ಜಿಲ್ಲಾಡಳಿತ 2023ಕ್ಕೂ ಮೊದಲೇ ಜಿಲ್ಲೆಯಲ್ಲಿ 30 ಜನವಸತಿಗಳನ್ನು ಗುರುತಿಸಿತ್ತು. ಈ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವತಿರ್ಸಲು ಮತ್ತು ಹಕ್ಕುಪತ್ರ ವಿತರಿಸಲು 2023ರಲ್ಲಿ ಚಾಲನೆ ನೀಡಿತ್ತು. ಅದರಂತೆ 2023ರಲ್ಲಿ 2404 ಮನೆಗಳನ್ನು ಗ್ರಾಮಠಣಾ ವ್ಯಾಪ್ತಿಗೆ ತಂದು ಹಕ್ಕುಪತ್ರ ನೀಡಲಾಗಿತ್ತು. ಕಳೆದ 2025ನೇ ಸಾಲಿನಲ್ಲಿ 1138 ಮನೆಗಳನ್ನು ಗುರಿತಿಸಿ ಹಕ್ಕುಪತ್ರ ನೀಡಿದೆ. 2025ರಲ್ಲಿ ರೋಣ ತಾಲೂಕಿನಲ್ಲಿ ಮೇಲ್ಮಠ ನೂತನ ಗ್ರಾಮವನ್ನು ಕಂದಾಯ ಗ್ರಾಮವಾಗಿಸಿ 61 ಮನೆಗಳಿಗೆ ಹಕ್ಕುಪತ್ರ ನೀಡಿದೆ. ಅದೇ ರೀತಿ ಗದಗ ತಾಲೂಕಿನಲ್ಲಿ ಅಡವಿಸೋಮಾಪುರ ಗ್ರಾಮದಿಂದ ಜಲಶಂಕರಿಯಲ್ಲಿ 321 ಮನೆ, ಲೆ$್ಮಶ್ವರ ತಾಲೂಕಿನಲ್ಲಿ ಬಸಾಪೂರು ನೂತನ ಗ್ರಾಮದಲ್ಲಿ 78 ಮನೆ, ಮುಂಡರಗಿಯಲ್ಲಿ ಹೊಸ ಹೊಂಬಳ, ಸಿಂಗಟರಾಯನ ಕೆರೆ(ಶಿವಾಜಿ ನಗರ), ಕಕ್ಕೂರು (ಆಶಾಕಿರಣ) ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವತಿರ್ಸಿ 134 ಮನೆ, ಶಿರಹಟ್ಟಿಯಲ್ಲಿ ಹೊಸಳ್ಳಿ, ಶಿವಾಜಿ ನಗರ, ಸೇವಾನಗರ, ಗುಡ್ಡದಪುರಗಳಲ್ಲಿ 538 ಮನೆ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ನಿಡಗುಂದಿಕೊಪ್ಪ, ಬೈರಾಪುರ ಮತ್ತು ನೆಲ್ಲೂರು ಪ್ಯಾಟಿ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿಸಿ 88 ಮನೆಗಳಿಗೆ 2025ರಲ್ಲಿ ಹಕ್ಕುಪತ್ರ ವಿತರಿಸಲಾಗಿತ್ತು. ಮುಂದುವರಿದು ಹಕ್ಕುಪತ್ರ ಜಾಗೃತಿ ಅಭಿಯಾನ ನಂತರ 2026ರಲ್ಲಿ 575 ಕುಟುಂಬಗಳನ್ನು ಗುರುತಿಸಲಾಗಿದೆ.