ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಅಧ್ಯಯನ ಪೀಠ ಪ್ರಾರಂಭಿಸಲು ಒತ್ತಾಯ: ಹಿಡಿಕಿಮಠ

Gadag
Gadag
Published on
ಗದಗ: ಸಂಗೀತ ಸಾಹಿತ್ಯ ಕಲೆಗೆ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಕೊಡುಗೆ ಅಪಾರ ವಾಗಿದ್ದು ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಪ್ರಾರಂಬಿಸಬೇಕೆಂದು ಪ್ರಾಚಾರ್ಯ ಗಂಗಾಧರ ಹಿಡಿಕಿಮಠ ಅವರು ಹೇಳಿದರು.
ಡಾ ಪಿ ಜಿ ಎ ಎಸ ಸಮಿತಿಯ ಪಡಿಂತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸ್ನಾತಕೋತರ ಕೇಂದ್ರದಲ್ಲಿ ಪದ್ಮಭೂಷಣ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 112 ನೇ ಜಯಂತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ ಅಂದ ಅನಾಥರ ಬಾಳಿಗೆ ಬೆಳಕಾಗಿ ಅವರಿಗೆ ಸಂಗೀತ ವಿದ್ಯೆಯನ್ನು ಕಲಿಸಿ ಸಮಾಜದ ಮುಖ್ಯ ವಾಹಿನಿಗೆ ತಂದ ಕೀರ್ತಿ ಡಾ. ಪುಟ್ಟರಾಜ ಕವಿ ಗವಾಯಿಗಳಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.
ಖ್ಯಾತ ತಬಲ ವಾದಕ ಗುರುನಾಥ್ ಸುತಾರ್ ಅವರು ಮಾತನಾಡಿ ವೀರೇಶ್ವರ ಪುಣ್ಯಾಶ್ರಮವು ಜ್ಞಾನದಾಸೋದ ಜೊತೆಗೆ ನಿರಂತರ ಅನ್ನದಾಸುಹ ನಡೆಸುತ್ತಾ ವಿದ್ಯಾರ್ಥಿಗಳಿಗೆ ಕಾಲೇಜಿನ ಮೂಲಕ ಶಿಕ್ಷಣವನ್ನು ನೀಡಿ ಅವರನ್ನು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನಾಗಿ ಮಾಡಿ ಸಂಗೀತ ಉಳಿಸಿ ಬೆಳೆಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಆಗಿದೆ ಎಂದವರು ಹೇಳಿದರು.
ಪಂಚಾಕ್ಷರಿ ಹಿಡಿಕಿಮಠ ಮಾತನಾಡಿ ಡಾ. ಪುಟ್ಟರಾಜ ಕವಿ ಗವಾಯಿಗಳು ಅವರು ಎಲ್ಲರಿಗೂ ಸುಖ ಶಾಂತಿ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಅವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕುಮಾರ್ ಮುತ್ತಿನಪೆಂಡಿಮಠ, ವಿರುಪಾಕ್ಷ ಪಟ್ಟದಕಲ್, ವಾ ಆರ್ ಮುಲಿಮನಿ, ಉಪನ್ಯಾಸಕ ಮೃತ್ಯುಂಜಯ ಮಠದ, ಬಿ ಹೆಚ್ ಜೋಗಿ ರೆಡ್ಡಿ, ವಿ ಕೆ ಜೋಶಿ, ಡಾ ವಿಶ್ವನಾಥ್ ಹಿರೇಮಠ, ಕುಮಾರ್ ಗುರುರಾಜ್, ಗುರುನಾಥ್ ಸುತಾರ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net