ಶಿರಡಿ ಸಾಯಿಬಾಬಾ ಅವರ ಕೃಪೆ, ಮಹಿಮೆ ಹಾಗೂ ಜೀವನ ಸಂದೇಶಗಳು ಇಂದಿನ ಸಮಾಜಕ್ಕೂ ಸಮಾನವಾಗಿ ಪ್ರಸ್ತುತವಾಗಿದ್ದು, ನಿಶ್ಚಲ ಭಕ್ತಿಯೇ ಆತ್ಮಶಾಂತಿ ಮತ್ತು ಮೋದತ್ತ ಕೊಂಡೊಯ್ಯುವ ಮಾರ್ಗ ಎಂದು ಡಾ. ಎಸ್. ಬಿ. ಶೆಟ್ಟರ ಹೇಳಿದರು.
ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶಿರಡಿ ಸಾಯಿಬಾಬಾ ಸತ್ಸಂಗ ವತಿಯಿಂದ ಗುರುರ್ಪೂಣಿಮೆ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆಯಲ್ಲಿ ಮಾತನಾಡಿ, ಸಾಯಿಬಾಬಾ ಅವರ ಜೀವನದಲ್ಲಿ ಕಂಡುಬರುವ ಪವಾಡಗಳು ಕೇವಲ ಅಲೌಕಿಕ ಟನೆಗಳಲ್ಲ. ಅವು ಭಕ್ತಿ, ನಂಬಿಕೆ, ಕರುಣೆ ಹಾಗೂ ಸರ್ವಜೀವಿಗಳಲ್ಲಿ ದೇವರನ್ನು ಕಾಣುವ ದಿವ್ಯ ಸಂದೇಶವನ್ನು ಸಾರುವ ಆಧ್ಯಾತ್ಮಿಕ ಅನುಭವಗಳಾಗಿವೆ ಎಂದು ಅವರು ಹೇಳಿದರು.
ಬ್ರಹ್ಮಯ, ಪಿತೃಯ, ದೇವತಾಯ, ಭೂತಯ ಹಾಗೂ ಮನುಷ್ಯಯಗಳ ಆಚರಣೆಯ ಅಗತ್ಯವಿದೆ. ಅತಿಥಿಯನ್ನು ಗೌರವಿಸದೆ ಕಳುಹಿಸುವುದು ಧರ್ಮಶಾಸ್ತ್ರಗಳ ಪ್ರಕಾರ ಪಾಪವಾಗಿದ್ದು, ಅಂತಹ ಸಂದರ್ಭಗಳಲ್ಲಿ ಚಾಂದ್ರಾಯಣ ವ್ರತದಂತಹ ಪ್ರಾಯಶ್ಚಿತ್ತಗಳ ಉಲ್ಲೇಖವೂ ಶಾಸ್ತ್ರಗಳಲ್ಲಿ ಕಂಡುಬರುತ್ತದೆ ಎಂದು ಹೇಳಿದರು.
ಬಾಬಾರವರ ಆರಾಧನೆಯಲ್ಲಿ ಕೇವಲ ಆಚರಣೆಗಳಿಗಿಂತ ಅಚಲ ಭಕ್ತಿಯೇ ಮುಖ್ಯ. ಭಕ್ತಿಭಾವದಿಂದ ಸೇವೆ ಸಲ್ಲಿಸುವವರಿಗೆ ಜ್ಞಾನ, ಆತ್ಮಶಾಂತಿ ಹಾಗೂ ಪರಮಾನಂದ ಲಭಿಸುತ್ತದೆ. ನ್ಯಾಯ, ಮೀಮಾಂಸೆ ಅಥವಾ ವೇದಾಂತದ ಆಳವಾದ ಅಧ್ಯಯನಕ್ಕಿಂತ ಸಾಯಿಬಾಬಾರವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಮೋದ ಮಾರ್ಗ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಸಾಯಿಪ್ರಸಾದ ಶೆಟ್ಟರ, ರವಿಪ್ರಕಾಶ ರೆಡ್ಡಿ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಮಹೇಶಗೌಡ ತಲೇಗೌಡ್ರ, ಅಮೃತ ವಾಲಿ ಇತರರು ಇದ್ದರು.