ಕಳೆದ 40 ವರ್ಷಗಳಿಂದ ಮಳೆಯ ಸಂದರ್ಭದಲ್ಲಿ ಹಾಲಗುಂಡಿ ಬಸವಣ್ಣ ದೇವಸ್ಥಾನದ ಹತ್ತಿರವಿರುವ ಜಮೀನಿನಲ್ಲಿ ಹುಡುಕಾಟ ನಡೆಸುವ ಪ್ರವೃತ್ತಿ ಇಟ್ಟುಕೊಂಡಿದ್ದು, ಅನೇಕ ಬಾರಿ ಮುತ್ತು, ಹವಳ, ನೀಲಮಣಿ, ಸ್ಪಟಿಕ, ಬಿಳಿ ಹವಳ, ಕರಿಪುಕ್ಕಾ, ಹಸಿರು ಮಣಿ ಸೇರಿದಂತೆ ಹಲವು ಮೌಲ್ಯಯುತ ವಸ್ತುಗಳು ದೊರೆತಿವೆ. ಈಗಾಗಲೇ ಕೆಲವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದೇನೆ. ಮತ್ತೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಮತ್ತಷ್ಟು ಮೌಲ್ಯಯುತ ವಸ್ತುಗಳು ದೊರೆತಿವೆ. ಅದನ್ನೂ ಕೂಡ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುತ್ತೇನೆ.