ಬೆಲೆ ವ್ಯತ್ಯಾಸದ ಮೊತ್ತ ಡಿಬಿಟಿ ಮೂಲಕ ಪಾವತಿಗೆ ಸೂಚನೆ

ಗದಗ ಜಿಲ್ಲಾಡಳಿ ಕಚೇರಿಯಲ್ಲಿ ಜರುಗಿದ ಟಾಸ್ಕೋರ್ಸ ಸಭೆಯಲ್ಲಿ ಮೆಕ್ಕೆಜೊಳ ಖರೀದಿ ಮತ್ತು ಮೊತ್ತ ಪಾವತಿ ಬಗ್ಗೆ ಚರ್ಚೆ ಜರುಗಿತು. ಸಿ.ಎನ್​. ಶ್ರೀಧರ, ಸುಧಾ ಬಂಡಿ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.
ಗದಗ ಜಿಲ್ಲಾಡಳಿ ಕಚೇರಿಯಲ್ಲಿ ಜರುಗಿದ ಟಾಸ್ಕೋರ್ಸ ಸಭೆಯಲ್ಲಿ ಮೆಕ್ಕೆಜೊಳ ಖರೀದಿ ಮತ್ತು ಮೊತ್ತ ಪಾವತಿ ಬಗ್ಗೆ ಚರ್ಚೆ ಜರುಗಿತು. ಸಿ.ಎನ್​. ಶ್ರೀಧರ, ಸುಧಾ ಬಂಡಿ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಪ್ರಸಕ್ತ ಸಾಲಿನ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯ ಬೆಲೆ ವ್ಯತ್ಯಾಸ ಪಾವತಿ (ಪಿಡಿಪಿಎಸ್​) ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಲ್​ ಗೆ 2150 ರಂತೆ ಸರ್ಕಾರ ಜ.4 ರಿಂದ ಆದೇಶ ಹೊರಡಿಸಿದೆ. ಮೆಕ್ಕೆಜೊಳವನ್ನು ರಾಜ್ಯ ಸಹಕಾರಿ ಮಾರಾಟ ಮಂಡಳ ನಿಯಮಿತ ಮುಖಾಂತರ ಖರೀದಿಸಲು ತಿಳಿಸಿದೆ. ಪ್ರಸಕ್ತವಾಗಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಪ್ರತಿ ಕ್ವಿಂಟಲ್​ ಗೆ 1,900 ರಲ್ಲಿ ವಹಿವಾಟಾಗುತ್ತಿದ್ದು ವ್ಯತ್ಯಾಸದ ಮೊತ್ತ ರೂ.250 ಗಳನ್ನು ಸರ್ಕಾರದ ನಿಯಮಾನುಸಾರ ಅರ್ಹ ರೈತರಿಗೆ ತಲುಪಿಸುವ ಕ್ರಮ ಸರಿಯಾಗಿ ಆಗಬೇಕೆಂದು ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಗುರುವಾರ ಜಿಲ್ಲಾ ಟಾಸ್ಕ ೋರ್ಸ ಸಮಿತಿ ಸಭೆಯ ಅಧ್ಯತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಮೆಕ್ಕೆ ಜೋಳ ಉತ್ಪನ್ನವನ್ನು ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ, ಉಪ ಮಾರುಕಟ್ಟೆಗಳಲ್ಲಿ ಯುಎನ್​ಪಿ ವೇದಿಕೆ ಮೂಲಕ 3.86 ಲ ಕ್ವಿಂಟಲ್​ ಪ್ರಮಾಣದಲ್ಲಿ ಸರ್ಕಾರದ ಆದೇಶದನ್ವಯ ವಹಿವಾಟು ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಈ ಯೋಜನೆಯಿಂದ ಪ್ರತಿ ಎಕರೆಗೆ 12 ಕ್ವಿಂಟಾಲ್​ನಂತೆ, ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ಹೊಂದಿರುವ ಜಮೀನಿನ ವಿಸ್ತಿರ್ಣಕ್ಕೆ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಟ 50 ಕ್ವಿಂಟಾಲ್​ಗೆ ಮಿತಿಗೊಳಿಸಿ ವ್ಯತ್ಯಾಸದ ಮೊತ್ತವನ್ನು ನೀಡತಕ್ಕದ್ದು. ಮೆಕ್ಕೆಜೋಳದ ಎ್​ಎಕ್ಯೂ ಗುಣಮಟ್ಟವನ್ನು ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಲು ತಾಂತ್ರಿಕ ಅಧಿಕಾರಿಗಳನ್ನು ನೇಮಿಸಬೇಕು ಎಂದರು.
ಈಗಾಗಲೇ ರಾಜ್ಯ ಸರ್ಕಾರದ ವತಿಯಿಂದ ಎಥಿನಾಲ್​ ಉತ್ಪಾದನೆಗಾಗಿ, ಕುಕ್ಕುಟ ಮತ್ತು ಪಶು ಆಹಾರ ತಯಾರಿಕಾ ಟಕಗಳಿಗೆ ಹಾಗೂ ಕೆಎಂಎ್​ಗಳಿಗೆ ಅವಶ್ಯಕವಿರುವ ಮೆಕ್ಕೆಜೋಳ ಪೂರೈಕೆ ಮಾಡಿರುವ ರೈತರಿಗೆ ಸದರಿ ಯೋಜನೆಯು ಅನ್ವಯಿಸದಂತೆ ತಂತ್ರಾಂಶದಲ್ಲಿ ಇಂದೀಕರಿಸಬೇಕು ಎಂದು ಆದೇಶಿಸಿದರು.
ಸರ್ಕಾರದಿಂದ ಮೆಕ್ಕೆಜೋಳದ ಬೆಲೆ ವ್ಯತ್ಯಾಸ ಮೊತ್ತ ಪಾವತಿಯನ್ನು ಡಿಬಿಟಿ ಮೂಲಕ ರೈತರಿಗೆ ಪಾವತಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಯೋಜನೆಯಡಿ ನೋಂದಣಿ ಕಾರ್ಯವನ್ನು ಯೋಜನಾ ಅನುಷ್ಟಾನದ ಏಜೆನ್ಸಿ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಪ್ರಾಂಗಣದಲ್ಲಿ ತೆರೆಯುವ ಕೇಂದ್ರಗಳಲ್ಲಿ ಮಾತ್ರ ನೊಂದಾಯಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ಬಂಡಿ ಮಾತನಾಡಿ ರಾಜ್ಯ ಸಹಕಾರ ಮಾರಾಟ ಮಂಡಳ ಮತ್ತು ಎಪಿಎಂಸಿ ಸಮಿತಿಯ ಕಾರ್ಯದಶಿರ್ಗಳು ದಿನಂಪ್ರತಿ ಆವಕವಾಗುವ ಮೆಕ್ಕೆಜೋಳದ ಉತ್ಪನ್ನದ ಪ್ರಮಾಣ ವಹಿವಾಟಾದ ಪ್ರಮಾಣ ಮತ್ತು ರೈತರ ಸಂಖ್ಯೆ ಇತ್ಯಾದಿ ವಿವರಗಳನ್ನು ಅಂದಿನ ದಿನವೇ ಯುಎಂಪಿ ವೇದಿಕೆಯಲ್ಲಿ ತಪ್ಪದೇ ಇಂದೀಕರಿಸಬೇಕು ಎಂದು ತಿಳಿಸಿದ್ದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಹಕಾರ ಸಂಗಳ ಇಲಾಖೆ ಅಧಿಕಾರಿಗಳು, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net