ಶರಣರ ವಚನಗಳನ್ನು ಕೃಷ್ಣಪ್ರಿಯ ಬದಿ ಮತ್ತು ತನುಶ್ರೀ ಬದಿ ಸಹೋದರಿಯರು ಸುಂದರವಾಗಿ ಗಾಯನದ ಮೂಲಕ ಪ್ರಸ್ತುತಪಡಿಸಿದರು. ಧರ್ಮ ಗ್ರಂಥ ಪಠಣವನ್ನು ಚಾರ್ವಿ ರವಿಕುಮಾರ, ವಚನ ಚಿಂತನವನ್ನು ದೀಕ್ಷಾ ಎಸ್. ಲಮಾಣಿ ಮಾಡಿದರು. ದಾಸೋಹ ಸೇವೆಯನ್ನು ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಐಟಿಐ ಕಾಲೇಜಿನ ಸಿಬ್ಬಂದಿಗಳು ವಹಿಸಿಕೊಂಡಿದ್ದರು. ಪ್ರಾರಂಭದಲ್ಲಿ ಶ್ರೀಮಠದ ಪರಮಭಕ್ತರು ಮತ್ತು ಬಸವಾನಿಯಾಯಿಗಳು ಆಗಿದ್ದ ನಿವೃತ್ತ ಶಿಕ್ಷಕರಾದ ಶೇಖರಪ್ಪ ನರೇಗಲ್ಲ ಅವರು ಲಿಂಗೈಕ್ಯರಾಗಿದ್ದ ನಿಮಿತ್ತ ಒಂದು ನಿಮಿಷ ಮೌನಚರಣೆಯನ್ನು ಮಾಡಿ ಸಂತಾಪ ಸೂಚಿಸಲಾಯಿತು. ಶಿವಾನುಭವದಲ್ಲಿ ನೆರೆದ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಆಡಿದರು. ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಶ್ರೀಮತಿ ಸುರೇಖಾ ಪಿಳ್ಳಿ ಕಾರ್ಯದರ್ಶಿ ಸಿದ್ದರಾಮೇಶ ಪಟ್ಟೇದ ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷರಾದ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕಮಠ, ಆದೇಶ ಎಸ್. ಅಂಗಡಿ ಹಾಗೂ ಖ್ಯಾತ ಸಂಗೀತ ಕಲಾವಿದರಾದ ಪ್ರೊ. ಪಾಠಕ ದಂಪತಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.