ಸಫಾಯಿ ಕರ್ಮಚಾರಿಗಳಿಗೆ ಯೋಜನೆಗಳ ಸೌಲಭ್ಯ ವಿಳಂಬ ಮಾಡದೇ ತಲುಪಿಸಿ: ಸಿ. ಎನ್​. ಶ್ರೀಧರ

ಗದಗ ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಸಾಯಿ ಕರ್ಮಚಾರಿ ಯೋಜನೆಗಳ ಕುರಿತು ಸಭೆ ಜರುಗಿತು. ನಂದಾ ಹನಬರಟ್ಟಿ, ಬಸವರಾಜ ಕೋಟುರು, ಮಹಾಂತೇಶ ಸಜ್ಜನರ, ಡಾ.ಬಿ.ಸಿ.ಕರಿಗೌಡ್ರ, ಸಂತೋಷ ಎಂ. ವಿ., ಇತರರು ಇದ್ದರು.
ಗದಗ ಜಿಲ್ಲಾಧಿಕಾರಿ ಸಿ.ಎನ್​. ಶ್ರೀಧರ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದಲ್ಲಿ ಸಾಯಿ ಕರ್ಮಚಾರಿ ಯೋಜನೆಗಳ ಕುರಿತು ಸಭೆ ಜರುಗಿತು. ನಂದಾ ಹನಬರಟ್ಟಿ, ಬಸವರಾಜ ಕೋಟುರು, ಮಹಾಂತೇಶ ಸಜ್ಜನರ, ಡಾ.ಬಿ.ಸಿ.ಕರಿಗೌಡ್ರ, ಸಂತೋಷ ಎಂ. ವಿ., ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಸಫಾಯಿ ಕರ್ಮಚಾರಿಗಳಿಗೆ ಯೋಜನೆಗಳ ಸೌಲಭ್ಯ ವಿಳಂಬ ಮಾಡದೇ ತಲುಪಿಸುವಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪೌರಕಾಮಿರ್ಕರ ಆರೋಗ್ಯ ರಕ್ಷಣೆ ಮುಖ್ಯವಾಗಿದೆ. ಅವರಿಗೆ ಗುಣಮಟ್ಟದ ಶುಚಿಯಾದ ಉಪಹಾರ ವಿತರಣೆ ಆಗುವಂತೆ ನೋಡಿಕೊಳ್ಳಬೇಕು. ಸಫಾಯಿ ಕರ್ಮಚಾರಿಗಳು ಕೆಲಸ ಮಾಡುವಾಗ ಬಳಸುವ ಹ್ಯಾಂಡ್​ ಗ್ಲೌಸ್​, ಮಾಸ್ಕ, ಬೂಟ್​, ಸುರಕ್ಷತಾ ಜಾಕೆಟ್​ ಮುಂತಾದ ಸುರಕ್ಷತಾ ಪರಿಕರಗಳನ್ನು ನೀಡಬೇಕು ಮತ್ತು ಅವು ಸದ್ಭಳಕೆ ಆಗುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು ಎಂದರು.
ಸಫಾಯಿ ಕರ್ಮಚಾರಿಗಳಿಗೆ ನಿಗದಿತ ಸಮಯಕ್ಕೆ ನಿಗದಿಪಡಿಸಿದ ವೇತನ ಪಾವತಿಸುವುದು ಹಾಗೂ ವಿವಿಧ ಸೌಲಭ್ಯಗಳನ್ನು ದೊರಕಿಸಿ ಕೊಡುವುದು ಅಧಿಕಾರಿಗಳು ಮಾಡಬೇಕು. ಗುತ್ತಿಗೆ ಸಫಾಯಿ ಕರ್ಮಚಾರಿಗಳಿಗೆ ಗುತ್ತಿಗೆ ಏಜೆನ್ಸಿದಾರರು ಸಮಯಕ್ಕೆ ಸರಿಯಾಗಿ ನಿಗದಿಪಡಿಸಿದ ವೇತನ ಸೌಲಭ್ಯಗಳನ್ನು ವಿತರಿಸುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಹಾಗೂ ವೇತನದೊಂದಿಗೆ ಇಎಸ್​ಐ, ಪಿಎಫ್​ ಪಾವತಿಸುವ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಇದ್ದರೆ ಮಾತ್ರವೇ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಸಭೆಯಲ್ಲಿ ಪೌರಕಾಮಿರ್ಕರಿಗೆ ಭೀಮಾಶ್ರಯ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಕ್ರಮ ವಹಿಸುವ ಕುರಿತು ಚಚಿರ್ಸಲಾಯಿತು. ಅನೈರ್ಮಲ್ಯ ಶೌಚಾಲಯಗಳ ನೆಲಸಮಗೊಳಿಸುವುದು ಹಾಗೂ ಸುರಕ್ಷತಾ ಪರಿಕರಗಳ ಬಳಕೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳ ಏರ್ಪಡಿಸುವ ಬಗ್ಗೆ ಚಚಿರ್ಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್​ಪಿ ಮಹಾಂತೇಶ ಸಜ್ಜನರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ.ಸಿ.ಕರಿಗೌಡ್ರ, ಲೀಡ ಬ್ಯಾಂಕ ಮ್ಯಾನೇಜರ ಸಂತೋಷ ಎಂ. ವಿ., ರೇಣುಕಾ ದೊಡ್ಡಮನಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net