ವಿದ್ಯಾರ್ಥಿ ಜೀವನವು ಭವಿಷ್ಯದ ಮೆಟ್ಟಿಲು: ರಜನಿ ಪಾಟೀಲ

 ಗದಗ ಕೆಎಲ್​ಇ ಸಂಸ್ಥೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸತಿಕ ಕಾರ್ಯಕ್ರಮ ಜರುಗಿತು. ರಜನಿ ಪಾಟೀಲ, ಡಾ. ಎ. ಕೆ ಮಠ, ಡಾ. ವಿಠ್ಠಲ ಕೋಳಿ ಇತರರು ಇದ್ದರು.
ಗದಗ ಕೆಎಲ್​ಇ ಸಂಸ್ಥೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸತಿಕ ಕಾರ್ಯಕ್ರಮ ಜರುಗಿತು. ರಜನಿ ಪಾಟೀಲ, ಡಾ. ಎ. ಕೆ ಮಠ, ಡಾ. ವಿಠ್ಠಲ ಕೋಳಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ

ವಿದ್ಯಾರ್ಥಿ

ನಗರದ ಕೆಎಲ್​ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ 2026&27ನೇ ಸಾಲಿನ ಕ್ರೀಡಾ ಮತ್ತು ಸಾಂಸತಿಕ ಹಾಗೂ ಎನ್​ಎಸ್​ಎಸ್​ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಜೀವನದಲ್ಲಿ ವಿದ್ಯಾಥಿರ್ ಜೀವನ ಬಹಳ ಮುಖ್ಯ. ವಿದ್ಯಾಥಿರ್ ಜೀವನ ಕಳೆದು ಹೋದರೆ ಮತ್ತೊಮ್ಮೆ ಸಿಗಲಾರದು. ಆದ್ದರಿಂದ ವಿದ್ಯಾಥಿರ್ಗಳು ಬಹಳ ಶ್ರದ್ಧೆಯಿಂದ ಕಲಿತು ಮುಂದೆ ಬರಬೇಕು. ಕಲಿಸಿದ ಶಿಕರಿಗೂ ಸಹ ಒಳ್ಳೆಯ ಹೆಸರು ತರಬೇಕು. ಜೀವನದಲ್ಲಿ ದುಶ್ಚಟಗಳಿಗೆ ಬಲಿಯಾಗದೇ, ಚೆನ್ನಾಗಿ ಓದಿ ನಾಡಿನ ಸತ್ರಜೆಗಳಾಗಬೇಕು. ವಿದ್ಯಾಥಿರ್ಗಳು ಯಾವುದೇ ಕಷ್ಟಕ್ಕೆ ಹೆದರದೆ ಮುನ್ನುಗ್ಗಿದಾಗ ಮಾತ್ರ ಬದುಕಿನ ಉದ್ದೇಶ ಹಾಗೂ ಗುರಿ ಸಾಧಿಸಲು ಸಾಧ್ಯ ಎಂದರು.
ಸತತ ಅಧ್ಯಯನ, ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ಉಜ್ವಲ ಭವಿಷ್ಯ ಹೊಂದಬಹುದು. ವಿದ್ಯಾಥಿರ್ ಜೀವನವನ್ನು ಅರ್ಥೈಸಿಕೊಂಡು ಬದುಕಿದರೆ ಭವಿಷ್ಯದ ದಿನಗಳು ಸಾರ್ಥಕವಾಗಲು ಸಾಧ್ಯವಾಗುತ್ತದೆ. ವಿದ್ಯಾಥಿರ್ಗಳು ಉತ್ತಮ ಗುರಿ ಇಟ್ಟುಕೊಂಡು ಸಾಧನೆಗೆ ನಿರಂತರ ಪ್ರಯತ್ನ ಮಾಡಬೇಕು ಎಂದರು. ಸಾಧಿಸಲು ವಯಸ್ಸು, ವಿದ್ಯೆ ಮುಖ್ಯವಲ್ಲ. ಬದಲಾಗಿ ದೃಢ ಮನಸ್ಸು ಮುಖ್ಯ ಎಂದು ರಜನಿ ಹೇಳಿದರು.
ಪ್ರಾಚಾರ್ಯ ಡಾ. ಎ. ಕೆ ಮಠ ಮಾತನಾಡಿ, ವಿದ್ಯಾಥಿರ್ ಜೀವನದಲ್ಲಿ ಭವಿಷ್ಯ ರೂಪಿಸುವ ಯೋಜನೆಗಳನ್ನು ವಿದ್ಯಾಥಿರ್ಗಳು ಹಾಕಿಕೊಳ್ಳಬೇಕು. ಇದರಿಂದ ವಿದ್ಯಾಥಿರ್ಗಳಿಗೇ ಅನುಕೂಲ. ದೇಶದ ಅಭಿವೃದ್ಧಿ ಯುವಜನತೆಯ ಮೇಲೆ ಅವಲಂಭಿತವಾಗಿದೆ. ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ವಿದ್ಯಾಥಿರ್ಗಳು ಈಗಿನಿಂದಲೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಸಮಾಜದ ಋಣ ತೀರಿಸಲು ಸದಾ ಮುಂದಾಗಬೇಕು. ಪದವಿ ವಿದ್ಯಾಥಿರ್ಗಳು ಸರ್ಕಾರಿ ಹುದ್ದೆಯನ್ನೇ ನಂಬದೇ ಜೀವನ ರೂಪಿಸಿಕೊಳ್ಳಲು ಉದ್ಯಮದೆಡೆ ಮನಸ್ಸು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎನ್​ಎಸ್​ಎಸ್​ ವಿದ್ಯಾಥಿರ್ಗಳಿಗೆ ಬ್ಯಾಚ್​ಗಳನ್ನು ವಿತರಿಸಲಾಯಿತು. ಕಳೆದ ವರ್ಷ ಮಹಾವಿದ್ಯಾಲಯದ ಬಿಎ ಮತ್ತು ಬಿಕಾಂ ತರಗತಿಗಳಲ್ಲಿ ರ್ಯಾಂಕ್​ ವಿಜೇತ ವಿದ್ಯಾಥಿರ್ಗಳಿಗೆ ಸನ್ಮಾನಿಸಲಾಯಿತು. ಡಾ. ವೀಣಾ ಈ, ಡಾ. ರಾಮಚಂದ್ರ ಪಡೆಸೂರ, ಡಾ. ವಿಠ್ಠಲ ಕೋಳಿ, ಪ್ರೊ. ಈಶ್ವರಗೌಡ ಪಾಟೀಲ, ಪ್ರಾಧ್ಯಾಪಕ ಮತ್ತು ಬೋಧಕೇತರ ವೃಂದ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net