ರಚನಾತ್ಮಕ ಕಾರ್ಯಗಳಿಗೆ ಗದಗ ಹೆಸರಾಗಿದೆ. ಜಿಲ್ಲೆಯಲ್ಲಿ ರಾಜಕೀಯ ಕಾರ್ಯಕರ್ತರನ್ನು ಸೇವಾ ಕ್ಷೇತ್ರಕ್ಕೆ ತೊಡಗಿಸಿ ಮೊದಲ ಕ್ಷೇತ್ರ ಗದಗ ಜಿಲ್ಲೆಯಾಗಿದೆ. ಸೇವೆ ಮೂಲಕ ಜನರನ್ನು ತಲುಪಿ 100 ದಿನದಲ್ಲಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಮಾದರಿಯಾಗಲು ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಂಕಲ್ಪ ಮಾಡೋಣ ಎಂದು ಶಾಸಕ ಎಚ್. ಕೆ. ಪಾಟೀಲ ಹೇಳಿದರು.
ಸಂಪುಟ ವಿಸ್ತರಣೆ ನಂತರ ಇತ್ತೀಚೆಗೆ ಮೊದಲ ಬಾರಿ ನಗರಕ್ಕೆ ಆಗಮಿಸಿದ ಅವರು, ಪಕ್ಷದ ಕಛೇರಿಯಲ್ಲಿ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿ, ಇಂದಿನ ಸ್ವಾಗತ ಕಾರ್ಯಕ್ರಮ ನನಗೆ ನೈತಿಕ ಧೈರ್ಯ ಮತ್ತು ಸ್ಥೆ$ರ್ಯವನ್ನು ತಂದುಕೊಟ್ಟಿದೆ. ನನಗೆ ಸಚಿವ ಸ್ಥಾನ ಸಿಗದಿರುವುದರಿಂದ ಆಡಳಿತದಲ್ಲಿ ಪ್ರಾಮಾಣಿಕತೆ, ದಕ್ಷತೆ ಪಾರದರ್ಶಕತೆ ಅನುಷ್ಠಾನ ಗೊಳಿಸಬೇಕೆನ್ನುವ ಮನಸ್ಸುಗಳಿಗೆ ನೋವಾಗಿದೆ. ಕಾಂಗ್ರೆಸ್ ಪಕ್ಷ ನನ್ನ ಸಾರ್ವಜನಿಕ ಜೀವನವನ್ನು ಪೋಷಿಸಿ ಬೆಳೆಸಿದೆ. ಸೇವಾ ಕ್ಷೇತ್ರ ಅತ್ಯಂತ ವಿಶಾಲವಾಗಿದೆ. ಮಂತ್ರಿ ಸ್ಥಾನ ಸಿಗದಿದ್ದರೂ ಇತರ ಅವಕಾಶಗಳನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸದಲ್ಲಿ ಶ್ರಮಿಸೋಣ ಎಂದು ಹೇಳಿದರು.
ವಾಸಣ್ಣ ಕುರಡಗಿ, ಚನ್ನವಿರಪ್ಪ ಮಳಗಿ, ಸುಜಾತಾ ದೊಡ್ಡಮನಿ, ಬಸವರಾಜ ಕಡೇಮನಿ, ನೀಲಮ್ಮ ಬೋಳನವರ, ಕೃಷ್ಣಾ ಪರಾಪೂರ, ಶ್ರೀನಿವಾಸ ಹುಯಿಲಗೋಳ, ಬಿ. ಬಿ. ಅಸೂಟಿ ಹಲವರು ಇದ್ದರು.