ಸಂಬಳ, ಪೆನ್ಷನ್ ಮತ್ತು ಸಾಲದ ಬಡ್ಡಿ ಪಾವತಿಸಲು ವ್ಯಯವಾಗುತ್ತಿದೆ. ಇದರಿಂದ ರಾಜ್ಯದ ಪ್ರಗತಿಗೆ ಹೊಸ ಯೋಜನೆಗಳನ್ನು ಜಾರಿಗೆ ತರಲು  ಹಣವೆಲ್ಲಿದೆ ಆರ್ಥಿಕ ಸ್ಥಿತಿ ಡೋಲಾಯಮಾನವಾಗಿದೆ ಎಂದು ಹೇಳಿದರು.  ಈ ವರ್ಷ ಕಾಂಗ್ರೆಸ್ ಸರ್ಕಾರ ಸುಮಾರು ₹1.32 ಲಕ್ಷ ಕೋಟಿಯಷ್ಟು ಸಾಲ ಮಾಡುತ್ತಿದೆ ಸಾಲದ ಬಹುದೊಡ್ಡ ಭಾಗವನ್ನು ಆಸ್ತಿ ಸೃಜನೆಗೆ ಬಳಸುವ ಬದಲು, ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳಿಗೆ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳ ಅಸಮರ್ಪಕ ನಿರ್ವಹಣೆಗೆ ಸುರಿಯುತ್ತಿದೆ.
 ರಾಜ್ಯದ ಒಟ್ಟು ಸಾಲ ಈಗ ₹8 ಲಕ್ಷ ಕೋಟಿ ಗಡಿ ದಾಟಿದೆ  ಇಂದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಕೃಪೆಯಿಂದ ₹22,957 ಕೋಟಿ ರಾಜಸ್ವ ಕೊರತೆಯನ್ನು ಎದುರಿಸುತ್ತಿದೆ. ವಿತ್ತೀಯ ಕೊರತೆ 1 ಲಕ್ಷ ಕೋಟಿ ಆಸುಪಾಸಿಗೆ ಬಂದಿದೆ. ಸಾಲವನ್ನೇ ಸಾಧನೆ ಎಂದು ನಂಬಿರುವ ಈ ಅಭಿವೃದ್ಧಿ ಶೂನ್ಯ ಜನವಿರೋಧಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಗದಗ ಜಿಲ್ಲೆಗೆ ನಿರಾಸೆ: 
ಕಳೆದ ಸಾಲಿನಲ್ಲೇ ಡಂಬಳದಲ್ಲಿ ತೋಟಗಾರಿಕೆ ಇಲಾಖೆ ಘೋಷಣೆ ಮಾಡಲಾಗಿತ್ತು. ಈ ವರ್ಷ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಲಕ್ಕುಂಡಿಗೆ ವಿಶೇಷ ಅನುದಾನ ಮೀಸಲೀಡಬೇಕಿತ್ತು. ಅದೂ ಕೂಡ ಈಡೇರಿಲ್ಲ ಪ್ರವಾಸೋದ್ಯಮಕ್ಕೆ ಉತ್ತೇಜವಿಲ್ಲ ಕಳಸಾ-ಬಂಡೂರಿ ಯೋಜನೆ ಚಾಲನೆ ಕುರಿತ ತುಟಿ ಬಿಚ್ಚದ ಸರ್ಕಾರ,ಗದಗ-ಬೆಟಗೇರಿ ಅವಳಿ ನಗರ ಹೊರ ವರ್ತುಲ ರಸ್ತೆ,ಕುಡಿಯುವ ನೀರಿಗೆ ಶಾಶ್ವತ ಪರಿಹಾರ,ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ನಿರ್ಮಾಣಕ್ಕೆ ಅನುದಾನ ಸೇರಿದಂತೆ ಯಾವುದೇ ವಿಶೇಷ ಪ್ಯಾಕೇಜ್ ನೀಡದೆ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net