ಗುರು ರೇವಣಸಿದ್ಧರು ಚಾರಿತ್ರಿಕ ಶರಣರು: ತೋಂಟದ ಸಿದ್ಧರಾಮ ಶ್ರೀಗಳು

ಎಸೆಸೆಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ, ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ತಾಥಿರ್ಗಳನ್ನು ಶಿವಾನುಭ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.   ತೋಂಟ ಸಿದ್ಧರಾಮ ಶ್ರೀಗಳು, ಕರಿಯಪ್ಪ ಕೊಡವಳ್ಳಿ, ಉಮೇಶ ಪುರದ, ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್​. ಕೋರಿಮಠ ಸೋಮಶೇಖರ ಪುರಾಣಿಕಮಠ, ಆದೇಶ ಎಸ್​. ಅಂಗಡಿ ಇತರರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಗದಗ
ಹನ್ನೆರಡನೇ ಶತಮಾನದ ಪೂರ್ವದಲ್ಲೇ ರೇವಣಸಿದ್ಧರು ಚಾರಿತ್ರಿಕ ಶರಣರು. ಇವರು ಸೊನ್ನಲಿಗೆ ಸಿದ್ದರಾಮರ ತಂದೆ ತಾಯಿಗಳಿಗೆ ಆಶೀರ್ವದಿಸಿದ್ದರು ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತೊಂಟದಾರ್ಯ ಮಠದಲ್ಲಿ ಸೋಮವಾರ ಜರುಗಿದ ಶಿವಾನುಭ ಕಾರ್ಯಕ್ರಮದಲ್ಲಿ ಮಾತನಾಡಿ, ಜನಪದ ಸಾಹಿತ್ಯ ಎಲ್ಲ ಸಾಹಿತ್ಯದ ತಾಯಿಬೇರು. ಜನಪದರು ತಮ್ಮ ಅನುಭವಗಳನ್ನು ಮತ್ತು ವರ್ತಮಾನದ ಚರಿತ್ರೆಯನ್ನು ಜನಪದದ ವಿವಿಧ ಮಾಧ್ಯಮಗಳ ಮೂಲಕ ರಾಗಬದ್ಧವಾಗಿ ಹಾಡುತ್ತಾರೆ. ಈ ಮೂಲಕ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಾಡುಗಳ ಮೂಲಕ ರವಾನಿಸಿ ಚರಿತ್ರೆಯನ್ನು ಉಳಿಸಿದ ರಾಯಭಾರಿಗಳು ಎಂದು ಹೇಳಿದರು.
ಡೊಳ್ಳಿನ ಹಾಡುಗಳಲ್ಲಿ ಶರಣರ ಚರಿತ್ರೆ ಎಂಬ ವಿಷಯದ ಕುರಿತು ಮಾತನಾಡಿದ ಗಜೇಂದ್ರಗಡದ ಸಿದ್ಧರಾಮ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಕರಿಯಪ್ಪ ಕೊಡವಳ್ಳಿ ಅವರು, ಶರಣರ ಆದರ್ಶದ ಬದುಕನ್ನು ಹಾಲುಮತದ ಜನಾಂಗದವರು ತಮ್ಮ ಜನಪದ ಹಾಡುಗಳಾದ ಡೊಳ್ಳಿನ ಹಾಡುಗಳ ಮೂಲಕ ಕಟ್ಟಿಕೊಟ್ಟರು. ಶರಣರ ಚರಿತ್ರೆಗಳು ಜನಪದರ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ಕಾರಣವಾದವು ಎಂದರು.
ಕಾರ್ಯಕ್ರಮದಲ್ಲಿ ಎಂ. ಎ. ಮ್ಯೂಸಿಕ್​ ವೋಕಲ್​ ನಲ್ಲಿ ಕವಿವಿ ಸಂಗೀತ ಸ್ನಾತಕೋತ್ತರ ಅಧ್ಯಯನ ಮಾಡಿ ಎರಡು ಚಿನ್ನದ ಪದಕ ಪಡೆದ ಪ್ರಸಾದ ಸುತಾರ, ಎಸೆಸೆಲ್ಸಿಯಲ್ಲಿ ಸಾಧನೆ ಮಾಡಿದ ವಿದ್ಯಾಥಿರ್ಗಳನ್ನು ಸನ್ಮಾನ ಮಾಡಲಾಯಿತು.
ಉಮೇಶ ಪುರದ, ರಮೇಶ ಕಲ್ಲನಗೌಡರ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್​. ಕೋರಿಮಠ ಸೋಮಶೇಖರ ಪುರಾಣಿಕಮಠ, ಆದೇಶ ಎಸ್​. ಅಂಗಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net