ಗದಗ: ಜಿಲ್ಲೆಯಲ್ಲಿ 2.13 ಲಕ್ಷ ಗ್ರಾಪಂ ವ್ಯಾಪ್ತಿಯ ಆಸ್ತಿಗಳಿಗೆ ಇಸ್ವತ್ತು

ಗದಗ
ಗದಗ
Published on
ಶಿವಾನಂದ ಹಿರೇಮಠ ಗದಗ
ನಗರ ಸ್ಥಳಿಯ ಸಂಸ್ಥೆಯ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಅನೂಮೋದನೆ ಇಲ್ಲದ ಬಡವಾನೆಗಳಲ್ಲಿನ ಆಸ್ತಿಗಳಿಗೆ, ಅನಧಿಕೃತ ನಿವೇಶನ, ಕಟ್ಟಡಗಳಿಗೆ ಈ ಹಿಂದೆ ಬಿ-ಖಾತಾ ನೀಡುವ ಯೋಜನೆ ಜಾರಿ ತಂದ್ದಿದ್ದ ರಾಜ್ಯ ಸರ್ಕಾರ, ಅದೇ ರೀತಿಯ ಯೋಜನೆಯನ್ನೂ ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಪಂ ವ್ಯಾಪ್ತಿಗೂ ವಿಸ್ತರಿಸುವ ಇ-ಸ್ವತ್ತು(11ಎ ಮತ್ತು 11ಬಿ) ನಿಡುವ ಯೋಜನೆಯನ್ನು ಸೋಮವಾರದಿಂದ ಜಾರಿ ತಂದಿದೆ. ಇದರನ್ವಯ ಜಿಲ್ಲೆಯಲ್ಲಿ ಗ್ರಾಮಠಾಣಾ ಹೊರಗಿನ ಅಂದಾಜು 2.13 ಲಕ್ಷ ಅನಧೀಕೃತ ಆಸ್ತಿಗಳಿಗೆ ಇಖಾತಾ ನೀಡುವ ಪ್ರಕ್ರಿಯೆಗೆ ಜಿಲ್ಲೆಯಲ್ಲೂ ಸದಸ್ಯದಲ್ಲೇ ಚಾಲನೆ ಸಿಗಲಿದೆ.
ಹಲವು ವರ್ಷಗಳಿಂದ ಗ್ರಾಮಠಾಣಾ(ಜನವಸತಿ) ವ್ಯಾಪ್ತಿಯಿಂದ ಹೊರಗಡೆ ಮನೆ, ವಾಣೀಜ್ಯ ಕಟ್ಟಡ, ಶಿಕ್ಷಣ ಸಂಸ್ಥೆ, ದತ್ತಿ ಕೇಂದ್ರಗಳು ಸೇರಿದಂತೆ ಇತರೆ ಆಸ್ತಿಗಳ ಸರ್ಕಾರದಿಂದ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿದ್ಯುತ್​ ಮುಂತಾದ ಸೌಲಭ್ಯಗಳನ್ನು ಪಡೆಯುತ್ತಿರುವ ಆಸ್ತಿಗಳು ಈ ಯೋಜನೆಗೆ ಒಳಪಡುತ್ತವೆ. ಸ್ಥಳಿಯ ಗ್ರಾಪಂ ನಿಂದ ಅನುಮೋದನೆ ಇಲ್ಲದ ಕಟ್ಟಡಗಳಿಗೆ, ಆಧಿಭೋಗ ಪ್ರಮಾಣಪತ್ರ ಪಡೆಯದ ನಿವೇಶನಗಳಿಗೆ ಇಖಾತಾ ನೀಡುವ ಯೋಜನೆ ಇದಾಗಿದೆ. ಇಖಾತಾ ನೀಡುವ ಯೋಜನೆಯಿಂದ ಜಿಲ್ಲೆಯ ಗ್ರಾಪಂಗಳಿಗೆ ತೆರಿಗೆ ರೂಪದಲ್ಲಿ ಆಥಿರ್ಕ ಸಂಪನ್ಮೂಲ ಹರಿದು ಬರಲಿದೆ. ವಿವಿಧ ರೀತಿಯ ಆಸ್ತಿಗಳಿಗೆ ವಿವಿಧ ರೀತಿಯ ತೆರಿಗೆಗಳನ್ನು ನಿಗದಿ ಪಡಿಸಲಾಗಿದ್ದು, ಇಂತಹ ಆಸ್ತಿಗಳಿಗೆ ಇಖಾತಾ ಪಡೆಯಲು ಎರಡು ಪಟ್ಟು ತೆರಿಗೆ ಪಾವತಿಸಿ ಇಖಾತಾ ಪಡೆಯಬಹುದು. ಪ್ರಮುಖವಾಗಿ ಇಖಾತಾ ಪಡೆಯಲು ಸಲ್ಲಿಸಿದ ಅಜಿರ್ಗಳನ್ನು 15 ದಿನಗಳಲ್ಲಿ ಸ್ಥಳಿಯ ಗ್ರಾಪಂ ವಿಲೇವಾರಿ ಮಾಡದೇ ಇದ್ದರೆ, ತಂತ್ರಾಂಶದಲ್ಲಿ ಇರುವ ಅಜಿರ್ಯು ತನ್ನಿಂತಾನೆ ಡೀಮ್ಡ್​ ಮಾನ್ಯತೆ ದೊರೆಯುತ್ತದೆ. ಅಜಿರ್ದಾರರು ಆನ್​ಲೈನ್​ ಮೂಲಕ ತೆರಿಗೆ ಪಾವತಿಸಿ ಇಖಾತಾ ಪಡೆಯಬಹುದು.
ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಗದಗ, ರೋಣ ಮತ್ತು ಗಜೇಂದ್ರಗಡ ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಆಸ್ತಿಗಳಿಗೆ ಇನ್ನೂ ಇಖಾತಾ ನೀಡಿಲ್ಲ. ಶೇ. 50 ರಷ್ಟು ಅಧಿಕ ಆಸ್ತಿಗಳು ಗ್ರಾಮಠಾಣಾ ವ್ಯಾಪ್ತಿಯ ಹೊರಗಡೆ ನಿಮಿರ್ಸಲಾಗಿದೆ. ಸರ್ಕಾರದ ಮೂಲಬೂತ ಸೌಕರ್ಯಗಳನ್ನು ಪಡೆಯುತ್ತಿವೆ. ಸರ್ಕಾರ ನಿಗದಿಪಡಿಸಿದ ತೆರಿಗೆ, ಶುಲ್ಕ ಪಾವತಿಸಿ ಇಖಾತಾ ಪಡೆಯಬಹುದಾಗಿದೆ.
ಕಾನೂನು ತಿದ್ದುಪಡಿ?
ಅನಧೀಕೃತ ನಿವೇಶ, ಕಟ್ಟಡಗಳಿಗೆ 11ಎ ಮತ್ತು 11 ಬಿ ಇಸ್ವತ್ತು ವಿತರಿಸುವ ಸಲುವಾಗಿ 2025ರಲ್ಲಿ ರಾಜ್ಯ ಸರ್ಕಾರವು ತೆರಿಗೆ ಮತ್ತು ಇಸ್ವತ್ತು ನಿಯಮಗಳನ್ನು ತದ್ದುಪಡಿ ತಂದಿದೆ. ಪ್ರಮುಖವಾಗಿ ಸರ್ಕಾರಿ, ಅರಣ್ಯ ಪ್ರದೇಶ, ಸರ್ಕಾರದ ನಿಯಂತ್ರಣದಲ್ಲಿ ಮತ್ತು ಒಡೆತನದಲ್ಲಿ ಇರುವ ಯಾವುದೇ ಜಮೀನಿಗೆ ಹೊಸ ಕಾನೂನು ಅನ್ವಯಿಸುವುದಿಲ್ಲ. ಇವುಗಳನ್ನು ಹೊರತುಪಡಿಸಿ ಇನ್ನೂಳಿಗೆ ಆಸ್ತಿಗಳಿಗೆ ತೆರಿಗೆ ಸಂಗ್ರಹಿಸಿ ಈಸ್ವತ್ತು ನೀಡಬಹುದಾಗಿದೆ.
ಯಾವ ಆಸ್ತಿಗಳಿಗೆ ಎಷ್ಟು ಶುಲ್ಕ:
* ಸರ್ಕಾರಿ ಕಟ್ಟಡ ಮತ್ತು ಖಾಲಿ ನಿವೇಶನಗಳಿಗೆ ತೆರಿಗೆ ಮೌಲ್ಯದ ಶೇ. 25 ರಷ್ಟು ಸೇವಾ ಶುಲ್ಕ ವಿಧಿಸಬೇಕು
* ವಾಸದ ಮನಯಲ್ಲಿ ನಡೆಸುವ ಕೈಮಗ್ಗ, ಗುಡಿ ಕೈಗಾರಿಕೆ, ಕೃಷಿ ಆಧಾರಿತ ಉತ್ಪಾದಣಾ ಚಟುವಟಿಕೆಗಳಿಗೆ ವಸತಿ ಕಟ್ಟಡಕ್ಕೆ ವಿಧಿಸುವ ತೆರಿಗೆ ದರದಲ್ಲಿ ಶೇ. 50 ರಷ್ಟು ತೆರಿಗೆ ವಿಧಿಸಿ ಈ&ಖಾತಾ ನೀಡುವುದು.
* ಆಸ್ಪತ್ರೆಗಳು, ಶುಕ್ಷಣ ಸಂಸ್ಥೆಗಳು, ನಿರ್ಗತಿಕರಿಗೆ, ವೃದ್ಧರಿಗೆ ಆಶ್ರಯ ನಿಡುವ ಸಂಸ್ಥೆಗಳಿಗೆ ಸಕ್ಷಮ ಪ್ರಾಧಿಕಾರದ ಅನುಮತಿಯೊಂದಿಗೆ ಶುಲ್ಕದಲ್ಲಿ ವಿನಾಯಿತಿ ನೀಡಿ ಇಸ್ವತ್ತು ವಿತರಿಸುವುದು.
ಆಸ್ತಿ ಬದಲಾವಣೆಗೆ ಮುದ್ರಾಂಕ ಶುಲ್ಕ ಶೇ.2 ರಷ್ಟು ಮತ್ತು ನೋಂದಣಿ ರಹಿತ ಆಸ್ತಿ ಬದಲಾವಣೆಗಳಿಗೆ 1000 ರೂ. ಶುಲ್ಕ ನಿಗದಿ ಮಾಡಿ, ಖಾತಾ ವಿತರಿಸುವುದು.
ಗ್ರಾಮಠಾಣಾ ಅಂದರೇನು?
ಸ್ವಾತಂತ್ರ್ಯ ಪೂರ್ವದ ಬ್ರೀಟಿಷ ಆಳ್ವಿಕೆಯಲ್ಲಿ ಜಮೀನುಗಳನ್ನು(ಹೊಲ/ಗದ್ದೆ) ಸಮೀೆ ನಡೆದ ಸರ್ವೆ ನಂಬರ್​ ನೀಡಲಾಗಿತ್ತು. ಜನವಸತಿಗಳನ್ನು ಸಮೀೆ ನಡೆಸಿರಲಿಲ್ಲ. ಈ ಜನವಸತಿಗಳನ್ನು ಗ್ರಾಮಠಾಣಾ ಎಂದು ಸರ್ಕಾರಿ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಎಲ್ಲ ಗ್ರಾಮ ವ್ಯಾಪ್ತಿಗಳು ಗ್ರಾಮಠಾಣಾ ವ್ಯಾಪ್ತಿ ಮೀರಿ ಬೆಳೆದಿವೆ. ಗ್ರಾಮಠಾಣಾ ವ್ಯಾಪ್ತಿ ಮೀರಿ ಬೆಳೆದ ಕೆಲ ಪ್ರದೇಶಗಳಲ್ಲಿ ಭೂಪರಿವರ್ತನೆ ಮೂಲಕ ಸ್ಥಳಿಯ ಗ್ರಾಮ ಪಂಚಾಯಿತಿಗಳಿಂದ ಇಖಾತಾ ಪಡಯಲಾಗಿದೆ. ಪ್ರಸ್ತುತವಾಗಿ ಭೂಪರಿವರ್ತನೆ ಮಾಡಬೇ ಕಟ್ಟಿದ ಮನೆ ಹಾಗೂ ಇತರೆ ಕಟ್ಟಡಗಳಿಗೆ ಇಸ್ವತ್ತು ನೀಡುವ ಯೋಜನೆ ಸೋಮವಾರದಿಂದ ಜಾರಿ ಮಾಡಲಾಗಿದೆ.
ಹೊಸ ನಿಯಮದ ವಿಶೇಷತೆ ಏನು?
ಗ್ರಾಪಂ ವ್ಯಾಪ್ತಿಯಲ್ಲಿ ಈ ಮೊದಲು ಇಸ್ವತ್ತು ನೀಡುವ ಸಂದರ್ಭದಲ್ಲಿ ಗ್ರಾಪಂ ಸೆಕ್ರೆಟರಿ, ಪಿಡಿಓಗಳು ಮಾತ್ರ ದಾಖಲೆ ಪರಿಶೀಲಿಸಿ ಅನುಮತಿ ನೀಡುತ್ತಿದ್ದರು. ಪ್ರಸ್ತುತ ಹೊಸ ನಿಯಮದಲ್ಲಿ ಸೆಕ್ರೆಟರಿ, ಪಿಡಿಓ ಜತೆಗೆ ಗ್ರಾಪಂ ಅಧ್ಯಕ್ಷ ಮತ್ತು ತಾಪಂ ಇಓಗಳು ದಾಖಲೆ ಪರಿಶೀಲಿಸಬೇಕು. 15 ದಿನಗಳಲ್ಲಿ ದಾಖಲೆ ಪರಿಶೀಲಿಸಿ ಅಜಿರ್ ವಿಲೇರಿ ಮಾಡದಿದ್ದರೆ ತಂತ್ರಾಂಶದಲ್ಲಿ ತನ್ನಿಂತಾನೆ ಡೀಮ್ಡ್​ ಅನುಮತಿಯೊಂದಿಗೆ ಅಜಿರ್ ಸಕ್ರಮಗೊಂಡು, ಅಜಿರ್ದಾರ ಆನ್​ಲೈನ್​ ಖಾತಾ ಪಡೆಯಬಹುದಾಗಿದೆ.
ಡಿ.1 ರಿಂದ ರಾಜ್ಯಾದ್ಯಂತ ಯೋಜನೆ ಜಾರಿ ಆಗಿದೆ. ಜಿಲ್ಲೆಯಲ್ಲೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸ್ತಿಗಳ ಗುರುತಿಸುವಿಕೆ ಮತ್ತು ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕ ಅಳವಡಿಸಿಕೊಳ್ಳಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿನ ಜನರಿಗೆ ನೂತನ ಯೋಜನೆ ಅನುಕಳ ಆಗಲಿದೆ. ಮನೆ, ಕಟ್ಟಡಗಳಿಗೆ ಅಧಿಕೃತ ದಾಖಲೆ ಲಭಿಸಲಿದೆ.
ಸಿ.ಎನ್​. ಶ್ರೀಧರ, ಜಿಲ್ಲಾಧಿಕಾರಿ, ಗದಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net