ನಗರದ ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ನಡೆದ ಶಿವಾನುಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಂ. ಎಂ. ಕಲಬುಗಿರ್ ಅವರು ಶ್ರೇಷ್ಠ ಶಿಕ, ಸಂಶೋಧಕ, ಆಡಳಿತ ಅಧಿಕಾರಿ ಆಗಿದ್ದರು. ಅವರು ವೈಚಾರಿಕ ಹಿನ್ನೆಲೆಯ ಪ್ರತಿಪಾದಕ ಆಗಿದ್ದರು. ಶ್ರಾವಣ ಮಾಸ ಲಿಂಗಾಯತ ಧರ್ಮದಲ್ಲಿ ಶ್ರೇಷ್ಠ ಮಾಸವಾಗಿದೆ. ಬಸವಾದಿ ಶರಣರ ಆದರ್ಶಗಳನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಷ್ಟಮದ, ಆರು ವೈರಿಗಳು ಸಪ್ತ ವ್ಯಸನಗಳನ್ನು ತೊರೆಯಲು ಮಹಾತ್ಮರ ಶರಣರ ಆದರ್ಶ ಮತ್ತು ಸಂದೇಶಗಳನ್ನು ಕೇಳಿ ಅವುಗಳನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದರು.