ತಾಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಪೈಪಲೈನ್ ಅಳವಡಿಕೆ ರ್ಪೂಣಗೊಂಡಿದ್ದರೂ, ನೀರು ಸರಬರಾಜು ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವೆಡೆ ಓವರ್ಹೆಡ್ ಟ್ಯಾಂಕ್ ನಿರ್ಮಾಣ ಅರ್ಪೂಣವಾಗಿದ್ದು, ಇನ್ನೂ ಕೆಲವು ಕಡೆ ಪಂಪ್ ಮೋಟಾರ್ ದೋಷ, ವಿದ್ಯುತ್ ಸಮಸ್ಯೆ ಹಾಗೂ ನಿರ್ವಹಣಾ ಕೊರತೆಯಿಂದ ಜನರಿಗೆ ನಿರಂತರ ನೀರು ಸಿಗುತ್ತಿಲ್ಲ. ವಾಸ್ತವದಲ್ಲಿ ಯೋಜನೆಯೇ ವಿಲವಾಗಿದೆ ಎಂದು ಕಂಡು ಬಂದಿದೆ. ಮನೆಮನೆಗೆ ನಳ ಸಂಪರ್ಕ ನೀಡಲಾಗಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿದ್ದರೂ, ವಾಸ್ತವದಲ್ಲಿ ಶೇ. 50ಕ್ಕಿಂತ ಹೆಚ್ಚು ಮನೆಗಳಿಗೆ ನೀರು ತಲುಪುತ್ತಿಲ್ಲ ಎಂಬು ಸ್ಪಷ್ಟ. ಕೆಲವು ಗ್ರಾಮಗಳಲ್ಲಿ ವಾರಕ್ಕೆ ಒಮ್ಮೆ ಮಾತ್ರ ನೀರು ಬರುತ್ತಿದ್ದು, ಮಹಿಳೆಯರು ಕೆರೆ, ಬಾವಿ ನೀರಿಗೆ ಅವಲಂಭಿತರಾಗಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಕಾಮಗಾರಿ ವಿಳಂಬ, ಗುಣಮಟ್ಟದ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ$್ಯ ಕುರಿತು ಗ್ರಾಮಸಭೆಗಳಲ್ಲಿ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವ ಟನೆಗಳೂ ನಡೆದಿವೆ.