ಮಹಿಳಾ ಸಬಲೀಕರಣ, ಸಾಮಾಜಿಕ ಸಾಮರಸ್ಯವೇ ಬಲಿಷ್ಠ ರಾಷ್ಟ್ರದ ಅಡಿಪಾಯ: ಗೋಪಿ ಜಿ.ಅಭಿಮತ

 ಗದಗ ಸೇವಾ ಚೇತನ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂದ ಗದಗ ಜಿಲ್ಲಾ ಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 100 ವರ್ಷಗಳ ಸಂಯಾತ್ರೆ ಕಾರ್ಯಕ್ರಮದಲ್ಲಿ ಗೋಪಿ ಜಿ ಮಾತನಾಡಿದರು.
ಗದಗ ಸೇವಾ ಚೇತನ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂದ ಗದಗ ಜಿಲ್ಲಾ ಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 100 ವರ್ಷಗಳ ಸಂಯಾತ್ರೆ ಕಾರ್ಯಕ್ರಮದಲ್ಲಿ ಗೋಪಿ ಜಿ ಮಾತನಾಡಿದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಮಹಿಳಾ ಸಬಲೀಕರಣ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಣೆ ಹಾಗೂ ಜವಾಬ್ದಾರಿಯುತ ನಾಗರಿಕ ಪ್ರಜ್ಞೆ ಇಂದಿನ ಸಮಾಜದ ಪ್ರಮುಖ ಅಗತ್ಯಗಳಾಗಿದೆ. ಇವುಗಳ ಸಮನ್ವಯದಿಂದಲೇ ಉತ್ತಮ ಸಮಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂದ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾಗೂ ಚಿಂತಕರಾ ಗೋಪಿ ಜಿ ಹೇಳಿದರು.
ನಗರದ ಸೇವಾ ಚೇತನ ಸಭಾಂಗಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂದ ಗದಗ ಜಿಲ್ಲಾ ಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 100 ವರ್ಷಗಳ ಸಂಯಾತ್ರೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪ್ರಮುಖ ನಾಗರಿಕರ ಗೋಷ್ಠಿಯಲ್ಲಿ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರ ಗೌರವ, ಸುರತೆ ಮತ್ತು ಸಮಾನ ಅವಕಾಶಗಳ ಕುರಿತು ಇನ್ನಷ್ಟು ಜಾಗೃತಿ ಮೂಡಬೇಕಿದೆ ಎಂದು ಹೇಳಿದರು.
ಭಾರತೀಯ ಸಂಸತಿಯಲ್ಲಿ ಮಹಿಳೆಯನ್ನು ಶಕ್ತಿ, ತ್ಯಾಗ, ಸೇವೆ ಮತ್ತು ಸೃಜನಶೀಲತೆಯ ಪ್ರತಿಕವಾಗಿ ಕಾಣಲಾಗುತ್ತದೆ. ಶಿಣ, ವಿಜ್ಞಾನ, ಕ್ರೀಡೆ, ರಾಜಕೀಯ, ರಣಾ ೇತ್ರ ಸೇರಿದಂತೆ ಎಲ್ಲ ವಲಯಗಳಲ್ಲೂ ಮಹಿಳೆಯರು ಸಾಧನೆಯ ಹೊಸ ಅಧ್ಯಾಯಗಳನ್ನು ಬರೆಯುತ್ತಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ ಎಂದರು.
ಇಂದಿನ ಯುಗದಲ್ಲಿ ಮಹಿಳೆಯರ ವಿರುದ್ಧದ ಹಿಂಸೆ, ಲಿಂಗ ತಾರತಮ್ಯ, ವರದಣೆ, ಬಾಲ್ಯ ವಿವಾಹ ಹಾಗೂ ಆಥಿರ್ಕ ಅಸಮಾನತೆಗಳಂತಹ ಸಮಸ್ಯೆಗಳು ಇನ್ನೂ ಮುಂದುವರಿದಿರುವುದು ಕಳವಳಕಾರಿ ಸಂಗತಿ. ಮಹಿಳಾ ಸಬಲೀಕರಣ ಕೇವಲ ಕಾನೂನುಗಳ ಮೂಲಕ ಸಾಧ್ಯವಲ್ಲ. ಸಮಾಜದ ಮನೋಭಾವದಲ್ಲಿ ಸಕಾರಾತ್ಮಕ ಬದಲಾವಣೆ ಮೂಡಿದಾಗ ಮಾತ್ರ ನಿಜವಾದ ಪರಿವರ್ತನೆ ಸಾಧ್ಯ. ಹಿಂದುತ್ವವು ಕೇವಲ ಧಾಮಿರ್ಕ ಆಚರಣೆಗಳ ವ್ಯಾಪ್ತಿಗೆ ಸೀಮಿತವಾಗಿಲ್ಲ. ಅದು ಸಹೋದರತ್ವ, ಸಹಬಾಳ್ವೆ, ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ ಜೀವನದರ್ಶನವಾಗಿದೆ ಎಂದು ಹೇಳಿದರು.
ಪರಿಸರ ಸಂರಣೆ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಮನೋಭಾವ ಹಾಗೂ ನಾಗರಿಕ ಕರ್ತವ್ಯಗಳ ಪಾಲನೆ ಇಂದಿನ ಕಾಲಟ್ಟದಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಪ್ಲಾಸ್ಟಿಕ್​ ಬಳಕೆ, ನೀರಿನ ದುರುಪಯೋಗ ಮತ್ತು ಅತಿಯಾದ ಉಪಭೋಗದಿಂದ ಪರಿಸರದ ಮೇಲೆ ಅತೀ ಹೆಚ್ಚು ಪರಿಣಾಮ ಬೀರುತ್ತಿದೆ ಎಂದರು.
ಭಾರತೀಯ ಕುಟುಂಬ ವ್ಯವಸ್ಥೆ ನಮ್ಮ ಸಂಸತಿಯ ಶಕ್ತಿಕೇಂದ್ರವಾಗಿದ್ದು, ಭಾರತೀಯ ಭಾಷೆ, ವೇಷಭೂಷಣ, ಆಹಾರ ಪದ್ಧತಿ ಹಾಗೂ ಸಾಂಸತಿಕ ಮೌಲ್ಯಗಳ ಬಗ್ಗೆ ಹೆಮ್ಮೆ ಮತ್ತು ಬದ್ಧತೆ ಬೆಳೆಸಿಕೊಳ್ಳುವ ಅಗತ್ಯವಿದೆ. ಸಾಮಾಜಿಕ ಸಾಮರಸ್ಯದ ಕೊರತೆಯಿಂದ ಜಾತಿ ವೈಮನಸ್ಸು, ವಿಭಜನೆ ಮತ್ತು ಪರಸ್ಪರ ಅವಿಶ್ವಾಸ ಹೆಚ್ಚಾಗುತ್ತಿವೆ. ಪರಸ್ಪರ ಗೌರವ, ಸಹಕಾರ ಮತ್ತು ಪೂರಕತೆಯ ಮನೋಭಾವ ಬೆಳೆಸಿದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪ್ರಸ್ತುತ ಸಮಾಜ ಎದುರಿಸುತ್ತಿರುವ ಪರಿಸರ, ಕುಟುಂಬ, ಸಾಮಾಜಿಕ ಸಾಮರಸ್ಯ ಹಾಗೂ ನಾಗರಿಕ ಜವಾಬ್ದಾರಿಯಂತಹ ಸವಾಲುಗಳಿಗೆ ಸಮೂಹ ಚಿಂತನೆ ಮತ್ತು ಜನಸಹಭಾಗಿತ್ವದ ಪರಿಹಾರಗಳೇ ಉತ್ತರವಾಗಿವೆ ಎಂದು ಗೋಪಿ ಜಿ ಅಭಿಪ್ರಾಯಪಟ್ಟರು.
ಜಿಲ್ಲಾ ಸಂಚಾಲಕ ಮಾರುತಿ ಕಟ್ಟಿಮನಿ, ರವಿ ಬಡಿಗೇರ, ಡಾ.ಉಮೇಶ ಹಾದಿ, ಬಸವರಾಜ ಪಟ್ಟಣಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net