ಜಿಲ್ಲೆಯಲ್ಲಿ ನಡೆಯುವ ತೋಂಟದಾರ್ಯ ಜಾತ್ರಾ ಮಹೋತ್ಸವವನ್ನು ಕೇವಲ 6 ದಿನಕ್ಕೆ ಸೀಮಿತ ಮಾಡಬೇಕು ಎಂದು ಹೇಳುವ ರಾಜು ಖಾನಪ್ಪನವರ ಹೇಳಿಕೆಯನ್ನು ವಿವಿಧ ರೈತ ಸಂಟನೆಗಳ ವತಿಯಿಂದ ವಿರೋಧಿಸಲಾಗುತ್ತದೆ ಎಂದು ರೈತ ಮುಖಂಡ ಶಿವಲಿಂಗಪ್ಪ ಬೋಪಳಪುರ ಹೇಳಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಘೋಷ್ಠಿಯಲ್ಕಿ ಮಾತನಾಡಿ, ಎಲ್ಲ ಜನಾಂಗದವರನ್ನು ಒಂದು ಗೂಡಿಸಿ ಹಲವಾರು ದಶಕಗಳಿಂದ ತೋಂಟದಾರ್ಯ ಜಾತ್ರೆಯನ್ನು ತಿಂಗಳಾನುಗಟ್ಟಲೆ ನಡೆಸುತ್ತಿದೆ. ಆದರೆ ಇದನ್ನು ವಿರೋಧಿಸಿ ಜಾತ್ರೆಯನ್ನು ಕೇವಲ 6 ದಿನಕ್ಕೆ ಸೀಮಿತ ಗೊಳಿಸಬೇಕು ಎನ್ನುವ ರಾಜು ಖಾನಪ್ಪನವರ ಮಾತಿನಲ್ಲಿ ಸತ್ಯವಿಲ್ಲ ಎಂದು ಆರೋಪಿಸಿದರು.
ರೈತ ಮುಖಂಡ ಸಂಗಣ್ಣ ದಂಡಿನ ಮಾತನಾಡಿ, ಜಾತ್ರೆಯೆಂದರೆ ಹಸಿದವರಿಗೆ ಅನ್ನವನ್ನು ನೀಡಿ ಎಲ್ಲರನ್ನೂ ಸಂತೈಸುವ ಕೆಲಸ. ಆ ಕೆಲಸವನ್ನು ತೋಂಟದಾರ್ಯ ಮಠದವರು ಪುರಾತನ ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಈಗ ಕೆಲವರು ಜಾತ್ರೆಯನ್ನು 6 ದಿನಕ್ಕೆ ಸೀಮಿತ ಗೊಳಿಸಿ ಎನ್ನುವರು ಮುಂದೊಂದು ದಿನ ಜಾತ್ರೆಯನ್ನೇ ನಿಲ್ಲಿಸಿ ಎನ್ನುತ್ತಾರೆ. ಆದರಿಂದ ಇಂತಹ ಹೇಳಿಕೆಗಳಿಗೆ ಯಾರು ಕಿವಿಗೊಡದೆ ಜಾತ್ರೆಯನ್ನು ಮಾಡಬೇಕು. ಜಾತ್ರೆಯಲ್ಲಿ ಬೇರೆ ರಾಜ್ಯದವರು ಇಲ್ಲಿಗೆ ಬಂದು ವ್ಯಾಪಾರ ಮಾಡುವುದು ನಮ್ಮ ಜಿಲ್ಲೆಯ ಹೆಮ್ಮೆ ಹಾಗೂ ಇವತ್ತಿನ ಕಾಲದಲ್ಲಿ ಯಾರು ಎಲ್ಲಿ ಬೇಕಾದರೂ ವ್ಯಾಪಾರ ಮಾಡಲು ಹಕ್ಕಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಲ್ಲಪ್ಪ ಚಳಗೇರಿ, ಬಸವರಾಜ ಶಾಲವಾಡಿ, ವಿಜಯಕುಮಾರ ಸುಂಕದ, ಕಾವ್ಯ ಸೋಮನಕಟ್ಟಿ, ವಸಂತ ಮಾರಬಸರಿ, ವೀರೇಶ ಕಾಗಹಾಳ, ರುದ್ರಯ್ಯ ಸಾಲಿಮಠ, ಬಸವರಾಜ ಬಸವಗೋಯ, ರಾಮಣ್ಣ ಸೂಡಿ ಇದ್ದರು.