ಯುವ ಪ್ರತಿಭೆಗಳ ಬೆಳೆಸಲು ಕ್ರೀಡಾ ಸಾಮಗ್ರಿ ಅಗತ್ಯ: ವಿ. ಎಚ್. ಕೊಳ್ಳಿ

ಜಿಲ್ಲೆಯ ಹುಲಕೋಟಿ ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಅಪ್ಪಣ್ಣ ಹಂಜೆ ಮಾತಾಡಿದರು. ಪ್ರೊ. ವಿ.ಎಚ್. ಕೊಳ್ಳಿ, ಡಾ. ಸಾರಿಕಾ ಪಾಟೀಲ, ಡಾ. ಲಕ್ಷ್ಮಣ ಮುಳಗುಂದ ಇತರರು ಇದ್ದರು.
ಜಿಲ್ಲೆಯ ಹುಲಕೋಟಿ ಸರ್ಕಾರಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಅಪ್ಪಣ್ಣ ಹಂಜೆ ಮಾತಾಡಿದರು. ಪ್ರೊ. ವಿ.ಎಚ್. ಕೊಳ್ಳಿ, ಡಾ. ಸಾರಿಕಾ ಪಾಟೀಲ, ಡಾ. ಲಕ್ಷ್ಮಣ ಮುಳಗುಂದ ಇತರರು ಇದ್ದರು.
Published on
ಗದಗ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಕ್ರೀಡೆಗೆ ಮಹತ್ವದ ಪಾತ್ರವಿದೆ. ಇದು ದೈಹಿಕ ಆರೋಗ್ಯದ ಜೊತೆಗೆ ಶಿಸ್ತು, ನಾಯಕತ್ವ ಮತ್ತು ತಂಡ ಮನೋಭಾವವನ್ನು ಬೆಳೆಸುತ್ತದೆ ಎಂದು ಕೆಎಸ್‌ಎಸ್ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ಎಚ್. ಕೊಳ್ಳಿ ಹೇಳಿದರು.

ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಾನ ಮಾಡಿದ ವಾಲಿಬಾಲ್ ಕಿಟ್‌ ಗಳ ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಯುವ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಉಪಯುಕ್ತವಾದ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅವುಗಳಲ್ಲಿ ಕ್ರೀಡಾ ಸಾಮಗ್ರಿಗಳ ದಾನವೂ ಒಂದಾಗಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಉಪನ್ಯಾಸಕ ಡಾ. ಅಪ್ಪಣ್ಣ ಹಂಜೆ ಮಾತನಾಡಿ, . ಅಚ್ಯುತ ಸಮಂತ ಅವರು 2013ರ ಮೇ 17ರಂದು ಸ್ಥಾಪಿಸಿರುವ ಆರ್ಟ್ ಆಫ್ ಗಿವಿಂಗ್ ಫೌಂಡೇಶನವು ಸಮಾಜದಲ್ಲಿ ಪ್ರೀತಿ, ಕರುಣೆ, ದಯೆ, ಸಹಾನುಭೂತಿ, ಶಾಂತಿ, ಸಂತೋಷವನ್ನು ಉತ್ತೇಜಿಸುವತ್ತ ಗಮನಹರಿಸಿ ಸ್ಥಳೀಯ ಸ್ವಯಂ ಸೇವಕರು, ಎನ್‌ಜಿಒಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಸಂಸ್ಥೆ ಇಂದು ಕಾಲೇಜಿಗೆ ಫುಟ್ಬಾಲ್ ಕಿಟ್ ಗಳನ್ನು ನೀಡಿದೆ. ಫೌಂಡೇಶನ್ ಸಹಾಯವನ್ನು ನಾವು ಸದಾಕಾಲ ಸ್ಮರಿಸುತ್ತೇವೆ ಮತ್ತು ಅದರ ಚಟುವಟಿಕೆಗಳಿಗೆ ನಾವೂ ಕೈಜೋಡಿಸುತ್ತೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ. ಸುಧಾ ಕೌಜಗೇರಿ ಮಾತನಾಡಿ, ಸಾರ್ವಕಾಲಿಕ ಜೀವನ ಮೌಲ್ಯವಾದ ದಾನವು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಯೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಇದರಿಂದ ಬಹುತ್ವ ಸಮಾಜದಲ್ಲಿ ಏಕತೆ, ಸಾಮರಸ್ಯ, ಭಾವೈಕ್ಯತೆ ಮತ್ತು ಸಮತೋಲನ ಕಾಪಾಡಲು ಸಾಧ್ಯವಾಗಿದೆ. ಫೌಂಡೇಶನ್‌ದ ಪದಾಧಿಕಾರಿಗಳು, ಸ್ವಯಂ ಸೇವಕರು ಕಾಲೇಜಿನ ಅಭಿನಂದನೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಡಾ. ಸಾರಿಕಾ ಪಾಟೀಲ, ಪ್ರೊ. ಡಾ. ಲಕ್ಷಣ ಮುಳಗುಂದ, ಭೀಮೇಶ ಇತರರು ಇದ್ದರು.




ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net