ಗಾರ್ಡನ್​ ಅಭಿವೃದ್ಧಿಗೊಳ್ಳದೇ ಎನ್​ಒಸಿ ನೀಡುತ್ತಿರುವ ತೋಟಗಾರಿಕೆ

ಗದಗ
ಗದಗ
Published on
ನೂತನ ಬಡವಾಣೆಗಳಲ್ಲಿ ಅಕ್ರಮ! ನಿವೇಶನ ಖರೀದಿದಾರರಿಗೆ ಮೋಸ
ವಿಜಯವಾಣಿ ವಿಶೇಷ ಗದಗ
ನಗರ ವ್ಯಾಪ್ತಿಯಲ್ಲಿ ನಿವೇಶ ಖರೀದಿಸಿ ಮನೆ ಕಟ್ಟಿಕೊಳ್ಳಬೇಕೆನ್ನುವ ಮಧ್ಯಮ ವರ್ಗದ ಜನರ ಕನಸಿಗೆ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ತೋಟಗಾರಿಕೆ ಇಲಾಖೆಯಲ್ಲಿನ ವ್ಯವಸ್ತಿತ ಜಾಲವು ಮೋಸ ಮಾಡುತ್ತಲೇ ಬಂದಿದೆ. ಹಣ ಕೊಟ್ಟು ನಿವೇಶನ ಖರೀದಿಸಿದರೂ ಸಹ ಬಡವಾಣೆ ಅಭಿವೃದ್ಧಿಗೊಳ್ಳದೇ ಮೂಲಭೂತ ಸೌಕರ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದರೆ, ಬಡವಾಣೆ ಅಭಿವೃದ್ಧಿ ಗೊಂಡಿದೆ ಎಂದು ಸ್ಥಳಿಯ ಸಂಸ್ಥೆಗಳು ಸಿಸಿ (ಕ್ಲಿಯರೆನ್ಸ್​ ಸಟಿರ್ಫಿಕೇಟ) ನೀಡುತ್ತಿವೆ. ಈ ನಡುವೆ ಗದಗ ಬೆಟಗೇರಿ ನಗರಸಭೆಯಲ್ಲಿ ಅಭಿವೃದ್ಧಿ ಕಾಣದ ನಿವೇಶನಗಳಿಗೂ ಫಾರ್ಮ ನಂ 3(ಹಕ್ಕು ಬದಲಾವಣೆ ಪತ್ರ/ ಉತಾರ) ವಿತರಣೆ ಮಾಡುವ ಪ್ರಕರಣಗಳು ಆಗಾಗೆ ಬೆಳಕಿಗೆ ಬರುತ್ತಲ್ಲೇ ಇದ್ದು, ಜಿಲ್ಲಾ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಹ ನಿಯಮ ಮೀರಿ ನೀರಪೇಕ್ಷಣಾ ಪತ್ರ (ಎನ್​ಒಸಿ) ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ನಿಯಮದಂತೆ ಬಡವಾಣೆಗಳಲ್ಲಿ ಮೂಲಭೂತ ಸೌಕರ್ಯಗಳ ಜತೆಗೆ ಬಡಾವಣೆ ನಿಮಿರ್ಸುವ ಸಂಸ್ಥೆಯು ಸುಸಜ್ಜಿತ ಉದ್ಯಾನವನ ನಿಮಿರ್ಸಬೇಕು. ಬಡಾವಣೆಯ ಶೇ. 15 ರಷ್ಟು ಜಾಗೆ ಉದ್ಯಾನವನಕ್ಕೆ ಮೀಸಲಿಡಬೇಕು. ಈ ಉದ್ಯಾನವನಕ್ಕೆ ಸ್ಥಳಿಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಖುದ್ದು ಬೇಟಿ ನೀಡಿ ಪರಿಶೀಲಿಸಬೇಕು. ಸುಸಜ್ಜಿತ ಉದ್ಯಾನವನ ನಿರ್ಮಾಣ ಆಗಿದ್ದರೆ ಮಾತ್ರ ತೋಟಗಾರಿಕೆ ಇಲಾಖೆ ಅಧಿಕಾರಿಗಳು ನಿರಪೇಕ್ಷಣಾ ಪತ್ರ(ಎನ್​ಒಸಿ) ನೀಡಬೇಕು. ಆದರೆ, ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಗಿಡದ ಕೊಂಬೆಗಳನ್ನು ನೆಟ್ಟು ೋಟೋ ಕ್ಲಿಕ್ಕಿಸುವ ಸಂಪ್ರದಾಯ ಬೆಳೆದಿದೆ. ಅಧಿಕಾರಿಗಳು ಮತ್ತು ನಿವೇಶನ ಅಭಿವೃದ್ಧಿಗಾರರು ಶಾಮೀಲಾಗಿ ಅಕ್ರಮ ನಡೆಸುತ್ತಿರುವ ಕಾರಣ ಹೊಸ ಬಡಾವಣೆಗಳಲ್ಲಿ ಉದ್ಯಾನವನಗಳೇ ನಿರ್ಮಾನ ಆಗುತ್ತಿಲ್ಲ. ಹೀಗಾಗಿ ನಗರದ ಸೌಂದರ್ಯ ಕಳೆಗುಂದಿದೆ. ದಿನ ಕಳೆದಂತೆ ಉದ್ಯಾನವನಗಳು ಜಾಲಿ ಮುಳ್ಳು ಕಂಟಿನಿಂದ ತುಂಬಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗುತ್ತಿವೆ. ಇದರಿಂದ ಬಡಾವಣೆಯಲ್ಲಿ ನಿವೇಶನ ಖರೀದಿಸಿ ಮನೆ ನಿಮಿರ್ಸಿದ ಮಧ್ಯಮ ವರ್ಗದ ಜನರಿಗೂ ತೋಂದರೆ ಆಗುತ್ತಿದೆ.
ಅಕ್ರಮಗಳೇನು ಮೊದಲೇನಲ್ಲ:
ಕೋಟಿಗೂ ಅಧಿಕ ಮೊತ್ತದ ಯುಜಿಡಿ ನಕಲಿ ಠರಾವು, ಕೋಟಿಗೂ ಅಧಿಕ ಮೊತ್ತದ ಬೀದಿದೀಪ ಟೆಂಡರ್​ ಅಕ್ರಮಕ್ಕೆ ಕುಖ್ಯಾತಿ ಪಡೆದ ನಗರಸಭೆಯಲ್ಲಿ ಅಭಿವೃದ್ಧಿಯಾಗದ ಲೇಔಟ್​ಗಳ ನಿವೇಶನಗಳಿಗೆ ಾರ್ಮ ನಂ.3 ವಿತರಣೆ ಅಕ್ರಮಗಳು ನಗರಸಭೆಯಲ್ಲಿ ಈ ಮೊದಲು ಎಗ್ಗಿಲ್ಲದೆ ನಡೆದಿದೆ. ಇಂತಕ ಅಕ್ರಮಗಳ ಪ್ರಮಾಣ ಕಡಿಮೆ ಆಗಿದ್ದರೂ ನಗರಸಭೆ, ನಗಾರಭಿವೃದ್ಧಿ, ತೋಟಗಾರಿಕೆ ಇಲಾಖೆಯಲ್ಲಿ ನಿಯಮ ಮೀರಿ ಕಾನೂನು ಪಾಲನೆ ನಿರಂತರವಾಗಿ ನಡೆಯುತ್ತಲೇ ಇದೆ. ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ನೀಡುವ ನಿರಪೇಾ ಪತ್ರ (ಸಿಸಿ) ಇಲ್ಲದಿದ್ದರೂ ನಗರಸಭೆಯಲ್ಲಿ ಉತಾರ ನೀಡುವ ಪ್ರಕರಣಗಳಗೂ ಕೊರತೆ ಇಲ್ಲ. ಈ ಹಿಂದೆ ಸಿಸಿ ಇಲ್ಲದೆ 1063 ನಿವೇಶನಗಳಿಗೆ ಗದಗ ಬೆಟಗೇರಿ ನಗರಸಭೆ 2023& 2024ನೇ ಸಾಲಿನಲ್ಲಿ ಫಾರ್ಮ 3 ವಿತರಣೆ ಮಾಡಿತ್ತು.
ಕೋಟ್​
ನೂತನ ಬಡಾವಣೆ ನಿಮಿರ್ಸುವ ಸಂಸ್ಥೆಗಳು ಕಾನೂನು ಮೀರಿ ಕಾರ್ಯ ನಿರ್ವಹಿಸುತ್ತಿವೆ. ಈ ಬಗ್ಗೆ ಮಧ್ಯಮ ವರ್ಗದ ಜನರು ಎಚ್ಚರಿಕೆಯಿಂದ ಇರಬೇಕು. ನಿವೇಶನ ಖರೀದಿಸುವ ಸಂದರ್ಭದಲ್ಲಿ ದಾಖಲೆ ಪರೀಶಿಲನೆ ಜತೆಗೆ ದಾಖಲೆಯಲ್ಲಿ ಇರುವ ಅಂಶಗಳು ಬಡಾವಣೆಯಲ್ಲಿ ಇವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಂಡು ನಿವೇಶನ ಖರೀದಿಸಬೇಕು.
ಉಷಾ ದಾಸರ,
ಕೋಟ್​:
ಬಡವಾಣೆ ನಿರ್ಮಾಣದಲ್ಲಿ ಅಕ್ರಮ ಎಸಗುವರ ವ್ಯವಸ್ಥಿತ ಜಾಲ ಬೇರೂರಿದೆ. ಈ ಕುರಿತು ಅಧಿಕಾರಿ ವರ್ಗವು ನಿಸ್ಪಕ್ಷಪಾತ ಕಾರ್ಯ ನಿರ್ವಹಿಸಿದರೆ ಮಾತ್ರ ನಗರದ ಜನತೆಗೆ ಅನುಖಲ ಆಗಲಿದೆ.
ಯಳವತ್ತಿ, ನಗರಸಭೆ ಸದಸ್ಯ
ಕೋಟ್​:
ಗದಗ ಜಿಲ್ಲೆಗೆ ಇತ್ತೀಚೆಗೆ ವರ್ಗಾವಣೆ ಆಗಿ ಬಂದಿದ್ದೇನೆ. ಎನ್​ಒಸಿ ನೀಡುವ ಪ್ರಕ್ರಿಯೆ ಕುರಿತು ಇರುವ ೈಲ್​ಗಳನ್ನು ತನಿಖೆಗೆ ಒಳಪಡಿಸಲಾಗುವುದ. ಅಕ್ರಮ ಬೆಳಕಿಗೆ ಬಂದರೆ ಇಲಅಖೆ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮ ಕೈಗೊಳ್ಳಲಾಗುವುದು.
ಮಲ್ಲಿಕಾರ್ಜುನ, ಡಿಡಿ ತೋಟಗಾರಿಕೆ ಇಲಾಖೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net