ಮಹಿಳೆಯರು ಸಂಜೀವಿನಿಯ ಅವಕಾಶಗಳನ್ನು ಸದುಪಯೋಗ ಪಡೆಬೇಕು: ಎಸ್​. ಬಿ. ಸತ್ಯಣ್ಣವರ

ಗದಗ ತಾಲೂಕಿನ ಬೆಳದಡಿ ಗ್ರಾಮದಲ್ಲಿ ನಡೆದ ಸಂಜೀವಿನಿ ಮಹಿಳಾ ಒಕ್ಕೂಟದ ವಾಷಿರ್ಕ ಮಹಾ ಮಂಡಳಿ ಸಭೆ ಹಾಗೂ ಮಹಾ ಸಮ್ಮೇಳನವನ್ನು ಎಸ್​. ಬಿ ಸತ್ಯಣ್ಣವರ ಉದ್ಘಾಟಿಸಿದರು.  ಶಿಲ್ಪಾ ಬಾರಕೇರ, ಯಮುನಾ ತುಳಸಿಮನಿ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಗಳ ಸದಸ್ಯರು ಇದ್ದರು.
ಗದಗ ತಾಲೂಕಿನ ಬೆಳದಡಿ ಗ್ರಾಮದಲ್ಲಿ ನಡೆದ ಸಂಜೀವಿನಿ ಮಹಿಳಾ ಒಕ್ಕೂಟದ ವಾಷಿರ್ಕ ಮಹಾ ಮಂಡಳಿ ಸಭೆ ಹಾಗೂ ಮಹಾ ಸಮ್ಮೇಳನವನ್ನು ಎಸ್​. ಬಿ ಸತ್ಯಣ್ಣವರ ಉದ್ಘಾಟಿಸಿದರು. ಶಿಲ್ಪಾ ಬಾರಕೇರ, ಯಮುನಾ ತುಳಸಿಮನಿ ಗ್ರಾಮ ಪಂಚಾಯಿತಿ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಗಳ ಸದಸ್ಯರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ತಾಲೂಕಿನ ಬೆಳದಡಿ ಗ್ರಾಮದಲ್ಲಿ ಇತ್ತೀಚೆಗೆ ಪಂಚಾಯಿತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ವಾಷಿರ್ಕ ಮಹಾ ಮಂಡಳಿ ಸಭೆ ಹಾಗೂ ಮಹಾ ಸಮ್ಮೇಳನ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕ ಪಂಚಾಯತ ಗದಗ ಸಂಜೀವಿನಿ ವಲಯ ಮೇಲ್ವಿಚಾರಕ ಎಸ್​. ಬಿ ಸತ್ಯಣ್ಣವರ ಮಾತನಾಡಿ, ಗ್ರಾಮೀಣ ಮಹಿಳೆಯರ ಆಥಿರ್ಕ ಹಾಗೂ ಸಾಮಾಜಿಕ ಸಬಲೀಕರಣದಲ್ಲಿ ಸಂಜೀವಿನಿ ಯೋಜನೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರು ಸ್ವಸಹಾಯ ಸಂಗಳ ಮೂಲಕ ಉಳಿತಾಯ, ಸಾಲ ಸೌಲಭ್ಯ, ಉದ್ಯಮ ಚಟುವಟಿಕೆ ಹಾಗೂ ವಿವಿಧ ಜೀವನೋಪಾಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕು. ಮಹಿಳೆಯರ ಆಥಿರ್ಕ ಸ್ವಾವಲಂಬನೆಯೇ ಕುಟುಂಬದ ಹಾಗೂ ಗ್ರಾಮದ ಅಭಿವೃದ್ಧಿಗೆ ಬಲವಾದ ಅಡಿಪಾಯವಾಗಿದೆ ಎಂದರು.
ಸಂಜೀವಿನಿ ಯೋಜನೆಯಡಿ ಮಹಿಳೆಯರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಗ್ರಾಮೀಣ ಆಥಿರ್ಕತೆಯ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಮಹಿಳೆಯರಿಗೆ ತಲುಪಿಸುವಲ್ಲಿ ಮಹಿಳಾ ಒಕ್ಕೂಟಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷ ಶಾರದ ಇನಾಮತಿ ವಾಷಿರ್ಕ ಮಹಾ ಮಂಡಳಿ ಸಭೆಯು ಹಿಂದಿನ ಸಾಲಿನ ಚಟುವಟಿಕೆಗಳ ಪರಿಶೀಲನೆ, ಮುಂದಿನ ವರ್ಷದ ಕಾರ್ಯಯೋಜನೆ ರೂಪಿಸುವುದು ಹಾಗೂ ಮಹಿಳೆಯರ ಜೀವನೋಪಾಯ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ವೇದಿಕೆಯಾಗಿದೆ ಎಂದರು.
ಬ್ಲಾಕ್​ ಮ್ಯಾನೇಜರ್​ ಅಶ್ವಿನಿ ಪಾಟೀಲ್​ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾದರೆ ಕುಟುಂಬ ಬಲಿಷ್ಠವಾಗುತ್ತದೆ. ಕುಟುಂಬಗಳು ಬಲಿಷ್ಠವಾದರೆ ಗ್ರಾಮ ಅಭಿವೃದ್ಧಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಸಂಜೀವಿನಿಯ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬರಬೇಕು ಎಂದರು.
ಎಸ್​. ಸಿ. ಕರಡಿಗುಡ್ಡ ಮಾತನಾಡಿ ಆರೋಗ್ಯದ ಕಡೆ ಗಮನ ನೀಡಬೇಕು. ಶುದ್ಧವಾದ ನೀರು ರಾಸಾಯನಿಕ ಅಲ್ಲದ ವಸ್ತುಗಳನ್ನು ಸೇವನೆ ಮಾಡಿ ಮಕ್ಕಳಿಗೂ ಒಳ್ಳೆ ಸಂಸ್ಕಾರ ನೀಡಬೇಕು. ಇದರಿಂದ ್ಮ ಆಥಿರ್ಕ ಅಭಿವೃದ್ಧಿ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಚನ್ನವ್ವ ಹದ್ದಣ್ಣವರ, ಸವಿತಾ ನಾಯಕ, ಗಂಗಮ್ಮ ನಾಯಕ, ಸರಸ್ವತಿ ಬಾರಕೇರ, ಕಮಲಬಾಯಿ ಪ್ರಚಾರ, ದ್ರಾಾಯಿಣಿ ಬಡಗೇರ, ರಜೀಯಾ ಬೇಗಂ, ಶಾರದ ಮಾಳಣ್ಣವರ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net