ಶ್ರೀಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ

 ಗದಗ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಏರ್ಪಡಿಸಿದ್ದ ಪ್ರವಚನ ಮಾಲಿಕೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ. ಎಸ್​. ಬಿ. ಶೆಟ್ಟರ, ಮಹೇಶಗೌಡ ತಲೇಗೌಡ್ರ, ಅಮೃತ ವಾಲಿ ಇತರರು ಇದ್ದರು.
ಗದಗ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಏರ್ಪಡಿಸಿದ್ದ ಪ್ರವಚನ ಮಾಲಿಕೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ. ಎಸ್​. ಬಿ. ಶೆಟ್ಟರ, ಮಹೇಶಗೌಡ ತಲೇಗೌಡ್ರ, ಅಮೃತ ವಾಲಿ ಇತರರು ಇದ್ದರು.
Published on

ಸತ್ಯ, ಧರ್ಮ ಮತ್ತು ಸದಾಚಾರದಿಂದ ಆತ್ಮಜ್ಞಾನದ ದಾರಿ ತೆರೆದುಕೊಳ್ಳುತ್ತದೆ: ಡಾ. ಎಸ್​. ಬಿ. ಶೆಟ್ಟರ

ವಿಜಯವಾಣಿ ಸುದ್ದಿಜಾಲ ಗದಗ
ವೈರಾಗ್ಯ, ಅಂತರಮುಖತೆ, ಪಾಪ ವಿಮುಕ್ತಿ, ಸದಾಚಾರ, ಸತ್ಯನಿಷ್ಠೆ, ಇಂದ್ರಿಯನಿಗ್ರಹ ಹಾಗೂ ಶುದ್ಧ ಮನಸ್ಸು ಬ್ರಹ್ಮಜ್ಞಾನಕ್ಕೆ ಅಗತ್ಯ ಅರ್ಹತೆಗಳಾಗಿವೆ. ಜಪ ತಪಗಳಿಗಿಂತ ಮನಸ್ಸಿನ ಪರಿಶುದ್ಧತೆ ಮುಖ್ಯವಾಗಿದ್ದು, ದುಶ್ಚಗುಣಗಳನ್ನು ತ್ಯೆಜಿಸಿ ಸತ್ಯ, ಧರ್ಮ ಮತ್ತು ಸದಾಚಾರವನ್ನು ಪಾಲಿಸಿದಾಗ ಮಾತ್ರ ಆತ್ಮಜ್ಞಾನದ ದಾರಿ ತೆರೆದುಕೊಳ್ಳುತ್ತದೆ ಎಂದು ಚಿಂತಕ ಹಾಗೂ ವೈದ್ಯ ಡಾ. ಎಸ್​.ಬಿ. ಶೆಟ್ಟರ ಹೇಳಿದರು.
ನಗರದ ಶಿರಡಿ ಸಾಯಿಬಾಬಾ ಸತ್ಸಂಗದ ವತಿಯಿಂದ ಗುರುರ್ಪೂಣಿಮೆ ಅಂಗವಾಗಿ ನಗರದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿ ಮಾತನಾಡಿದರು.
ಮನುಷ್ಯನು ಹೊರಜಗತ್ತನ್ನು ಗೆಲ್ಲುವ ಪ್ರಯತ್ನಕ್ಕಿಂತ ಮೊದಲು ತನ್ನ ಮನಸ್ಸು, ಅಹಂಕಾರ ಮತ್ತು ಇಂದ್ರಿಯಗಳನ್ನು ಗೆಲ್ಲಬೇಕು. ಸದ್ಗುರುವಿನ ಮಾರ್ಗದರ್ಶನ, ಅಂತರಮುಖತೆ, ವೈರಾಗ್ಯ, ಶ್ರದ್ಧೆ ಹಾಗೂ ಮನಸ್ಸಿನ ಶುದ್ಧತೆಯ ಮೂಲಕವೇ ಆತ್ಮಜ್ಞಾನ ಮತ್ತು ಬ್ರಹ್ಮಜ್ಞಾನವನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಸಾಯಿಬಾಬಾ ಸಚ್ಚರಿತ್ರೆಯ ಬ್ರಹ್ಮಜ್ಞಾನದ ತತ್ವವನ್ನು ವಿವರಿಸಿದ ಅವರು, ಬಾಬಾ ಅವರು ಭಕ್ತರು ಪ್ರೀತಿ, ಶ್ರದ್ಧೆ ಹಾಗೂ ನಿಷ್ಕಾಮ ಭಾವದಿಂದ ಸರ್ಮಪಿಸಿದ ಕಾಣಿಕೆಯನ್ನು ಮಾತ್ರ ಸ್ವೀಕರಿಸುತ್ತಿದ್ದರು. ಅಹಂಕಾರ ಮತ್ತು ಆಡಂಬರದಿಂದ ಸಲ್ಲಿಸುವ ಅರ್ಪಣೆಗೆ ಮನ್ನಣೆ ನೀಡುತ್ತಿರಲಿಲ್ಲ ಎಂದು ಹೇಳಿದರು.
ಸಾಯಿಬಾಬಾರವರ ಶ್ರದ್ಧೆಯ ಸಂದೇಶವನ್ನು ಉಲ್ಲೇಖಿಸಿದ ಅವರು, ಗುರುವಿಗೆ ನೀಡಬೇಕಾದ ನಿಜವಾದ ದಣೆ ಹಣವಲ್ಲ. ದೃಢನಂಬಿಕೆ ಮತ್ತು ತಾಳ್ಮೆ. ಅಹಂಭಾವ, ಮೋಹ ಹಾಗೂ ಲಾಪೇೆಯನ್ನು ತ್ಯಜಿಸಿ ದೇವರ ಮೇಲಿನ ನಿಷ್ಕಪಟ ಪ್ರೀತಿಯನ್ನು ಬೆಳೆಸಿದಾಗ ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವೈರಾಗ್ಯ ಹಾಗೂ ಅಂತಿಮವಾಗಿ ಬ್ರಹ್ಮಜ್ಞಾನ ಲಭಿಸುತ್ತದೆ ಎಂದು ಹೇಳಿದರು.
ಗುರುಚರಿತ್ರೆ, ರಾಮರಾ ಸ್ತೋತ್ರ ಪಾರಾಯಣ, ನಿರಂತರ ಆಧ್ಯಾತ್ಮಿಕ ಅಧ್ಯಯನ ಹಾಗೂ ಸದ್ಗುರುವಿನ ಸಾನ್ನಿಧ್ಯ ಜೀವನವನ್ನು ಸಾರ್ಥಕ ಗೊಳಿಸುತ್ತವೆ. ಭಗವಂತನ ನಿರಾಕಾರ ಸ್ವರೂಪವನ್ನು ಧ್ಯಾನಿಸಿ ಮನಸ್ಸನ್ನು ಶುದ್ಧಗೊಳಿಸಿಕೊಂಡರೆ ಜೀವನದ ನಿಜವಾದ ಶಾಂತಿ ಮತ್ತು ಆತ್ಮಸಾಾತ್ಕಾರ ಸಾಧ್ಯವಾಗುತ್ತದೆ ಎಂದು ಡಾ. ಶೆಟ್ಟರ್​ ಹೇಳಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಹೇಶಗೌಡ ತಲೇಗೌಡ್ರ, ಅಮೃತ ವಾಲಿ ಇತರರು ಇದ್ದರು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net