ಧರ್ಮವಂತರಾಗಿ ಬಾಳಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ: ಬೂದೀಶ್ವರ ಶ್ರೀಗಳು

ಗದಗ ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆಯತ್ತಿರುವ ಹರಿಜಾತ್ರೆಯ ಕಾರ್ಯಕ್ರಮವನ್ನು ಬೂದೀಶ್ವರ ಶ್ರೀಗಳು ಉದ್ಘಾಟಿಸಿದರು. ಮಂಜುನಾಥ ಅಬ್ಬಿಗೇರಿ, ಕಿಶನ ಮೆಹರವಾಡೆ, ಲಕ್ಷಿ$್ಮ ಸಿದ್ದಮ್ಮನಹಳ್ಳಿ, ಮಾಧೂಸಾ ಮೆಹರವಾಡೆ, ಶಕುಂತಲಾ ಅಕ್ಕಿ, ಲಕ್ಷಿ$್ಮ ಕಾಕಿ, ಗೀತಾಂಜಲಿ ಗೌಡರ, ಬಾಹುಬಲಿ ಜೈನರ, ಪಂಚಾಕ್ಷರಿ ಅಂಗಡಿ ಇತರರು ಇದ್ದರು.
ಗದಗ ನಗರದ ಒಕ್ಕಲಗೇರಿ ಓಣಿಯಲ್ಲಿ ನಡೆಯತ್ತಿರುವ ಹರಿಜಾತ್ರೆಯ ಕಾರ್ಯಕ್ರಮವನ್ನು ಬೂದೀಶ್ವರ ಶ್ರೀಗಳು ಉದ್ಘಾಟಿಸಿದರು. ಮಂಜುನಾಥ ಅಬ್ಬಿಗೇರಿ, ಕಿಶನ ಮೆಹರವಾಡೆ, ಲಕ್ಷಿ$್ಮ ಸಿದ್ದಮ್ಮನಹಳ್ಳಿ, ಮಾಧೂಸಾ ಮೆಹರವಾಡೆ, ಶಕುಂತಲಾ ಅಕ್ಕಿ, ಲಕ್ಷಿ$್ಮ ಕಾಕಿ, ಗೀತಾಂಜಲಿ ಗೌಡರ, ಬಾಹುಬಲಿ ಜೈನರ, ಪಂಚಾಕ್ಷರಿ ಅಂಗಡಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
ಒಂದು ದಿನ ಹುಟ್ಟು, ಒಂದು ದಿನ ಸಾವು ನಿಶ್ಚಿತ. ಹುಟ್ಟಿದ ಪ್ರತಿ ಜೀವಿಯು ಸಾಯುವುದು ಪ್ರಕೃತಿಯ ನಿಯಮವಾಗಿದೆ. ಹುಟ್ಟು ಮತ್ತು ಸಾವುಗಳ ಮಧ್ಯದಲ್ಲಿ ಬದುಕುವುದು ಪ್ರಸ್ತುತವಾಗಿದೆ ಎಂದು ಹೊಸಳ್ಳಿ ಬೂದೀಶ್ವರ ಶ್ರೀಗಳು ಹೇಳಿದರು.
ನಗರದ ಒಕ್ಕಲಗೇರಿ ಓಣೆಯಲ್ಲಿರುವ ಗ್ರಾಮ ದೇವತೆಗಳಾದ ದ್ಯಾಮವ್ವ ಹಾಗೂ ದುರ್ಗಮ್ಮ ದೇವಿಯರ ಹರಿಜಾತ್ರೆ ಮಹೋತ್ಸವದ ಮೊದಲನೇ ದಿನದ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಭೂಮಿಯಲ್ಲಿ 84 ಲಕ್ಷ ಜೀವ ರಾಶಿಗಳು ಬದುಕಿವೆ ಅವುಗಳಿಗೆ ಕೊಡದೆ ಇರುವ ಅದ್ಭುತ ಶಕ್ತಿ ಮನುಷ್ಯನಿಗೆ ದೊರಕಿದೆ. ಅದೇ ಅರವಿನಶಕ್ತಿ ಆಗಿದೆ. ಅದನ್ನು ಮನುಷ್ಯ ಜನ್ಮಕ್ಕೆ ಮಾತ್ರ ನೀಡಿದ್ದಾನೆ. ಸಂತಶರಣರು ಅರವಿನ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಮನುಷ್ಯನು ತನ್ನ ಜನ್ಮ ಸಾರ್ಥಕವನ್ನು ಮಾಡಿಕೊಳ್ಳಬೇಕಾದರೆ ಹಸಿದವರಿಗೆ ಅನ್ನ, ನೀರು, ಬಟ್ಟೆ ನೀಡಿ ಅವರ ಕಷ್ಟಗಳಿಗೆ ಸ್ಪಂದಿಸಿದರೆ ಜೀವನ ಸಾರ್ಥಕವಾಗುತ್ತದೆ. ಕಷ್ಟದಲ್ಲಿ ನೀನು ಮಾಡಿದ ಧರ್ಮ ಮಾತ್ರ ಮನುಷ್ಯನನ್ನು ಕಾಯುತ್ತದೆ. ಆದ್ದರಿಂದ ಧರ್ಮವಂತರಾಗಿ ಬಾಳಬೇಕು. ಮತ್ತೊಬ್ಬರ ಕಷ್ಟದಲ್ಲಿ ನೆರವಾಗಬೇಕು. ದೇವರು ಪೂಜೆ ನೋಡುವುದಿಲ್ಲ. ಬದಲಾಗಿ ನಾವು ಮಾಡುವ ಉತ್ತಮ ಕಾರ್ಯಗಳನ್ನು ಖಂಡಿತವಾಗಿ ನೋಡುತ್ತಾನೆ. ಧರ್ಮವಂತರಾಗಿ ಬಾಳಿದರೆ ಧರ್ಮ ನಮ್ಮನ್ನು ಕಾಯುತ್ತದೆ. ದುಷ್ಟ ಆಲೋಚನೆಗಳನ್ನು ದೂರ ಮಾಡಿ ಪ್ರವಚನ ಕೇಳಿದರೆ ಹರಿ ಜಾತ್ರೆ ಸಾರ್ಥಕವಾಗುತ್ತದೆ ಎಂದು ಬೂದೀಶ್ವರ ಶ್ರೀಗಳು ಹೇಳಿದರು.
ಡಾ. ಸಿದ್ಧವಿರ ಮಹಾ ಸ್ವಾಮಿಗಳು ಮಾತನಾಡಿ ನಗರದ ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರ್ಗಮ್ಮ ದೇವಿಯರ ಜಾತ್ರೆ, ಹರಿ ಜಾತ್ರಾ ಮಹೋತ್ಸವಗಳು ಹರಕೆಯಿಂದ ಕೂಡಿದ ದಿನವಾಗಿದೆ. ರಕ್ತ ಬೀಜಾಸುರನ ಸಂಹಾರ ಮಾಡಿ ಶ್ರೀದೇವಿ ಜಗಜ್ಜನನಿಯಾದ ದಿನವಾಗಿದೆ ಎಂದರು.
ಗುರುಸಿದ್ದಯ್ಯ ಹಿರೇಮಠ ಮಾತನಾಡಿದರು. ವೇದಿಕೆ ಮೇಲೆ ಆಧ್ಯಾತ್ಮಿಕ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ, ಟ್ರಸ್ಟ ಕಮಿಟಿ ಅಧ್ಯಕ್ಷ ಕೊಟ್ರಪ್ಪ ಕಮತರ, ಜಾತ್ರಾ ಕಮಿಟಿಯ ಕಾರ್ಯಾಧ್ಯಕ್ಷ ಫಕೀರಪ್ಪ ಹೆಬಸೂರ, ಕಾಂಗ್ರೆಸ್​ ಮಹಿಳಾ ಟಕದ ಜಿಲ್ಲಾಧ್ಯಕ್ಷ ನೀಲಮ್ಮ ಬೋಳನವರ ಇತರರು ಇದ್ದರು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net