ಶಿವಾನುಭವ ಎಂದರೆ ಸತ್ಯ, ಸೌಂದರ್ಯ ಹಾಗೂ ಪ್ರಾಮಾಣಿಕತೆ : ತೋಂಟದ ಸಿದ್ಧರಾಮ ಶ್ರೀಗಳು

ಗದಗ ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸಿದ್ಧರಾಮ ಶ್ರೀಗಳು, ಸುಮಂಗಲ, ಬಸವರಾಜ ಬುಳ್ಳಾ, ಲೀಲಾ, ಶಿವಲಿಂಗಪ್ಪ ಕಂಕಣಮೇಲೆ, ಪ್ರಕಾಶ ಅಸುಂಡಿ, ಗಿರಿಜಕ್ಕ ಧರ್ಮರೆಡ್ಡಿ ಹಲವರು ಇದ್ದರು.
ಗದಗ ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸಿದ್ಧರಾಮ ಶ್ರೀಗಳು, ಸುಮಂಗಲ, ಬಸವರಾಜ ಬುಳ್ಳಾ, ಲೀಲಾ, ಶಿವಲಿಂಗಪ್ಪ ಕಂಕಣಮೇಲೆ, ಪ್ರಕಾಶ ಅಸುಂಡಿ, ಗಿರಿಜಕ್ಕ ಧರ್ಮರೆಡ್ಡಿ ಹಲವರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ

ಶಿವ ಎಂದರೆ ಕೇವಲ ದೇವರ ಅಸ್ತಿತ್ವದ ಪ್ರಶ್ನೆ ಅಲ್ಲ. ಅದು ಮಂಗಳ ಸ್ವರೂಪಿಯಾಗಿದ್ದು ಸರ್ವರನ್ನು ಸಮಭಾವದಿಂದ ಕಾಣುವ ಸತ್​& ಚಿತ್​&ಆನಂದದ ಗುಣಗಳನ್ನು ಹೊಂದಿರುವ ಮೂಲ ಸ್ವರೂಪವಾಗಿದೆ. ಶಿವಾನುಭವ ಎಂದರೆ ಸತ್ಯ, ಸೌಂದರ್ಯ ಹಾಗೂ ಪ್ರಾಮಾಣಿಕತೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಶಿವಾನುಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 54 ವರ್ಷಗಳ ಹಿಂದೆ ತೋಂಟದಾರ್ಯ ಮಠದಲ್ಲಿ ಸಮಾನ ಮನಸ್ಕರು ಸೇರಿ ಶಿವಾನುಭವ ಪ್ರಾರಂಭಿಸಿದರು. ಲಿಂಗಾಯತ ಪ್ರಗತಿಶೀಲ ಸಂ ಎಂಬ ಹೆಸರಡಿ 54 ವರ್ಷಗಳಿಂದ ನಿರಂತರವಾಗಿ ಪ್ರತಿ ಸೋಮವಾರ ಶಿವಾನುಭವ ನಡೆಸುತ್ತಾ ಬಂದಿದೆ. ಈ ಶಿವಾನುಭವ ನಾಡಿನ ವಿವಿಧ ೇತ್ರದಲ್ಲಿ ಸಾಧನೆ ಮಾಡಿದ ಮತ್ತು ತೆರೆಮರೆಯಲ್ಲಿ ಇದ್ದ ಹಲವು ಪ್ರತಿಭಾವಂತರನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡಿದೆ. ಸಿದ್ಧಲಿಂಗ ಮಹಾಸ್ವಾಮಿಗಳು ಗದುಗಿನ ತೋಂಟದಾರ್ಯ ಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡ ನಂತರದಲ್ಲಿ ತೋಂಟದಾರ್ಯ ಮಠವು ನಮ್ಮಮಠ ಎಂಬ ಭಾವ ಬರುವಂತೆ ಭಕ್ತರ ಭಾವ ಬದಲಾಯಿಸಿದರು. ಸರ್ವಜನಾಂಗದ ಶಾಂತಿ ತೋಟವನ್ನಾಗಿಸಿದರು ಎಂದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸಿದ್ದರಾಮಯ್ಯ ಪಂಚಾರಯ್ಯ ಸಂಶಿಮಠ, ಡಾ. ಅರ್ಜುನ ಗೋಳಸಂಗಿ, ಅತಾ ಹಿರೇಮಠ, ಮೇನಾ ಯರಗುಡಿ, ಶ್ವೇತಾ ಯರಗುಡಿ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net