ಮೆ. 25ರಂದು ವಾರಣಾಸಿಯಲ್ಲಿ ಅಸಹಕಾರ ಚಳುವಳಿ ಜನ ಕಲ್ಯಾಣ ಯಾತ್ರೆ

ವಾರಣಾಸಿಯಲ್ಲಿ ಅಸಹಕಾರ ಚಳುವಳಿ ಮಾಡುವ ಕುರಿತು ಬಸವರಾಜ ನವಲಗುಂದ ಸುದ್ದಿಗೋಷ್ಟಿ ನಡೆಸಿದರು. ಫಕ್ಕಿರಪ್ಪ ಹೆಬಸೂರ, ರ್ಬಕತಲಿ ಮುಲ್ಲಾ, ಮಾಬುಖಾನ್​ ಪಠಾಣ, ಮಾಂತೇಶ ನೆಲೂಡಿ, ರವಿಗೌಡ ಪಾಟೀಲ ಹಾಗೂ ಬಸಪ್ಪ ವಡ್ಡರ ಇತರರು ಇದ್ದರು.
ವಾರಣಾಸಿಯಲ್ಲಿ ಅಸಹಕಾರ ಚಳುವಳಿ ಮಾಡುವ ಕುರಿತು ಬಸವರಾಜ ನವಲಗುಂದ ಸುದ್ದಿಗೋಷ್ಟಿ ನಡೆಸಿದರು. ಫಕ್ಕಿರಪ್ಪ ಹೆಬಸೂರ, ರ್ಬಕತಲಿ ಮುಲ್ಲಾ, ಮಾಬುಖಾನ್​ ಪಠಾಣ, ಮಾಂತೇಶ ನೆಲೂಡಿ, ರವಿಗೌಡ ಪಾಟೀಲ ಹಾಗೂ ಬಸಪ್ಪ ವಡ್ಡರ ಇತರರು ಇದ್ದರು.
Published on
ವಿವಿಧ ಬೇಡಿಕೆಗಳ ಈಡೇರಿಕೆಗೆ ಬೆಂಗಳೂರ ಚಲೋ ಯಾತ್ರೆ
ವಿಜಯವಾಣಿ ಸುದ್ದಿಜಾಲ ಗದಗ
ವಿವಿಧ ಜನಪರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆ. 25ರಂದು ಉತ್ತರ ಪ್ರದೇಶದ ವಾರಣಾಸಿಯ ಡಿಸಿ ಕಚೇರಿ ಎದುರು ಅಸಹಕಾರ ಚಳುವಳಿ ಜನ ಕಲ್ಯಾಣ ಯಾತ್ರೆ ಹಾಗೂ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಂಡರಗಿ ತಾಲೂಕ ಸಾರ್ವಜನಿಕ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಡರಗಿ ಭಾಗದ ಬಹುಕಾಲದ ಬೇಡಿಕೆಗಳ ಬಗ್ಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ಹಲವು ಹಂತದ ಹೋರಾಟಗಳನ್ನು ನಡೆಸಲಾಗಿದೆ. ಗದಗ- ಹರಪನಹಳ್ಳಿ ರೈಲ್ವೆ ಮಾರ್ಗ, ರಾಷ್ಟ್ರೀಯ ಹೆದ್ದಾರಿ, ಸರ್ಕಾರಿ ಸೌಲಭ್ಯಗಳ ವಿಸ್ತರಣೆ ಸೇರಿದಂತೆ ಅನೇಕ ಪ್ರಮುಖ ವಿಚಾರಗಳಲ್ಲಿ ಸರ್ಕಾರ ನಿರ್ಲಕ್ಷ$್ಯ ವಹಿಸಿದೆ. ಗದಗ -ಹರಪನಹಳ್ಳಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಆಗ್ರಹಿಸಿ ಈ ಹಿಂದೆ ಅಂದಿನ ಸಂಸದ ಶಿವಕುಮಾರ ಉದಾಸಿ ಕಚೇರಿ ಎದುರು ಧರಣಿ ನಡೆಸಲಾಗಿತ್ತು. ನಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೂ ಮನವಿ ನೀಡಲಾಗಿದೆ. ಆದರೆ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ದೆಹಲಿಯ ಜಂತರ್​-ಮಂತರ್​ನಲ್ಲಿ ಹೋರಾಟ ಆರಂಭಿಸಿದ ಬಳಿಕ ಮತ್ತೊಮ್ಮೆ ಸರ್ವೆಗೆ 9 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು ಎಂದರು.
ಕೊಪ್ಪಳ- & ಮುಂಡರಗಿ & -ಶಿಗ್ಗಾವಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 2017ರಲ್ಲಿ ಕೇಂದ್ರ ಸಚಿವ ನಿತಿನ್​ ಗಡ್ಕರಿ ಗುದ್ದಲಿ ಪೂಜೆ ನೆರವೇರಿಸಿದ್ದರು. ಹಲವು ವರ್ಷಗಳು ಕಳೆದರೂ ಯೋಜನೆ ಅನುಷ್ಠಾನವಾಗಿಲ್ಲ. ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಈ ಕಾಮಗಾರಿ ರ್ಪೂಣಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮುಂಡರಗಿ ಪಟ್ಟಣದ ಅಂಚೆ ಕಚೇರಿ ನಿರ್ಮಾಣಕ್ಕೂ ಆಗ್ರಹಿಸಿದ ಅವರು, 42 ವರ್ಷಗಳ ಹಿಂದೆ ಜಾಗ ಖರೀದಿಸಿದ್ದರೂ ಇಂದಿಗೂ ಕಟ್ಟಡ ನಿರ್ಮಾಣ ಆಗದಿರುವುದು ವಿಷಾದನೀಯ ಸಂಗತಿ. ಅರಭಾವಿ- ಚಳ್ಳಕೆರೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಭವ್ಯ ಜಾಗದಲ್ಲಿ ತಕ್ಷಣ ಅಂಚೆ ಕಚೇರಿ ಕಟ್ಟಡ ನಿಮಿರ್ಸಬೇಕು. ಈ ಎಲ್ಲ ಆಗ್ರಹಗಳ ಹಿನ್ನೆಲೆ ವಾರಣಾಸಿಯಲ್ಲಿ ಚಳುವಳಿ ನಡೆಸಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಫಕ್ಕಿರಪ್ಪ ಹೆಬಸೂರ, ರ್ಬಕತಲಿ ಮುಲ್ಲಾ, ಮಾಬುಖಾನ್​ ಪಠಾಣ, ಮಾಂತೇಶ ನೆಲೂಡಿ, ರವಿಗೌಡ ಪಾಟೀಲ ಹಾಗೂ ಬಸಪ್ಪ ವಡ್ಡರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net