ಉಪ ಲೋಕಾಯುಕ್ತರಿಂದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ಪರಿಶೀಲನೆ

ಉಪ ಲೋಕಾಯುಕ್ತ ನ್ಯಾಯಮೂತಿರ್ ನ್ಯಾ. ಕೆ. ಎನ್​. ಫಣೀಂದ್ರ ಅವರು ಶುಕ್ರವಾರ ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಿ. ಎಸ್​. ಶಿವನಗೌಡ್ರ, ವಿಶಾಲ ಜಿ. ಪಿ. ಇತರರು ಇದ್ದರು.
ಉಪ ಲೋಕಾಯುಕ್ತ ನ್ಯಾಯಮೂತಿರ್ ನ್ಯಾ. ಕೆ. ಎನ್​. ಫಣೀಂದ್ರ ಅವರು ಶುಕ್ರವಾರ ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಿ. ಎಸ್​. ಶಿವನಗೌಡ್ರ, ವಿಶಾಲ ಜಿ. ಪಿ. ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ 

ಉಪ ಲೋಕಾಯುಕ್ತ  ನ್ಯಾ. ಕೆ. ಎನ್​. ಫಣೀಂದ್ರ ಅವರು ಶುಕ್ರವಾರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕಚೇರಿಯಲ್ಲಿನ ರೆಜಿಸ್ಟರ್​ಗಳನ್ನು ಪರಿಶೀಲಿಸಿದ ಅವರು ಜಪ್ತಿ ಮಾಡಿದ ವಾಹನಗಳ ವಿವರ, ಶಾಲಾ ವಾಹನಗಳ ವಿವರ ಪಡೆದು ಅವುಗಳ ದಾಖಲೆಗಳನ್ನು ಪರಿಶೀಲಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ತೆರಿಗೆ ಪಾವತಿಸದೆ ಇರುವಂತಹ ವಾಹನಗಳ ವಿವರ ಪಡೆದುಕೊಂಡು,  ತೆರಿಗೆ ಪಾವತಿಸದೆ ಹಾಗೂ ಇತರೆ ದಾಖಲೆಗಳನ್ನು ಹೊಂದಿರದೆ ಸಂಚರಿಸುವ ಶಾಲಾ ವಾಹನಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.
ಕಚೇರಿಯ ಸಿಬ್ಬಂದಿಗಳ ಹಾಜರಾತಿ ವಹಿಗಳನ್ನು ಪರಿಶೀಲಿಸಿ ಸಿಬ್ಬಂದಿಗಳ ಮಾಹಿತಿ ಪಡೆದರು. ಸಿಬ್ಬಂದಿಗಳ ನಗದು ವಹಿ, ಚಲನ  ವಲನ ವಹಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು. ಚಲನ ವಲನ ವಹಿ, ನಗದು ವಹಿಗಳಲ್ಲಿ ನಿಯಮಿತವಾಗಿ ನಮೂದಿಸದೆ ಇರುವ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ವಹಿಗಳಲ್ಲಿ ನಿಯಮಿತವಾಗಿ ನಮೂದಿಸದೆ ಇರುವ ಸಿಬ್ಬಂದಿಗಳಿಗೆ ನೋಟಿಸ್​ ಜಾರಿ ಮಾಡಲು ತಿಳಿಸಿದರು. 
ಕಚೇರಿಯ ಎಲ್ಲ ಸಿಬ್ಬಂದಿಗಳು ಪ್ರತಿದಿನ ಕಡ್ಡಾಯವಾಗಿ ಹಾಜರಾತಿ, ಚಲನ ವಲನ, ನಗದು ವಹಿಗಳಲ್ಲಿ ನಮೂದಿಸಬೇಕು. ಸಿಬ್ಬಂದಿಗಳು ವಹಿಗಳಲ್ಲಿ ವಿವರಗಳನ್ನು ದಾಖಲಿಸಿರುವ ನಮೂದಿಸಿರುವ ಕುರಿತು ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಬೇಕು.ಸರ್ಕಾರಿ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಈ ಕಚೇರಿಯ ಎಲ್ಲ ಕಾರ್ಯಗಳು ಆನ್​ಲೈನ್​ ಮೂಲಕ ಜರಗುತ್ತಿದ್ದರು ಸಹ ಮದ್ಯವತಿರ್ಗಳು ಸಾರ್ವಜನಿಕರಿಂದ ದುಡ್ಡು ಪಡೆದುಕೊಳ್ಳುವ ಕುರಿತು ದೂರುಗಳು ಬಂದಿರುತ್ತವೆ. ಈ ತಪ್ಪುಗಳು ಮರುಕಳಿಸಿದರೆ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯಾಧೀಶರು ಹಾಗೂ ಆಪ್ತ ಕಾರ್ಯದಶಿರ್ ಪಿ. ಎಂ. ಪಾಟೀಲ, ಸುನೀಲಕುಮಾರ ಆರ್​,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶಿರ್ ಸಿ. ಎಸ್​. ಶಿವನಗೌಡ್ರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್​ ಕೆ. ಆರ್​,ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶಾಲ ಜಿ. ಪಿ. ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net