ಸದೃಢ ಆರೋಗ್ಯ ಸಮಾಜಕ್ಕೆ ಮಾನಸಿಕ ರೋಗಗಳ ನಿಯಂತ್ರಣ ಅವಶ್ಯಕ: ಬೆನಕಲ್​

ಗದಗ ಪಂಚಾರ ಗವಾಯಿಗಳವರ ಕಲಾ ಮಹಾವಿದ್ಯಾಲಯದಲ್ಲಿ ರೆಡ್​ಕ್ರಾಸ್​ ಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾನಸಿಕ ಕೌಶಲ್ಯಗಳು ಮತ್ತು ಒಂದು ಅವಲೋಕನ ವಿಷಯದ ಕುರಿತು ಶರೀ ಬೆನಕಲ್​  ಉಪನ್ಯಾಸ ನೀಡಿದರು. ಎಂ. ಎ. ಜೋಬಾಳಿ ಪ್ರೊ. ಬಿ. ಕೆ. ಪೂಜಾರ, ಸುಭಾಸ ಓಂಕಾರ, ವಿ. ಎಸ್​. ಹೊಸಮಠ, ಬಿ. ಡಿ. ಕುಂಬಾರ, ಅಂದಾನಯ್ಯ ಬಂಕಾಪೂರಮಠ, ಆರ್​. ಎಚ್​. ತೋಟದ, ಪ್ರೊ. ಎಂ. ಎನ್​. ಹೊಂಬಾಳಿ ಇದ್ದರು.
ಗದಗ ಪಂಚಾರ ಗವಾಯಿಗಳವರ ಕಲಾ ಮಹಾವಿದ್ಯಾಲಯದಲ್ಲಿ ರೆಡ್​ಕ್ರಾಸ್​ ಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾನಸಿಕ ಕೌಶಲ್ಯಗಳು ಮತ್ತು ಒಂದು ಅವಲೋಕನ ವಿಷಯದ ಕುರಿತು ಶರೀ ಬೆನಕಲ್​ ಉಪನ್ಯಾಸ ನೀಡಿದರು. ಎಂ. ಎ. ಜೋಬಾಳಿ ಪ್ರೊ. ಬಿ. ಕೆ. ಪೂಜಾರ, ಸುಭಾಸ ಓಂಕಾರ, ವಿ. ಎಸ್​. ಹೊಸಮಠ, ಬಿ. ಡಿ. ಕುಂಬಾರ, ಅಂದಾನಯ್ಯ ಬಂಕಾಪೂರಮಠ, ಆರ್​. ಎಚ್​. ತೋಟದ, ಪ್ರೊ. ಎಂ. ಎನ್​. ಹೊಂಬಾಳಿ ಇದ್ದರು.
Published on
ವಿಜಯವಾಣಿ ಸುದ್ದಿಜಾಲ, ಗದಗ
ಆಧುನಿಕ ಜೀವನ ಪದ್ಧತಿಯಲ್ಲಿ ಬಹುತೇಕರು ತೀವ್ರತರ ಮಾನಸಿಕ ಖಾಯಿಲೆಗಿಂತ ಸಾಮಾನ್ಯ ಮಾನಸಿಕ ಕಾಯಿಲೆಗಳಾದ ಅಂತರ ಖಿನ್ನತೆ, ಉನ್ಮಾದ ರೋಗ, ಗೀಳು ರೋಗದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ವೈದ್ಯರ ಜತೆ ಇವುಗಳನ್ನು ಆಪ್ತ ಸಮಾಲೋಚನದ ಮೂಲಕ ರೋಗಗಳಿಂದ ಮುಕ್ತಹೊಂದಲು ಸಾಧ್ಯ ಎಂದು ಜಿಲ್ಲಾ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚಕ S. ಬೆನಕಲ್​ ಹೇಳಿದರು.
ನಗರದ ಪಂಚಾರ ಗವಾಯಿಗಳವರ ಕಲಾ ಮಹಾವಿದ್ಯಾಲಯದಲ್ಲಿ ರೆಡ್​ಕ್ರಾಸ್​ ಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಾನಸಿಕ ಕೌಶಲ್ಯಗಳು ಮತ್ತು ಒಂದು ಅವಲೋಕನ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಕೆಲವೊಂದು ರೋಗಗಳು ನಮ್ಮಿಂದಲೇ ಭರಿಸಿಕೊಳ್ಳುತ್ತೇವೆ. ಇದಕ್ಕೆ ಮಧ್ಯಪಾನ ಸೇವನೆಯು ಉತ್ತಮ ಉದಾಹರಣೆ ಆಗಬಲ್ಲದು. ಪ್ರಾರಂಭದಲ್ಲಿ ಮಧ್ಯಪಾನದಿಂದ ಯಾವುದೇ ತೊಂದರೆ ಕಾಣಿಸುವುದಿಲ್ಲ. ಆದರೆ ಅದನ್ನು ಸೇವಿಸಿದಂತೆ ಡೆಕೋವಿನಾ ನರದಲ್ಲಿ ಸತ್ವ ಕಳೆದುಕೊಳ್ಳುತ್ತದೆ. ಇದರಿಂದ ಅನಿವಾರ್ಯವಾಗಿ ದೊಡ್ಡ ಪ್ರಮಾಣದಲ್ಲಿ ಮಧ್ಯವ್ಯಸನಿಗಳಾಗಿ ಇಡೀ ಆರೋಗ್ಯವನ್ನೇ ಹಾಳು ಮಾಡಿಕೊಳ್ಳುವುದನ್ನು ಕಾಣುತ್ತೇವೆ. ಅಲ್ಲದೇ ಮನುಷ್ಯ ಸಮಾಜ ಜೀವಿ ಸಮಾಜಿಕ ಒಪ್ಪಂದಕ್ಕೆ ಒಳಪಟ್ಟಿರುತ್ತಾನೆ. ತನ್ನಲ್ಲಿರುವ ವಿಚಾರಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಬೇಕು. ಮನಸ್ಸಿನಲ್ಲಿ ಯಾವುದೇ ವಿಷಯವನ್ನು ಧೀರ್ಘಾಕ ಕಾಲಿಕವಾಗಿ ಇಟ್ಟುಕೊಂಡರೆ ಮಾನಸಿಕ ವಿಕಲತೆಗೆ ಒಳಗಾಗುವುದನ್ನು ಕಾಣುತ್ತೇವೆ ಎಂದು ಹೇಳಿದರು.
ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಎಂ.ಐ. ಜೋಬಾಳಿ ಮಾತನಾಡಿ ಸದೃಢ ಮನಸ್ಸಿನಿಂದ ಸದೃಢ ಆರೋಗ್ಯ, ಸದೃಢ ಆರೋಗ್ಯದಿಂದ ಸಮೃದ್ಧ ಸಮಾಜ ಅಡಗಿದೆ ಎಂದು ಹೇಳಿದರು.
ಡಾ. ವಿ. ಎ. ನಿಂಗೋಜಿಯವರು ವಿಶ್ವ ಆರೋಗ್ಯ ದಿನಾಚರಣೆಯ ಮಹತ್ವ, ಅದರ ಹುಟ್ಟು ಬೆಳವಣೆಗೆ ಕುರಿತು ಮಾತನಾಡಿದರು. ಪ್ರೊ. ಬಿ. ಕೆ. ಪೂಜಾರ, ಸುಭಾಸ ಓಂಕಾರ, ವಿ. ಎಸ್​. ಹೊಸಮಠ, ಬಿ. ಡಿ. ಕುಂಬಾರ, ಅಂದಾನಯ್ಯ ಬಂಕಾಪೂರಮಠ, ಆರ್​. ಎಚ್​. ತೋಟದ, ಪ್ರೊ. ಎಂ. ಎನ್​. ಹೊಂಬಾಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net