ಭೂ ಭದಲಾವಣೆ ಪ್ರಕ್ರಿಯೆಯಲ್ಲಿ ನಗರಾಭಿವೃದ್ಧಿ ಇಲಾಖೆಯಲ್ಲಿನ ಸರ್ಕಾರದಿಂದ ನಿಯೋಜಿತ ಟಿಪಿಎಂ (ಟೌನ್ ಪ್ಲಾ$್ಯನಿಂಗ್ ಮೆಂಬರ್) ಅವರಿಂದ ದಾಖಲೆಗಳ ಪರಿಶೀಲನೆ, ಅನುಮೋದನೆಯೊಂದಿಗೆ ಭೂ ಬದಲಾವಣೆ ದಾಖಲೆಗಳು ಬೆಂಗಳೂರಿನ ಪೌರಾಡಳಿತ ಇಲಾಖೆಗೆ ಸಲ್ಲಿಕೆ ಆಗಬೇಕು. ಮೂಲಗಳ ಪ್ರಕಾರ ಟಿಪಿಎಂ ಅನುಮತಿ ಇಲ್ಲದೇ, ಸೂಕ್ತ ದಾಖಲೆಗಳನ್ನು ಲಗತ್ತಿಸದೇ ನಗರಾಭಿವೃದ್ಧಿ ಇಲಾಖೆಯಿಂದ ಆತುರವಾಗಿ ಪೌರಾಡಳಿತ ಇಲಾಖೆಗೆ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಕೆಲವು ಪ್ರಸ್ತಾವನೆಗಳಿಗೆ ಕೇವಲ ಪಹಣಿ ಲಗತ್ತಿಸಿ ಸಲ್ಲಿಸಲಾಗಿದೆ. ಭೂ ಉಪಭೋಗಕ್ಕೆ ಬೇಕಿರುವ ಸಭೆಯ ನಡವಳಿಗಳು, ಪತ್ರಿಕಾ ಪ್ರಕಟಣೆ ಪ್ರತಿ, ಮಹಾಯೋಜನೆ ಉದೃತ ಭಾಗ, ಗೂಗಲ್ ನೆ, ಪಹಣಿ, 11ಇ ನೆ, ಮುಟೇಶನ, ಉಪವಿಭಾಗಾಧಿಕಾರಿಗಳಿಂದ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ಇರುವ 19 ದಾಖಲೆಗಳೇ ಕೆಲ ಪ್ರಸ್ತಾವನೆಗಳಿಗೆ ಲಗತ್ತಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.