ಜಾನಪದ ಹಾಡುಗಳು ಜನಸಾಮಾನ್ಯರ ಜೀವನಾಡಿ: ಡಾ. ತೋಂಟದ ಸಿದ್ಧರಾಮ ಶ್ರೀಗಳು
ಗದಗ ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ ಶಿವಾನುಭವನ ಕಾರ್ಯಕ್ರಮದಲ್ಲಿ ಈಶ್ವರಪ್ಪ ಮುನವಳ್ಳಿ ದಂಪತಿಗಳನ್ನು ಸನ್ಮಾನಿಸಲಾಯಿತು. ತೋಂಟದಾರ್ಯ ಶ್ರೀಗಳು, ತಿರುಪತಿ ಶಿವನಗುತ್ತಿ, ರಮೇಶ ಕಲ್ಲನಗೌಡರ, ವಿದ್ಯಾಶ್ರಿ ಗಂಜಿಹಾಳ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ. ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಇತರರು ಇದ್ದರು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಗದಗ
ಜನಪದ ಸಾಹಿತ್ಯ ಬಹಳ ವಿಶಿಷ್ಟರ್ಪೂಣವಾಗಿದೆ. ಗ್ರಾಮೀಣ ಭಾಗದಲ್ಲಿ ಜಾನಪದ ಹಾಡುಗಳು ಅತ್ಯಂತ ಹೆಚ್ಚು ಪ್ರಚಲಿತದಲ್ಲಿವೆ. ಜಾನಪದ ಹಾಡುಗಳು ಜನಸಾಮಾನ್ಯರ ಜೀವನಾಡಿಯಾಗಿವೆ ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮಲ್ಲಿ ಮಾತನಾಡಿದ ಶ್ರೀಗಳು, ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ದಿನನಿತ್ಯದ ಬದುಕಿನ ಕಾಯಕ, ಸುಖ, ದುಃಖ ಹೀಗೆ ಅನೇಕ ಟನೆಗಳನ್ನು ಜಾನಪದ ಹಾಡುಗಳ ಮೂಲಕ ಹೇಳುತ್ತಿದ್ದರು. ತಮ್ಮ ಸೃಜನಶೀಲತೆಯ ಮೂಲಕ ಸಾಹಿತ್ಯವನ್ನಾಗಿಸಿದರು. ಜನಪದರು ಯಾವುದೇ ಪದವಿಗಳನ್ನು ಪಡೆಯದಿದ್ದರೂ ತಾವು ಅನುಭವಿಸಿದ ಎಲ್ಲ ಅನುಭವಗಳನ್ನು ಸುಂದರವಾಗಿ ಕಟ್ಟಿಕೊಡುವ ಶಕ್ತಿಯನ್ನು ಹೊಂದಿದ್ದರು. ಅವರು ತಮ್ಮ ಕವಿತ್ವದ ಮೂಲಕ ಕಟ್ಟಿಕೊಟ್ಟ ಜನಪದ ಸಾಹಿತ್ಯ ಕನ್ನಡಿಗರ ಸಂಸತಿಯನ್ನು ಬಿಂಬಿಸುವ ಆಕರಗಳಾಗಿವೆ ಎಂದರು.
ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಎಂಬ ವಿಷಯ ಕುರಿತು ಶಾಲಾ ಶಿಣ ಮತ್ತು ಸಾರತಾ ಇಲಾಖೆಯ ೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ್ ವಾಲಿಕಾರ ಮಾತನಾಡಿ, ಜನಪದರು ಸಂಸತಿಯ ರಾಯಭಾರಿಗಳು. ಸಮಾಜದಲ್ಲಿ ವ್ಯಕ್ತಿ ಕೇವಲ ವ್ಯಕ್ತಿಯಾಗಿ ಬಾಳದೆ ಸಮಷ್ಟಿ ಹಿತ ಬಯಸುವ ಸಮಾಜ ಜೀವಿ ಆಗಬೇಕು ಎಂದರು.
ಲಿಂಗಾಯತ ಪ್ರಗತಿಶೀಲ ಸಂದ ಮಾಜಿ ಅಧ್ಯ ಈಶ್ವರಪ್ಪ ಮುನವಳ್ಳಿ ಮಾತನಾಡಿ, ಲಿಂಗಾಯತ ಪ್ರಗತಿಶೀಲ ಸಂ ವಿಶ್ವಮಟ್ಟದಲ್ಲಿ ಗಿನ್ನಿಸ್ ದಾಖಲೆ ಮಾಡಲು ಎಲ್ಲ ಅರ್ಹತೆಗಳನ್ನು ಹೊಂದಿದೆ. ಸಂವು ಶ್ರೀಮಠದಲ್ಲಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ತನ್ನ ಹಿರಿಮೆಯನ್ನು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಈ ಪರಂಪರೆ ನಿರಂತರವಾಗಿ ಮುಂದುವರಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಈಶ್ವರಪ್ಪ ಮುನವಳ್ಳಿ ದಂಪತಿಗಳನ್ನು ಸನ್ಮಾನಿಸಲಾಯಿತು. ಲಲಿತಕಲಾ ಅಕಾಡೆಮಿಯ ಪ್ರಶಸ್ತಿ ಪುರಸತರಾದ ತಿರುಪತಿ ಶಿವನಗುತ್ತಿ, ರಮೇಶ ಕಲ್ಲನಗೌಡರ, ವಿದ್ಯಾಶ್ರಿ ಗಂಜಿಹಾಳ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ. ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಇತರರು ಇದ್ದರು.