ಬೆಳಹೋಡ ಶಾಲಾ ಆವರಣದಲ್ಲಿ ಮಕ್ಕಳಿಂದ ಹಸಿರು ಸಂಭ್ರಮ

ಗದಗ ರೋಟರಿ ಕ್ಲಬ್​ ವತಿಯಿಂದ ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಜರುಗಿತು. ಲಲಿತಾ ಚನ್ನಪ್ಪಗೌಡರ, ಮದನಿ ಬಾದಷಾ ಸರ್ವರ, ರಮೇಶ ಮೇಡಿ ಸೇರಿದಂತೆ ಇತರರು ಇದ್ದರು.
ಗದಗ ರೋಟರಿ ಕ್ಲಬ್​ ವತಿಯಿಂದ ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಜರುಗಿತು. ಲಲಿತಾ ಚನ್ನಪ್ಪಗೌಡರ, ಮದನಿ ಬಾದಷಾ ಸರ್ವರ, ರಮೇಶ ಮೇಡಿ ಸೇರಿದಂತೆ ಇತರರು ಇದ್ದರು.
Published on

ರೋಟರಿ ಕ್ಲಬ್​ನಿಂದ ಸಸಿ ನೆಡುವ ಹಾಗೂ ಪಾಲನಾ ಆಂದೋಲನ

ವಿಜಯವಾಣಿ ಸುದ್ದಿಜಾಲ ಗದಗ
ಪರಿಸರ ಸಂರಣೆಯ ಸಂದೇಶವನ್ನು ವಿದ್ಯಾಥಿರ್ಗಳಲ್ಲಿ ಬಿತ್ತುವ ಉದ್ದೇಶದಿಂದ ರೋಟರಿ ಕ್ಲಬ್​ ವತಿಯಿಂದ ತಾಲೂಕಿನ ಬೆಳಹೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಆವರಣದಲ್ಲಿ ಗುರುವಾರ ಸಸಿ ನೆಡುವ ಹಾಗೂ ಪಾಲನಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾಥಿರ್ ವಿದ್ಯಾಥಿರ್ನಿಯರು ಉತ್ಸಾಹದಿಂದ ಸಸಿ ನೆಟ್ಟು, ಹಸಿರು ಪರಿಸರ ನಿರ್ಮಾಣದ ಸಂಕಲ್ಪ ತೊಟ್ಟರು. ಮಕ್ಕಳೊಂದಿಗೆ ರೋಟರಿ ಕ್ಲಬ್​ನ ಪದಾಧಿಕಾರಿಗಳು ಸಸಿ ನೆಟ್ಟು ಪರಿಸರ ಪ್ರಜ್ಞೆಯ ಮಹತ್ವವನ್ನು ಸಾರಿದರು.
ರೋಟರಿ ಕ್ಲಬ್​ ಪರಿಸರೋತ್ಸವದ ಇವೆಂಟ್​ ಚೇರ್ಮನ್​ ಸುರೇಶ ಕುಂಬಾರ ಮಾತನಾಡಿ, ಇದು ಕೇವಲ ಸಸಿ ವಿತರಣಾ ಕಾರ್ಯಕ್ರಮವಲ್ಲ. ಮುಂದಿನ ಪೀಳಿಗೆಗಾಗಿ ಹಸಿರು ಪರಂಪರೆಯನ್ನು ಉಳಿಸುವ ಜನಾಂದೋಲನವಾಗಿದೆ. ನಾವು ಇಂದು ನೆಡುವ ಪ್ರತಿಯೊಂದು ಮರವು ಮುಂದಿನ ತಲೆಮಾರಿಗೆ, ಪರಿಸರಕ್ಕೆ ಬಹು ದೊಡ್ಡ ಶಕ್ತಿ ಎಂದರು.
ರೋಟರಿ ಕ್ಲಬ್​ ಅಧ್ಯ ಡಾ. ಪ್ರದಿಪ ಉಗಲಾಟ ಮಾತನಾಡಿ, ಪರಿಸರ ಸಂರಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದ್ದಾಗಿದೆ. ಮರಗಳನ್ನು ನೆಟ್ಟು ಅವುಗಳನ್ನು ನಿರಂತರವಾಗಿ ಪೋಷಿಸುವ ಮೂಲಕವೇ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ. ಮರ ಕಡಿದರೆ ಮಳೆ ನಿಲ್ಲುತ್ತದೆ, ಮರ ನೆಟ್ಟರೆ ಮಳೆ ಬರುತ್ತದೆ ಎಂಬುದು ಕೇವಲ ಮಾತಲ್ಲ. ಅದರ ಹಿಂದೆ ವೈಜ್ಞಾನಿಕ ಸತ್ಯವಿದೆ. ಮರ ಇಂಗಾಲದ ಡೈಆಕ್ಸಡ್​ ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ನಗರಗಳ ಉಷ್ಣತೆಯನ್ನು ತಗ್ಗಿಸುವಲ್ಲಿಯೂ ಮರಗಳ ಪಾತ್ರ ಅಪಾರ ಎಂದರು.
ಅಧ್ಯತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ ಕೆ.ಎಸ್​. ದಿಂಡಿ ಮಾತನಾಡಿ, ರೋಟರಿ ಕ್ಲಬ್​ನ ಪದಾಧಿಕಾರಿಗಳು ಶಾಲೆಗೆ ಆಗಮಿಸಿ ಮಕ್ಕಳೊಂದಿಗೆ ಸಸಿ ನೆಟ್ಟು ಸಂಭ್ರಮಿಸಿದ್ದಲ್ಲದೆ, ವಿದ್ಯಾಥಿರ್ಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿರುವುದು ಸಂತಸ ತಂದಿದೆ. ಈ ಸಸಿಗಳನ್ನು ಮರಗಳನ್ನಾಗಿ ಬೆಳೆಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಎಸ್​ಡಿಎಂಸಿ ಅಧ್ಯ ಪತ್ತೇಸಾಬ ದೊಡ್ಡಮನಿ, ಸದಸ್ಯ ಪರಸಪ್ಪ ಹುಲಕೋಟಿ, ಅಯ್​ ಶೆಟ್ಟಿ, ಬಿ. ಎಂ. ಸೈಯದ್​, ಮಂಜುನಾಥ ಜಕ್ಕಲಿ, ರುಕ್ಮಿಣಿ ಗುಳಗಂದಿ, ಸುಜಾತಾ ಧೋಳ, ಸುಮಾ ತಿಪ್ಪರಡ್ಡಿ ಹಲವರು ಇದ್ದರು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net