ವಿಕೇಂದ್ರೀಕರಣವೇ ಗ್ರಾಮಾವೃದ್ಧಿಗೆ ದಿಕ್ಕು: ಡಿ.ಆರ್​. ಪಾಟೀಲ

  ಗದಗ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಪಂಚಾಯತ್​ ರಾಜ್​ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಿ.ಆರ್​. ಪಾಟೀಲ, ಸಿ.ಎನ್​. ಶ್ರೀಧರ, ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪ್ರೊ. ಜೆ. ಕೆ.  ಜಮಾದಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ. ಆರ್​, ಡಿಎಸ್​ ಸಿ. ಆರ್​.  ಮುಂಡರಗಿ, ಎಂ. ವೈ ಪಾಟೀಲ  ಇತರರು ಇದ್ದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಜರುಗಿದ ಪಂಚಾಯತ್​ ರಾಜ್​ ದಿನಾಚರಣೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಿ.ಆರ್​. ಪಾಟೀಲ, ಸಿ.ಎನ್​. ಶ್ರೀಧರ, ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪ್ರೊ. ಜೆ. ಕೆ. ಜಮಾದಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ. ಆರ್​, ಡಿಎಸ್​ ಸಿ. ಆರ್​. ಮುಂಡರಗಿ, ಎಂ. ವೈ ಪಾಟೀಲ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾಡಳಿತ ಭವನದಲ್ಲಿ ರಾಷ್ಟ್ರೀಯ ಪಂಚಾಯತ್​ ರಾಜ ದಿನಾಚರಣೆಯೂ ಶುಕ್ರವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯ ಡಿ. ಆರ್​. ಪಾಟೀಲ ಮಾತನಾಡಿ ಸಾಮಾಜಿಕ ೇತ್ರಕ್ಕೆ ಪಂಚಾಯತ್​ ವ್ಯವಸ್ಥೆಯಿಂದಲೇ ಬಲ. ಹಿಂದಿನ ದಿನಗಳಲ್ಲಿ ಪಂಚಾಯತ್​ ವ್ಯವಸ್ಥೆಗೆ ಕಾನೂನಿನಲ್ಲಿ ನೀಡಿರುವ ಅಧಿಕಾರಗಳನ್ನು ಸಮರ್ಪಕವಾಗಿ ಚಲಾಯಿಸಲು ಅವಕಾಶವಿತ್ತು. ತಾಪಂ, ಜಿಪಂ ಚುನಾವಣೆಯನ್ನು ಹಿಂದಿನ ಸರ್ಕಾರ ನಡೆಸಲಿಲ್ಲ, ಅದನ್ನೇ ಇಂದಿನ ಸರ್ಕಾರವೂ ಮುಂದುವರೆಸಿದೆ. ಜನಪ್ರತಿನಿಧಿಗಳು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕು. ಪ್ರತಿಭಟನೆ ಮಾಡದಿದ್ದಲ್ಲಿ ಅಧಿಕಾರದಲ್ಲಿ ಪಾಲು ಪಡೆಯಲು ಸಾಧ್ಯವಿಲ್ಲ ಎಂಬ ಅರಿವು ಮೂಡಬೇಕು ಎಂದು ಹೇಳಿದರು.
ಪಂಚಾಯತ್​ ಚುನಾವಣೆಯಂತಹ ಮಹತ್ವದ ವಿಷಯದಲ್ಲಿ ಜನರು ಮೌನವಾಗಿ ಇರುವುದು ಸರಿಯಲ್ಲ. ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಪೂರಕ ವಾತಾವರಣ ಇದೆ. ಗ್ರಾಮ ಸಭೆಯೇ ಅಭಿವೃದ್ಧಿಯ ಕೇಂದ್ರವಾಗಿದ್ದು, ಊರಿನ ಕಾಮಗಾರಿಗಳ ಕುರಿತು ಅಂತಿಮ ನಿರ್ಧಾರಗಳನ್ನು ಗ್ರಾಮ ಸಭೆಯಲ್ಲೇ ಕೈಗೊಳ್ಳಬೇಕು. ಸದಸ್ಯರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ವಿಕೇಂದ್ರೀಕರಣ ವ್ಯವಸ್ಥೆ ಜಾರಿಯಲ್ಲಿ ಜಿಲ್ಲೆ ಇತರೆ ಜಿಲ್ಲೆಗಳಿಗೆ ಮಾದರಿ ಆಗಬೇಕು. ಪಂಚಾಯತ ರಾಜ ವ್ಯವಸೆಯ್ಥು ರಾಜಕೀಯ ನಾಯಕತ್ವ ಬೆಳೆಸುವ ಪಾಠಶಾಲೆ ಆಗಿದೆ. ಅದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಜನರಿಗೆ ನೀಡಿರುವ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಂಬಲ ಜನಪ್ರತಿನಿಧಿಗಳಲ್ಲಿ ಇರಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಸಿ. ಎನ್​. ಶ್ರೀಧರ ಮಾತನಾಡಿ, ಹಿಂದಿನ ಕಾಲದಲ್ಲಿ ಗ್ರಾಮ ಮಟ್ಟದಲ್ಲೇ ಪಂಚಾಯತಿ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪದ್ಧತಿ ಇತ್ತು. ಇಂದು ಪಂಚಾಯತ ರಾಜ ವ್ಯವಸ್ಥೆ ಮತ್ತಷ್ಟು ಬಲಿಷ್ಠವಾಗಿ ರೂಪುಗೊಂಡಿದ್ದು, ರಾಜ್ಯದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಸಮರ್ಥವಾಗಿ ಜಾರಿಗೊಂಡಿದೆ ಎಂದರು.
ಗ್ರಾಪಂ ಸದಸ್ಯರು ತಮ್ಮ ವಾರ್ಡನ್ನು ಮಾದರಿ ವಾರ್ಡ ಆಗಿಸಲು ಸಂಕಲ್ಪಬದ್ಧರಾಗಬೇಕು. ವಿಕೇಂದ್ರೀಕರಣವಿಲ್ಲದೆ ಗ್ರಾಮ ಆಡಳಿತ ಅಸಾಧ್ಯ ಎಂಬ ಹಂತಕ್ಕೆ ಸಮಾಜ ತಲುಪಿದೆ. ಕಾನೂನಿನಿಂದ ಪಂಚಾಯತ್​ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಬಲ ಸಿಕ್ಕಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಾಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು.
ಉಪನ್ಯಾಸಕ ಪ್ರಕಾಶ ಮಾಚೇನಹಳ್ಳಿ ಮಾತನಾಡಿ, ಪಂಚಾಯತ್​ ರಾಜ್​ ಆಶಯಗಳನ್ನು ಜಾರಿಗೊಳಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಂಚಾಯತ್​ ಎಂದರೆ ಐದು ಜನರ ಆಡಳಿತ ವ್ಯವಸ್ಥೆ ಆಗಿದ್ದು, ಇದು ವೇದಗಳ ಕಾಲದಿಂದಲೇ ಪ್ರಚಲಿತದಲ್ಲಿದೆ. ಗಂಗರು, ಮೌರ್ರ್ಯರು ಹಾಗೂ ಚೋಳರ ಆಡಳಿತ ಕಾಲದಲ್ಲಿಯೂ ಸ್ಥಳಿಯ ಆಡಳಿತ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಭಾರತವು ಹಳ್ಳಿಗಳಿಂದ ಕೂಡಿದ ರಾಷ್ಟ್ರವಾಗಿದ್ದು, ಗ್ರಾಮ ಸ್ವರಾಜ್ಯದ ಕನಸು ಮಹಾತ್ಮ ಗಾಂಧೀಜಿ ಅವರದ್ದಾಗಿತ್ತು. ಗ್ರಾಮಗಳು ಸ್ವಾಯತ್ತತೆ ಸಾಧಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಜನರಿಗೆ ಹತ್ತಿರದ ಆಡಳಿತ ವ್ಯವಸ್ಥೆಯೇ ಪಂಚಾಯತ್​ ಆಡಳಿತ ಎಂದು ಅವರು ದೃಢವಾಗಿ ನಂಬಿದ್ದರು ಎಂದು ಹೇಳಿದರು.
ಪಂಚಾ0ುತ್​ ರಾಜ್​ ವ್ಯವಸ್ಥೆ ಮೇಲಿಂದ ಕೆಳಗೆ ಹರಿ0ುುವ ನೀರಿನಂತಿರದೆ, ಕೆಳಗಿನಿಂದ ಮೇಲಕ್ಕೆ ಚಿಮ್ಮುವ ಚಿಲುಮೆ0ುಂತೆ ಬೆಳೆ0ುಬೇಕು ಎಂದು ತಮ್ಮದೇ ಶೆಲಿ0ುಲ್ಲಿ ವಿವರಿಸಿ, ಜನಸಾಮಾನ್ಯರ ಸಕ್ರಿ0ು ಭಾಗವಹಿಸುವಿಕೆ ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಜಿಪಂ ಮಾಜಿ ಅಧ್ಯ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಪ್ರೊ. ಜೆ. ಕೆ. ಜಮಾದಾರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ. ಆರ್​, ಡಿಎಸ್​ ಸಿ. ಆರ್​. ಮುಂಡರಗಿ, ಎಂ. ವೈ ಪಾಟೀಲ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net